ಹೆಸರಾಂತ ಅನುಪಮಾ ಧಾರಾವಾಹಿ-ಕಿರುತೆರೆ ನಟ ನಿತೇಶ ಪಾಂಡೆ ನಿಧನ

ಮುಂಬೈ: ಜನಪ್ರಿಯ ನಟ ನಿತೇಶ ಪಾಂಡೆ (51) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಕಿರುತೆರೆ ಉದ್ಯಮ ಕೆಲವೇ ದಿನಗಳಲ್ಲಿ ಅದು ಮೂರು ಉತ್ತಮ ನಟರನ್ನು ಕಳೆದುಕೊಂಡಿದೆ. ಆದಿತ್ಯ ಸಿಂಗ್ ರಜಪೂತ ಮತ್ತು ವೈಭವಿ ಉಪಾಧ್ಯಾಯ ಅವರ ನಂತರ ಈಗ ಅನುಪಮಾ ಧಾರವಾಹಿ ನಟ ನಿತೇಶ ಪಾಂಡೆ ನಿಧನರಾಗಿದ್ದಾರೆ.
ರೂಪಾಲಿ ಗಂಗೂಲಿಯವರ ಹೆಸರಾಂತ ಹಿಂದಿ ಧಾರವಾಹಿ ಅನುಪಮಾದಲ್ಲಿ ಧೀರಜ್ ಕಪೂರ್ ಪಾತ್ರದಲ್ಲಿ ಅವರು ಹೆಸರುವಾಸಿಯಾಗಿದ್ದರು. ನಿತೇಶ್ ಅವರು ಮುಂಬೈನ ಇಗತ್ಪುರಿಯಲ್ಲಿ ತಮ್ಮ 51 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ನಿತೇಶ ಪಾಂಡೆ 1990 ರಲ್ಲಿ ರಂಗಭೂಮಿ ಪ್ರವೇಶ ಮಾಡಿದರು. 1995 ರಲ್ಲಿ, ಅವರು ತೇಜಸ್ ಚಿತ್ರದಲ್ಲಿ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದರು. ನಂತರ ಮಂಜಿಲೀನ್ ಅಪಾನಿ ಅಪಾನಿ, ಅಸ್ತಿತ್ವ…ಏಕ್ ಪ್ರೇಮ್ ಕಹಾನಿ, ಸಾಯಾ, ಜುಸ್ತಜೂ ಮತ್ತು ದುರ್ಗೇಶ್ ನಂದಿನಿಯಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಓಂ ಶಾಂತಿ ಓಂ ಮತ್ತು ಬದಾಯಿ ದೋ , ದಬಾಂಗ್ 2′ ಸೇರಿದಂತೆ ಅನೇಕ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲ, ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ಸ್ ಎಂಬ ಹೆಸರಿನ ಸ್ವತಂತ್ರ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಖೋಸ್ಲಾ ಕಾ ಘೋಸ್ಲಾದಲ್ಲಿ ಅವರ ಅಭಿನಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರು ಕೊನೆಯದಾಗಿ ಅನುಪಮಾ ಮತ್ತು ಪ್ಯಾರ್ ಕಾ ದರ್ದ್ ಹೈ ಮೀಠಾ ಮೀಠಾ ಪ್ಯಾರಾ ಪ್ಯಾರಾ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ 25 ವರ್ಷಗಳಿಂದ ಅವರು ಭಾರತೀಯ ದೂರದರ್ಶನದಲ್ಲಿ ಪರಿಚಿತ ಮುಖವಾಗಿದ್ದರು.
ನಿತೇಶ್ ಅವರು ಉತ್ತರಾಖಂಡ್‌ನ ಅಲ್ಮೋರಾ ಕುಮಾನ್‌ನಿಂದ ಬಂದವರು ಮತ್ತು ನಟಿ ಅರ್ಪಿತಾ  ಅವರನ್ನು 2003 ರಲ್ಲಿ ವಿವಾಹವಾದರು. ನಿತೇಶ್ ಈ ಹಿಂದೆ ನಟಿ ಅಶ್ವಿನಿ ಕಲ್ಸೇಕರ್ ಅವರನ್ನು ಮದುವೆಯಾಗಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement