ಈವರೆಗೆ 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ. ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಿದ ಎಸ್‌ಬಿಐ

ನವದೆಹಲಿ: ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರದ ನಂತರ, ಭಾರತದ ಅತಿದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 14,000 ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ದಿನೇಶಕುಮಾರ ಖಾರಾ ಪ್ರಕಟಿಸಿದ್ದಾರೆ.
“ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ.ಗಳ ನೋಟುಗಳನ್ನು ಖಾತೆಗಳಿಗೆ ಠೇವಣಿಯಾಗಿ ಸ್ವೀಕರಿಸಲಾಗಿದೆ, 3,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಶಾಖೆಯ ಜಾಲದ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ. ನಾವು ಸಾಮಾನ್ಯವಾಗಿ ಮಾರುಕಟ್ಟೆಯ 20% ಅನ್ನು ಹೊಂದಿದ್ದೇವೆ ಎಂದು ಖಾರಾ ಹೇಳಿದ್ದಾರೆ.
2,000 ರೂ.ಗಳ ನೋಟುಗಳು ಇನ್ನೂ ಕಾನೂನು ಕರೆನ್ಸಿಯಾಗಿ ಅರ್ಹತೆ ಹೊಂದಿದೆ ಮತ್ತು ಸಾಕಷ್ಟು ವಿನಿಮಯ ವಿಂಡೋ ಲಭ್ಯವಿದೆ. ಹಾಗಾಗಿ ಇದು ಕಾನೂನುಬದ್ಧ ಟೆಂಡರ್ ಆಗಿರುವುದು ಜನರ ಆತಂಕವನ್ನು ದೂರ ಮಾಡಿದೆ ಎನ್ನುತ್ತಾರೆ ಖಾರಾ.
ಮೇ 19 ರಂದು, ಆರ್‌ಬಿಐ (RBI) ಎಲ್ಲಾ 2,000 ರೂಪಾಯಿಗಳ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅನಿರೀಕ್ಷಿತ ನಿರ್ಧಾರವನ್ನು ತೆಗೆದುಕೊಂಡಿತು. 2,000 ರೂ. ನೋಟುಗಳನ್ನು ಇನ್ನೂ ಪಾವತಿಯಾಗಿ ಸ್ವೀಕರಿಸಲಾಗುತ್ತದೆ.
ಎಲ್ಲಾ 500 ರೂ. ಮತ್ತು 1,000 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳ ಅಮಾನ್ಯೀಕರಣದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ಪೂರೈಸುವ ಸಲುವಾಗಿ ನವೆಂಬರ್ 2016 ರಲ್ಲಿ 2,000 ರೂ.ಗಳ ನೋಟನ್ನು ಪರಿಚಯಿಸಲಾಯಿತು.

ಪ್ರಮುಖ ಸುದ್ದಿ :-   ಟರ್ಕಿಶ್ ಡ್ರೋನ್‌ ಸೇರಿದಂತೆ ಪಾಕಿಸ್ತಾನದ 400 ಡ್ರೋನ್ ಗಳನ್ನು ಉಡೀಸ್ ಮಾಡಿದ ಭಾರತದ ಸೇನೆ...!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement