ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆಯೊಬ್ಬರು ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ವರದಿಯಾಗಿದೆ.
ಮೇ 25 ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ಭೀಮಾಶಂಕರ ಆರ್ಯ ಅವರಿಗೆ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಮಹಿಳೆ ಪರಿಚಯವಾಗಿದ್ದು, ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಆದರೆ, ಅವಳಿಗೆ ಈ ಮೊದಲು ಮದುವೆಯಾಗಿತ್ತು ಎಂದು ಗೊತ್ತಾದ ನಂತರ ವಿಜಯ್ ಅವಳನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಕುಪಿತಗೊಂಡ ಮಹಿಳೆ ಮಾತನಾಡಬೇಕು ಎಂದು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ, ವಿಜಯಶಂಕರಗೆ ಗಂಭೀರ ಗಾಯಗೊಂಡಿದ್ದಾನೆ.
ಬಿಯರ್ ಬಾಟಲ್‌ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ನಂತರ ರೂಮಿನೊಳಗೆ ವಿಜಯ ತೀವ್ರವಾಗಿ ಗಾಯಗೊಂಡು ಕಿರುಚಾಡುವುದನ್ನು ಮನೆ ಮಾಲೀಕ ಕೇಳಿಸಿಕೊಂಡು ಓಡಿ ಹೋಗಿ ಭೀಮಶಂಕರನನ್ನು ರಕ್ಷಿಸಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾನೆ.
ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗಳಾಗಿದ್ದು, ಈ ಬಗ್ಗೆ ಭೀಮಾಶಂಕರ, ಮಹಿಳೆ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಎಫ್ಐಆರ್ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ