ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತು ಅವಳನ್ನೇ ವಿವಾಹವಾದ ವರ…!!

ಪಾಲಿ : ಒಂದು ಅಸಾಮಾನ್ಯ ಪ್ರಕರಣವೊಂದರಲ್ಲಿ ವರನು ಮದುವೆ ಮಂಟಪದಿಂದ ಓಡಿ ಹೋದ ತನ್ನ ವಧುವಿಗಾಗಿ 13 ದಿನಗಳವರೆಗೆ ಮಂಟಪದಲ್ಲೇ ಕಾದು ಕುಳಿತು ನಂತರ ಅವಳನ್ನೇ ಮದುವೆಯಾಗಿದ್ದಾನೆ…!
ವಧು ತನ್ನ ಮದುವೆಗಿಂತ ಸ್ವಲ್ಪ ಮೊದಲು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು ಮತ್ತು ಅಂತಿಮವಾಗಿ 13 ದಿನಗಳ ನಂತರ ತನಗೆ ನಿಶ್ಚಯವಾಗಿದ್ದ ಅದೇ ವರನನ್ನು ಅದೇ ಮದುವೆ ಮಂಟಪದಲ್ಲಿ ಮದುವೆಯಾದಳು…! ಈ ಅಸಾಮಾನ್ಯ ಘಟನೆ ರಾಜಸ್ಥಾನದ ಸೈನಾ ಗ್ರಾಮದಲ್ಲಿ ನಡೆದಿದ್ದು, ವಿವಾಹ ಸಮಾರಂಭಕ್ಕೆ ಕೆಲವೇ ನಿಮಿಷಗಳ ಮೊದಲು ವಧು ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಮೇ 3ರಂದು ಬೆಳಗ್ಗೆ ವರನು ವಧುವಿನ ಮನೆಗೆ ಮದುವೆ ಸಮಾರಂಭಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆದರೆ ತಾಳಿಕಟ್ಟುವ ಕೆಲವು ನಿಮಿಷಗಳ ಮೊದಲು, ವಧು ತಾನು ಅಸ್ವಸ್ಥಳಾಗಿರುವುದಾಗಿ ಹೇಳಿಕೊಂಡಳು. ತನಗೆ ಹೊಟ್ಟೆ ನೋವು ಮತ್ತು ವಾಕರಿಕೆ ಬರುತ್ತಿದೆ ಎಂದು ಹೇಳುತ್ತಾ ತನ್ನ ಮನೆ ಬಳಿಯ ಟ್ಯಾಂಕ್ ಹಿಂದೆ ಹೋಗಿದ್ದಳು.

ಎಷ್ಟು ಹೊತ್ತಾದರೂ ಆಕೆ ಸಮಾರಂಭಕ್ಕೆ ಬಾರದೇ ಇದ್ದಾಗ ಕುಟುಂಬಸ್ಥರು ಆಕೆಯನ್ನು ಹುಡುಕತೊಡಗಿದರು. ಅವಳು ತನ್ನ ಸೋದರಸಂಬಂಧಿಯೊಂದಿಗೆ ಓಡಿಹೋಗಿದ್ದಾಳೆ ಎಂದು ಅವರು ನಂತರ ಮನೆಯವರಿಗೆ ಗೊತ್ತಾಯಿತು.
ಆದರೆ ಈ ಸುದ್ದಿ ತಿಳಿದ ನಂತರ, ಆದರೆ ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳವರೆಗೆ ಮದುವೆ ಮಂಟಪದಲ್ಲೇ ಕುಳಿತಿದ್ದ. ಈ ಸಮಯದಲ್ಲಿ ವರ ತನ್ನ ಸಾಂಪ್ರದಾಯಿಕ ಪೇಟಾ ತೆಗೆದುಹಾಕಲು ನಿರಾಕರಿಸಿದ್ದಾನೆ.
ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ನಡೆಸಿದ್ದರು. ರಾಜಸ್ಥಾನ ಪೊಲೀಸರು ಮೇ 15ರಂದು ವಧುವನ್ನು ಪತ್ತೆಹಚ್ಚಿದ್ದಾರೆ. ನಂತರ ಮಗಳ ಮನಸ್ಸು ಒಲಿಸುವಲ್ಲಿ ಆಕೆಯ ಪೋಷಕರು ಯಶಸ್ವಿಯಾದರು. ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿತು.
ವಧು ಹಿಂತಿರುಗಿ ಬಂದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ವಿವಾಹದ ನಂತರ ವಧು-ವರ ಸಂತಸವಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement