ಐಬಿಪಿಎಸ್ ನಿಂದ 8594 ಆರ್‌ಆರ್‌ಬಿ ಬ್ಯಾಂಕ್ ಹುದ್ದೆಗಳಿಗೆ ಅಧಿಸೂಚನೆ : ಅರ್ಜಿ ಸ್ವೀಕಾರ ಆರಂಭ

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(IBPS)ಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಶ್ರೇಣಿಯ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ, ಸಾಮಾನ್ಯ ನೇಮಕಾತಿ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಪರೀಕ್ಷೆಗೆ ನೋಟಿಫಿಕೇಶನ್‌ ಪ್ರಕಟಿಸಿದೆ.
ಗ್ರೂಪ್‌ ಎ (ಸ್ಕೇಲ್‌ -1, 2, 3), ಗ್ರೂಪ್‌ ಬಿ ಹುದ್ದೆಗಳನ್ನು ಆರ್‌ಆರ್‌ಬಿಗಳಲ್ಲಿ ಪ್ರಮುಖವಾಗಿ ನೇಮಕ ಮಾಡಲು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಐಬಿಪಿಎಸ್‌ (IBPS) ಅಧಿಕೃತ ವೆಬ್‌ಸೈಟ್‌ ibps.in ನಲ್ಲಿ ಜೂನ್ 1 ರಿಂದ ನೋಂದಣಿ ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜೂನ್ ಆಗಿರುತ್ತದೆ. ಆಗಸ್ಟ್‌ – ಸೆಪ್ಟೆಂಬರ್‌ಗಳಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ, ನವೆಂಬರ್ ತಿಂಗಳಲ್ಲಿ ನಬಾರ್ಡ್‌ ಮತ್ತು ಐಬಿಪಿಎಸ್‌ ಜತೆಗೂಡಿ ಸಂದರ್ಶನ ಪ್ರಕ್ರಿಯೆ ನಡೆಸಲಿವೆ.
ಯಾವೆಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ?
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್ )-5538
ಆಫೀಸರ್ ಸ್ಕೇಲ್‌ 1-2485
ಆಫೀಸರ್ ಸ್ಕೇಲ್‌-2 (ಮಾರ್ಕೆಟಿಂಗ್ ಮ್ಯಾನೇಜರ್)-03
ಆಫೀಸರ್ ಸ್ಕೇಲ್‌-2 (ಅಗ್ರಿಕಲ್ಚರ್ ಆಫೀಸರ್)-59
ಆಫೀಸರ್ ಸ್ಕೇಲ್‌-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್)-315
ಆಫೀಸರ್ ಸ್ಕೇಲ್‌-2(ಟ್ರೆಸರಿ ಮ್ಯಾನೇಜರ್)-08
ಆಫೀಸರ್ ಸ್ಕೇಲ್‌-2 (Law)-24
ಆಫೀಸರ್ ಸ್ಕೇಲ್‌-2 (CA)-21
ಆಫೀಸರ್ ಸ್ಕೇಲ್‌-2 (IT)-68
ಆಫೀಸರ್ ಸ್ಕೇಲ್‌-3-73
ಅರ್ಜಿ ಸಲ್ಲಿಕೆ ವಿಧಾನ-ಆನ್​ಲೈನ್
ಅರ್ಹತೆ : ಈ ಹುದ್ದೆಗಳಿಗೆ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು. ಜತೆಗೆ ಕೆಲವೊಂದು ಹುದ್ದೆಗೆ ಎಂಬಿಎ, ಸಿಎ ಪಾಸ್‌ ಮಾಡಿರಬೇಕು.
ಆಯ್ಕೆ ಪ್ರಕ್ರಿಯೆ: ಆರ್‌ಆರ್‌ಬಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಜತೆಗೆ, ಸಂದರ್ಶನ ಪ್ರಕ್ರಿಯೆ ಇರುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 01-06-2023
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 21-06-2023
ಪರೀಕ್ಷೆ ಪೂರ್ವಭಾವಿ ತರಬೇತಿ ದಿನಾಂಕ : ಜುಲೈ 17-22, 2023.
ಅಪ್ಲಿಕೇಶನ್‌ ಶುಲ್ಕ : ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ 175 ರೂ., ಇತರೆ ಅಭ್ಯರ್ಥಿಗಳಿಗೆ 850 ರೂ.
ಪೂರ್ವಭಾವಿ ಪರೀಕ್ಷೆ ದಿನಾಂಕ : ಆಗಸ್ಟ್‌ 2023
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ಫಲಿತಾಂಶ : ಆಗಸ್ಟ್‌ / ಸೆಪ್ಟೆಂಬರ್, 2023
ಮುಖ್ಯ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2023
ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್
ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://www.ibps.in/wp-content/uploads/Final_Ad_CRP_RRB_XII.pdf
ವಯೋಮಿತಿ:
ಆಫೀಸರ್ ಸ್ಕೇಲ್ – 3 : ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು
ಆಫೀಸರ್ ಸ್ಕೇಲ್‌ – 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು
ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯಸ್ಸು
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು
ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಉದ್ಯೋಗ ಕ್ಷೇತ್ರ ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗ
ಮಾಸಿಕ ವೇತನ : 35000-70000 ರೂ.ಗಳ ವರೆಗೆ
ವಿದ್ಯಾರ್ಹತೆ: ಪದವಿ / ಸ್ನಾತಕೋತ್ತರ ಪದವಿ
ಆಫೀಸರ್ ಸ್ಕೇಲ್ 2- ಜನರಲ್ ಮ್ಯಾನೇಜರ್ ಬ್ಯಾಂಕಿಂಗ್ ಆಫೀಸರ್- ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು. ಅಲ್ಲದೆ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಆಫೀಸರ್ ಸ್ಕೇಲ್-3 – ಜನರಲ್ ಮ್ಯಾನೇಜರ್ ಬ್ಯಾಂಕಿಂಗ್ ಆಫೀಸರ್ – ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು. ಅಲ್ಲದೆ 5 ವರ್ಷಗಳ ಅನುಭವ ಹೊಂದಿರಬೇಕು.
ನೇಮಕಾತಿ ಸಂಸ್ಥೆ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ವೆಬ್‌ಸೈಟ್‌ ವಿಳಾಸhttps://ibps.in/

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್ 2023 : ಶೂಟಿಂಗ್-ಮಹಿಳೆಯರ 25 ಮೀ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement