ವೀಡಿಯೊ…: ಕಾರ್ಯಕ್ರಮದ ವೇದಿಕೆ ಮೇಲೆ ಮುಗ್ಗರಿಸಿ ನೆಲದ ಮೇಲೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಕೊಲೊರಾಡೋದ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿಯನ್ನು ಪ್ರದಾನ ಮಾಡಿದ ನಂತರ ಾಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮರಳು ಚೀಲದ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ನಂತರ ಅವರು ಎದ್ದು ತಮ್ಮ ಸೀಟಿಗೆ ಹಿಂತುರಿಗಿದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅವರು ಮುಗ್ಗರಿಸಿ ಬಿದ್ದ ವೀಡಿಯೊದಲ್ಲಿ, ಬೈಡನ್‌ ಬಿದ್ದ ನಂತರ ತಕ್ಷಣವೇ ಎದ್ದು ಈ ಸೀಟಿಗೆ ಯಾರದೂ ಸಹಾಯವಿಲ್ಲದೆ ಹೋಗುತ್ತಿರುವುದನ್ನು ಕಾಣಬಹುದು. ಸಮಾರಂಭದ ಸಮಾರೋಪದಲ್ಲಿ ಅವರು ತಮ್ಮ ವಾಹನದ ಕಡೆಗೆ ನಗುತ್ತಾ ಓಡುತ್ತಿದ್ದರು. ಈ ಘಟನೆಯ ನಂತರ, ಸಿಎನ್ಎನ್ ಪ್ರಕಾರ, ಅಧ್ಯಕ್ಷರು ಚೆನ್ನಾಗಿದ್ದಾರೆ ಎಂದು ವೈಟ್ ಹೌಸ್ ಹೇಳಿದೆ.

ಘಟನೆಗೂ ಮುನ್ನ ಅಕಾಡೆಮಿಯ ಪದವೀಧರರನ್ನು ಬೈಡನ್‌ ಅಭಿನಂದಿಸಿದ್ದಾರೆ. ಅಕಾಡೆಮಿಯ ಪದವೀಧರರಿಗೆ ಪದವಿ ಪ್ರದಾನ ಮಾಡಿದ ನಂತರ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಹೋಗುತ್ತಿರುವಾಗ ಬೈಡನ್‌ ಮುಗ್ಗರಿಸಿ ಬಿದ್ದಿದ್ದಾರೆ. ಅವರು ಪದವಿ ಪ್ರದಾನ ಸಮಾರಂಭದಲ್ಲಿ ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ನೂರಾರು ಕೆಡೆಟ್ ಗಳನ್ನು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.
ಬೈಡನ್‌ ಎಡವಿ ಬಿದ್ದಾಗ ಇಬ್ಬರು ರಹಸ್ಯ ಸೇವಾ ಸಿಬ್ಬಂದಿ ಮತ್ತು ಏರ್ ಫೋರ್ಸ್ ಅಕಾಡೆಮಿ ನಿರ್ವಾಹಕರು ಅವರಿಗೆ ಎದ್ದು ನಿಲ್ಲಲು ಸಹಾಯ ಮಾಡಿದರು. ವೇದಿಕೆಯಲ್ಲಿ ಇರಿಸಲಾಗಿದ್ದ ಮರಳಿನ ಚೀಲಗಳ ಮೇಲೆ ಬಿಡೆನ್ ಮುಗ್ಗರಿಸಿದರು

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ವೀಡಿಯೋದಲ್ಲಿ ಕಂಡುಬರುವಂತೆ ಬೈಡನ್‌ ನಿಂತಿದ್ದ ಸ್ಥಳಕ್ಕೆ ಸಮೀಪವಿರುವ ವೇದಿಕೆಯ ಮುಂಭಾಗದಲ್ಲಿ ಮರಳು ಚೀಲಗಳನ್ನು ಹಾಕಲಾಗಿತ್ತು. “ಅವರು ಕ್ಷೇಮವಾಗಿದ್ದಾರೆ. ಅವರು ಕೈಕುಲುಕುತ್ತಿರುವಾಗ ವೇದಿಕೆಯ ಮೇಲೆ ಮರಳು ಚೀಲವಿತ್ತು” ಎಂದು ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮಾಡಿದ್ದಾರೆ.
80 ವರ್ಷ ವಯಸ್ಸಿನ ಬೈಡನ್‌ ಅಮೆರಿಕ ಕಂಡ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ. ಅವರು ಇದೇ ರೀತಿ ಮೊದಲು ಅನೇಕ ಸಲ ಬಿದ್ದಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement