ಕಲಘಟಗಿ: ನೇಣು ಬಿಗಿದುಕೊಂಡು ಸಹೋದರಿಯರ ಆತ್ಮಹತ್ಯೆ

ಧಾರವಾಡ: ತಾಯಿ ಮನೆಯಲ್ಲಿ ಇಲ್ಲದಿರುವಾಗ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು 19 ವರ್ಷದ ಭೂಮಿಕಾ ಹಡಪದ ಹಾಗೂ 17 ವರ್ಷದ ಕಾವೇರಿ ಹಡಪದ ಎಂದು ಗುರುತಿಸಲಾಗಿದೆ. ಕಲಘಟಗಿಯ ಬೆಂಡಿಗೇರಿ ಓಣಿಯ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದ್ದು ಇಂದು, ಭಾನುವಾರ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆರ್‌ ಎಸ್‌ ಎಸ್‌ ಹಿರಿಯ ಕಾರ್ಯಕರ್ತ ಪ.ರಾ. ನಾಗರಾಜ ಭಟ್ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement