ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಶಾಕ್ : ಜೂನ್‌1 ರಿಂದಲೇ ವಿದ್ಯುತ್ ದರ ಹೆಚ್ಚಳ…!

ಬೆಂಗಳೂರು : ರಾಜ್ಯದಲ್ಲಿ ಪ್ರತಿಮನೆಗೆ ವಾರ್ಷಿಕ ಸರಾಸರಿ ಆಧಾರದ ಮೇಲೆ ಗರಿಷ್ಠ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ‘ಗೃಹಜ್ಯೋತಿ’ ಯೋಜನೆಯನ್ನು ಸರ್ಕಾರ ಜಾರಿ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಶಾಕ್‌ ಎದುರಾಗಿದೆ.
ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ವಿದ್ಯುತ್‌ಗೆ ಶುಲ್ಕವನ್ನು ಶೇ. 8ರಷ್ಟು (ಯೂನಿಟ್ ಗೆ ಸುಮಾರು 70 ಪೈಸೆ) ಹೆಚ್ಚಿಸಿದೆ.
ಜುಲೈ ೧ರಿಂದ ಗೃಹ ಜ್ಯೋತಿ ಯೋಜನೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 1ರಿಂದ ಅನ್ವಯವಾಗುವಂತೆ ಹೊಸ ದರ ಜಾರಿಗೆ ಬರಲಿದೆ. ಗೃಹಜ್ಯೋತಿ ಯೋಜನೆ ಘೋಷಣೆ ಹಿನ್ನೆಲೆ ಸಂತಸದಲ್ಲಿರುವ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದೆ.
ಮೇ 12ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಿತ್ತು. ಜೂನ್‌ 1 ರಿಂದಲೇ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್‌ಸಿ ಹೇಳಿತ್ತು. ಆದರೆ ಚುನಾವಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆ ಬಿದ್ದಿತ್ತು. ಇದೀಗ ಏಪ್ರಿಲ್ 1ರ ಬದಲು ಜೂನ್ 1ರಿಂದ ಹೊಸದರ ಏರಿಕೆ ಮಾಡಲಾಗಿದೆ.
ವಿದ್ಯುತ್ ದರ ಏರಿಕೆ…
ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ
ಜೂನ್ 1ರಿಂದ ಹೊಸ ದರ ಜಾರಿ
ಗೃಹ ಜ್ಯೋತಿ ಯೋಜನೆಯ ಜಾರಿ ಖುಷಿಯಲ್ಲಿರುವ ಗ್ರಾಹಕರಿಗೆ ಬರೆ
ಚುನಾವಣೆ ಹಿನ್ನೆಲೆಯಲ್ಲಿ ಆದೇಶಕ್ಕೆ ತಡೆ ನೀಡಲಾಗಿತ್ತು
ಜೂನ್ 1ರಿಂದಲೇ ಹೊಸ ದರ ಜಾರಿ
ಕೆಇಆರ್ ಸಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಂತೆ, ಪ್ರತಿ ಯೂನಿಟ್ ಗೆ ಸರಾಸರಿ 70 ಪೈಸೆಯಷ್ಟು ಹಣವನ್ನು ಏರಿಸಲಾಗಿದೆ. ಈ 70 ಪೈಸೆಯಲ್ಲಿ, 57 ಪೈಸೆಯನ್ನು ಸ್ಥಿರ ವೆಚ್ಚ (ಫಿಕ್ಸ್ಡ್ ಚಾರ್ಜಸ್) ಅಡಿಯಲ್ಲಿ ಹಾಗೂ ಉಳಿದ 13 ಪೈಸೆಯನ್ನು ಇಂಧನ ಶುಲ್ಕದ ರೂಪದಲ್ಲಿ ಪಡೆಯಲಾಗುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಸಂಸ್ಥೆಗಳಿಂದ ಆಗಿರುವ ಅನುಮೋದಿತ 4,457.12 ಕೋಟಿ ರೂ.ಗಳನ್ನು ಸರಿದೂಗಿಸಲು, ಎಲ್ಲಾ ರೀತಿ ಎಲ್.ಟಿ (ಲೋ – ಟೆನ್ಷನ್ ಲೈನ್) ಹಾಗೂ ಎಚ್.ಟಿ. (ಹೆವಿ ಟೆನ್ಷನ್ ಲೈನ್) ಗ್ರಾಹಕರಿಗೆ ಈ ಪರಿಷ್ಕೃ ಶುಲ್ಕ ಅನ್ವಯವಾಗುತ್ತದೆ. ಅಲ್ಲದೆ ಈ ಪರಿಷ್ಕೃತ ದರಗಳನ್ನು 2023ರ ಏ. 1ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement