ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ ಅಂಬರೀಶ- ಅವಿವಾ

ಬೆಂಗಳೂರು: ರೆಬೆಲ್‌ ಸ್ಟಾರ್‌ ಅಂಬರೀಷ ಅವರ ಪುತ್ರ ಅಭಿಷೇಕ – ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ, ಸ್ನೇಹಿತರ ಮುಂದೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ವಿವಾಹ ಶಾಸ್ತ್ರ ನೆರವೇರಿತು. ಮದುವೆ ಸಮಾರಂಭಕ್ಕೆ ಸೂಪರ್‌ ಸ್ಟಾರ್‌ ರಜಿನಿಕಾಂತ್‌, ನಟ ಯಶ್‌, ನಟಿ ಸುಹಾಸಿನಿ, ಟಾಲಿವುಡ್‌ ನಟರಾದ ಮೋಹನ್‌ ಬಾಬು, ಮಂಚು ಮನೋಜ್‌, ನಟ ನರೇಶ್‌, ಪವಿತ್ರ, ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ನವಜೋಡಿಗೆ ಶುಭಹಾರೈಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ 11 ರಂದು ಖ್ಯಾತ ಫ್ಯಾಷನ್‌ ಡಿಸೈನರ್‌ ಆಗಿರುವ ಪ್ರಸಾದ್‌ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ ಅವರೊಂದಿಗೆಅಭಿಷೇಕ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್‌ 7 ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement