ದೆಹಲಿ ಮದ್ಯ ನೀತಿ ಹಗರಣ: ಇ.ಡಿ. ಪ್ರಕರಣದಲ್ಲಿ ಮನೀಶ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಪತ್ನಿಯ ವೈದ್ಯಕೀಯ ಸ್ಥಿತಿಯ ಹಿನ್ನೆಲೆಯಲ್ಲಿ ಸಿಸೋಡಿಯಾ ಆರು ವಾರಗಳ ಮಧ್ಯಂತರ ಜಾಮೀನು ಕೋರಿದ್ದರು. ಸೀಮಾ ಸಿಸೋಡಿಯಾ ಅವರನ್ನು ಜೂನ್ 3 ರಂದು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಂತರ ಜಾಮೀನು ಕೋರಿ ಸಿಸೋಡಿಯಾ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯದ ವಕೀಲರು, ಅಬಕಾರಿ ನೀತಿಗೆ ಸಂಬಂಧಿಸಿದ ದಾಖಲೆಗಳನ್ನು ಇನ್ನೂ ತಿರುಚಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸಿಸೋಡಿಯಾ ವಿರುದ್ಧದ ಆರೋಪಗಳು ಅತ್ಯಂತ ಗಂಭೀರವಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಜಾಮೀನಿನ ಮೇಲೆ ಬಿಡುಗಡೆಯಾದರೆ ಸಿಸೋಡಿಯಾ ಸಾಕ್ಷಿಗಳನ್ನು ಹಾಳುಮಾಡಬಹುದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಇ.ಡಿ. ಉಲ್ಲೇಖಿಸಿದೆ.

ಎಲ್‌ಎನ್‌ಜೆಪಿ ಆಸ್ಪತ್ರೆ ಸಲ್ಲಿಸಿದ ಸೀಮಾ ಸಿಸೋಡಿಯಾ ಅವರ ವೈದ್ಯಕೀಯ ವರದಿಯನ್ನು ಪೀಠವು ಗಮನಿಸಿತು ಮತ್ತು ಅವರ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, “ಶ್ರೀಮತಿ ಸಿಸೋಡಿಯಾ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಈ ನ್ಯಾಯಾಲಯವು ನಿರ್ದೇಶಿಸುತ್ತದೆ. ಆಕೆಯ ವೈದ್ಯಕೀಯ ಚಿಕಿತ್ಸೆಯನ್ನು ಎಲ್ಲಿಂದ ಪಡೆಯಬೇಕು ಎಂಬುದು ರೋಗಿಯ ಮತ್ತು ಕುಟುಂಬದ ಸದಸ್ಯರ ಆಯ್ಕೆಯಾಗಿದ್ದರೂ, ಈ ನ್ಯಾಯಾಲಯವು ಆಕೆಯನ್ನು AIIMS ನ ವೈದ್ಯಕೀಯ ಅಧೀಕ್ಷಕರಿಂದ ಸ್ಥಾಪಿಸಲಾದ ವೈದ್ಯರ ಮಂಡಳಿಯಿಂದ ಪರೀಕ್ಷಿಸಬಹುದೆಂದು ಸೂಚಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಜೂನ್ 2 ರಂದು ದೆಹಲಿ ಹೈಕೋರ್ಟ್ ಸಿಸೋಡಿಯಾ ಅವರ ಪತ್ನಿಯನ್ನು ಜೂನ್ 3 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಭೇಟಿ ಮಾಡಲು ಅನುಮತಿ ನೀಡಿತ್ತು. ಆದರೆ, ಆ ಸಮಯದಲ್ಲಿ ಅವರು ಪೊಲೀಸ್ ಕಸ್ಟಡಿಯಲ್ಲಿರುತ್ತಾರೆ ಎಂದು ನ್ಯಾಯಾಲಯ ಹೇಳಿತ್ತು.
ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಸೋಡಿಯಾ ತಮ್ಮ ನಿವಾಸ ತಲುಪಿದರು. ನ್ಯಾಯಾಲಯದ ನಿರ್ದೇಶನದಂತೆ ಮಾಧ್ಯಮಗಳೊಂದಿಗೆ ಮಾತನಾಡದೆ ನೇರವಾಗಿ ನಿವಾಸದೊಳಗೆ ತೆರಳಿದರು. ಆದರೆ, ಎಎಪಿ ನಾಯಕನ ಆಗಮನದ ಮೊದಲು ಸೀಮಾ ಸಿಸೋಡಿಯಾ (ಮನೀಶ್ ಸಿಸೋಡಿಯಾ ಅವರ ಪತ್ನಿ) ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement