ಸಚಿವರೊಂದಿಗೆ 5 ತಾಸುಗಳ ಸಭೆಯ ನಂತರ ಜೂನ್ 15ರ ವರೆಗೆ ಪ್ರತಿಭಟನೆ ಸ್ಥಗಿತಕ್ಕೆ ಕುಸ್ತಿಪಟುಗಳು

ನವದೆಹಲಿ: ಇಂದು, ಬುಧವಾದ ಐದು ತಾಸುಗಳ ಕಾಲ ನಡೆದ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಲಿಖಿತ ಪ್ರಸ್ತಾವನೆ ಮಂಡಿಸಿದರು. ಜೂನ್ 15 ರೊಳಗೆ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಅದು ಭರವಸೆ ನೀಡಿದರು. ಆದರೆ ಅವರ ಬಂಧನದ ಬಗ್ಗೆ ಯಾವುದೇ ಮಾತುಗಳಿಲ್ಲ.
ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ತನಿಖೆಯನ್ನು ಜೂನ್ 15 ರೊಳಗೆ ದೆಹಲಿ ಪೊಲೀಸರು ಪೂರ್ಣಗೊಳಿಸುತ್ತಾರೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ಒಲಿಂಪಿಯನ್ ಕುಸ್ತಿಪಟು ಬಜರಂಗ ಪುನಿಯಾ ಸಭೆಯ ನಂತರ ಹೇಳಿದರು. ಅಲ್ಲಿಯವರೆಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುವುದು, ಆದರೆ ಮುಂದಿನ ದಾರಿಯನ್ನು 15 ರ ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಜೂನ್ 15 ರೊಳಗೆ ತನಿಖೆ ಪೂರ್ಣಗೊಳಿಸಲಾಗುವುದು ಮತ್ತು ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ನಾವು ಭರವಸೆ ನೀಡಿದ್ದೇವೆ. ಜೂನ್ 30 ರೊಳಗೆ ಕುಸ್ತಿ ಫೆಡರೇಶನ್‌ಗೆ ಸ್ವತಂತ್ರ ಚುನಾವಣೆ ನಡೆಯಲಿದೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕುಸ್ತಿಪಟುಗಳ ಬೇಡಿಕೆಯನ್ನು ಸರ್ಕಾರವು ಒಪ್ಪಿಕೊಂಡಿದೆ ಮತ್ತು ಬ್ರಿಜ್‌ ಭೂಷಣ್‌ ಅವರೊಂದಿಗೆ ಸಂಪರ್ಕ ಹೊಂದಿದವರು ಒಕ್ಕೂಟದ ಹೊಸ ಆಂತರಿಕ ಸಮಿತಿಯಲ್ಲಿ ಇರುವುದಿಲ್ಲ, ಅದು ಮಹಿಳೆಯ ನೇತೃತ್ವದಲ್ಲಿರುತ್ತದೆ ಎಂದು ಸಚಿವರು ಹೇಳಿದರು. ಮೇ 28ರಂದು ಕುಸ್ತಿಪಟುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್ 2023, ಶೂಟಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಲೈಂಗಿಕ ಕಿರುಕುಳದ ಆರೋಪದಲ್ಲಿ ಸಿಂಗ್ ಅವರ ಬಂಧನಕ್ಕೆ ಒತ್ತಾಯಿಸುತ್ತಿರುವ ಕುಸ್ತಿಪಟುಗಳು ತಮಗೆ ಬೆಂಬಲಿಸಿದ ಸಂಘ-ಸಂಸ್ಥೆಗಳೊಂದಿಗೆ ಪ್ರಸ್ತಾವನೆಯನ್ನು ಚರ್ಚಿಸುತ್ತಾರೆ ಮತ್ತು ತಮ್ಮ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸುತ್ತಾರೆ ಎಂದು ಬಜರಂಗ ಪುನಿಯಾ ಹೇಳಿದರು.
ಅನುರಾಗ್ ಠಾಕೂರ್ ಅವರು ಟ್ವಿಟರ್‌ನಲ್ಲಿ ಕುಸ್ತಿಪಟುಗಳಿಗೆ ಮುಕ್ತ ಆಹ್ವಾನ ನೀಡಿದ ನಂತರ ಇಂದು, ಬುಧವಾರ ಸಭೆಯನ್ನು ಕರೆಯಲಾಯಿತು. ಅಪ್ರಾಪ್ತ ಬಾಲಕಿ ಸೇರಿದಂತೆ ಮಹಿಳಾ ಅಥ್ಲೀಟ್‌ಗಳಿಗೆ ಬ್ರಿಜ್ ಭೂಷಣ್ ಸಿಂಗ್ ಕಿರುಕುಳ ನೀಡಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ ಮತ್ತು ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಬಲ ಹೊಂದಿರುವ ಸಂಸದ ಬ್ರಿಜ್‌ ಭೂಷಣ್‌ ಅವರ ಬಂಧನ ವಿವಾದದ ವಿಷಯವಾಗಿದೆ.
ಕುಸ್ತಿಪಟುಗಳು ಜನವರಿಯಲ್ಲಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು ಮತ್ತು ಏಪ್ರಿಲ್‌ನಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಘೋಷಿಸಿದರು, ಸರ್ಕಾರದ ಪ್ರತಿಕ್ರಿಯೆಯಿಂದ ಅತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.

ಆದಾಗ್ಯೂ, ದೆಹಲಿ ಪೊಲೀಸರು ಮೇ 28 ರಂದು ಪ್ರತಿಭಟನಾ ಸ್ಥಳದಿಂದ ಕುಸ್ತಿಪಟುಗಳನ್ನು ತೆರವುಗೊಳಿಸಿದರು ಮತ್ತು ನೂತನ ಸಂಸತ್ತು ಪ್ರಾರಂಭವಾದ ದಿನದಂದು ಅದರ ಹೊರಗೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದಾಗ ಅವರಿಗೆ ಅವಕಾಶ ನೀಡಲಿಲ್ಲ. ಕುಸ್ತಿಪಟುಗಳಿಗೆ ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಾನೂನನ್ನು ಅದರ ಹಾದಿಯಲ್ಲಿ ಸಾಗುವುದನ್ನು ಸರ್ಕಾರ ಬಯಸುತ್ತದೆ ಎಂದು ಅಮಿತ್ ಶಾ ಶನಿವಾರ ಕುಸ್ತಿಪಟುಗಳೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಸಭೆಯ ನಂತರ, ಬಜರಂಗ ಪುನಿಯಾ ಸರ್ಕಾರದೊಂದಿಗೆ ಒಪ್ಪಂದದ ವದಂತಿಗಳನ್ನು ನಿರಾಕರಿಸಿದರು ಮತ್ತು ಅಪ್ರಾಪ್ತ ಬಾಲಕಿ ತನ್ನ ದೂರನ್ನು ಹಿಂಪಡೆದಿದ್ದಾಳೆ ಎಂದು ವರದಿ ಅಲ್ಲಗಳೆದಿದ್ದರು. ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದ ಅವರು, ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದಕ್ಕೆ ರಣತಂತ್ರ ರೂಪಿಸುತ್ತಿದ್ದೇವೆ ಎಂದು ಹೇಳಿದ್ದರು.

ಇಂದಿನ ಪ್ರಮುಖ ಸುದ್ದಿ :-   ಏಶಿಯನ್‌ ಗೇಮ್ಸ್‌-2023 ಕ್ರಿಕೆಟ್ : 20 ಓವರಿಗೆ 314 ರನ್‌ಗಳಿಸಿ ಸ್ಕೋರ್‌, ವೇಗದ ಶತಕ-ಅರ್ಧಶತಕದ T20 ದಾಖಲೆ ಉಡೀಸ್‌ ಮಾಡಿದ ನೇಪಾಳ | ವೀಡಿಯೊ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement