ನವದೆಹಲಿ :ಉಚಿತವಾಗಿ ಆಧಾರ್ ಕಾರ್ಡ್ (adhar card) ಅಪ್ ಡೇಟ್ ಮಾಡಲು ಇದೇ ಜೂನ್ 14ರವರೆಗೆ ಅವಕಾಶ ನೀಡಲಾಗಿದೆ.
ಯುಐಡಿಎಐ ಈ ಹಿಂದೆ ಟ್ವೀಟ್ ಮಾಡಿ ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ https://myaadhaar.uidai.gov.in ನಲ್ಲಿ ‘ಉಚಿತವಾಗಿ’ ಹೆಸರು ಮತ್ತು ವಿಳಾಸ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ತಿಳಿಸಿತ್ತು.
ಆಧಾರ್ ನಲ್ಲಿ ಹೆಸರು, ಫೋಟೋ, ಮೊಬೈಲ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಅಪ್ಡೇಟ್ ಮಾಡಲು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಸದ್ಯ UIDAI ಈ ಎಲ್ಲ ತಿದ್ದುಪಡಿ ಸೇವೆಗಳನ್ನು ಜೂನ್ 14ರ ವರೆಗೆ ಉಚಿತವಾಗಿ ನೀಡಲಿದೆ. myAadhaar ಪೋರ್ಟಲ್ಲಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿದರೆ ಯಾವುದೇ ಶುಲ್ಕ ಇರುವುದಿಲ್ಲ.
https://myaadhaar.uidai.gov.in/ ಗೆ ಭೇಟಿ ನೀಡಿ ವಿಳಾಸವನ್ನು ನವೀಕರಿಸಲು ಕ್ಲಿಕ್ ಮಾಡಬೇಕು. ನಂತರ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿದ ಬಳಿಕ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆ ಮಾಡಬೇಕು. ಅದರ ನಂತರ ಸ್ಕ್ರೀನಿನಲ್ಲಿ ವಿಳಾಸ ಕಾಣಿಸಿಕೊಳ್ಳುತ್ತದೆ. ಇದರ ನಂತರ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಪರಿಶೀಲಿಸಿ ಅದು ಸರಿಯಾಗಿದ್ದರೆ, ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ, ವಿಳಾಸ ಹಾಗೂ ಹೆಸರು, ದಾಖಲೆಯನ್ನು ಸಲ್ಲಿಸಬೇಕು. ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ಸಲ್ಲಿಸು(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ