ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೋರ್‌ ಜಾಯ್‌ ಚಂಡಮಾರುತ : ಕರ್ನಾಟಕ ಸೇರಿ 3 ರಾಜ್ಯಗಳಿಗೆ ಮುನ್ನೆಚ್ಚರಿಕೆ

ನವದೆಹಲಿ: ಬಿಪೋರ್‌ಜೋಯ್‌ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ. ಚಂಡಮಾರುತ ಪರಿಣಾಮ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತವು ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನಿಂದ ಪಶ್ಚಿಮ-ನೈಋತ್ಯಕ್ಕೆ 640 ಕಿಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿ ನೆಲೆಸಿದೆ ಹಾಗೂ ಪ್ರತಿ ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಲು ಕಾರಣವಾಗಬಹುದು ಬಿಪೋರ್‌ ಜೋಯ್‌ ಚಂಡಮಾರುತವು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ” ಎಂದು IMD ಟ್ವೀಟ್‌ನಲ್ಲಿ ತಿಳಿಸಿದೆ.
ಬಿಪೋರ್‌ಜೋಯ್ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಅಲೆಗಳು ಮತ್ತು ಬಲವಾದ ಗಾಳಿಯಿಂದಾಗಿ ಅರೇಬಿಯನ್ ಸಮುದ್ರದ ಕರಾವಳಿಯಲ್ಲಿರುವ ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ತಿಥಾಲ್ ಬೀಚ್ ಅನ್ನು ಜೂನ್ 14 ರವರೆಗೆ ಪ್ರವಾಸಿಗರಿಗೆ ಮುಚ್ಚಲಾಗಿದೆ.
“ನಾವು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹೇಳಿದ್ದೇವೆ ಮತ್ತು ಅವರೆಲ್ಲರೂ ಹಿಂತಿರುಗಿದ್ದಾರೆ. ಅಗತ್ಯವಿದ್ದರೆ ಜನರನ್ನು ಸಮುದ್ರ ತೀರದಲ್ಲಿರುವ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು. ಅವರಿಗೆ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾವು ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಅನ್ನು ಮುಚ್ಚಿದ್ದೇವೆ ಎಂದು ವಲ್ಸಾದ್ ತಹಶೀಲ್ದಾರ ಟಿ.ಸಿ. ಪಟೇಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   "ಮತದಾನ ಮಾಡಿಲ್ಲ, ಸಮಾವೇಶಗಳಿಗೆ ಹಾಜರಾಗಿಲ್ಲ" ಎಂಬ ಬಿಜೆಪಿ ನೋಟಿಸಿಗೆ 2 ಪುಟಗಳ ಉತ್ತರ ನೀಡಿದ ಸಂಸದ ಜಯಂತ್ ಸಿನ್ಹಾ..

ಕೇರಳ, ಕರ್ನಾಟಕ, ಗುಜರಾತ್ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ IMD ಸೂಚಿಸಿದೆ. ಕೇರಳದ ಎಂಟು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತವು ಗುಜರಾತ್‌ನ ಕರಾವಳಿ ಪೋರಬಂದರ್ ಜಿಲ್ಲೆಯ ದಕ್ಷಿಣ-ನೈಋತ್ಯಕ್ಕೆ 640 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.
“ಇದು ಭಾನುವಾರ ಅಥವಾ ಸೋಮವಾರದಂದು ದಕ್ಷಿಣ ಗುಜರಾತ್‌ಗೆ ತಲುಪಬಹುದು. ಪ್ರಸ್ತುತ, ನಾವು ಅಲರ್ಟ್ ಮೋಡ್‌ನಲ್ಲಿದ್ದೇವೆ ಮತ್ತು ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರಾವಳಿ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇರಿಸಲಾಗಿದೆ. ಅಗತ್ಯವಿದ್ದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಸೂರತ್‌ನ ಕಲೆಕ್ಟರ್ ಬಿಕೆ ವಾಸವ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ಚಂಡಮಾರುತದಿಂದಾಗಿ, ಜೂನ್ 10, 11 ಮತ್ತು 12 ರಂದು ಗಾಳಿಯ ವೇಗವು 45 ರಿಂದ 55 ಗಂಟುಗಳಿಗೆ ಏರಬಹುದು. ಗಾಳಿಯ ವೇಗವು 65-ಕಿಮೀ ಸಹ ಮುಟ್ಟಬಹುದು. ಚಂಡಮಾರುತವು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯನ್ನು ತರುತ್ತದೆ ಎಂದು ಅಹಮದಾಬಾದ್‌ನಲ್ಲಿರುವ IMD ಯ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕಡಲ ಕಾನೂನಿಗೆ ಅನುಸಾರವಾಗಿ, ಮುಂಬರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ಹಡಗುಗಳನ್ನು ಎಚ್ಚರಿಸಲು ಬಂದರುಗಳು ಸಂಕೇತಗಳನ್ನು ರವಾನೆ ಮಾಡಬೇಕಾಗುತ್ತದೆ. ಕಡಲ ಚಟುವಟಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಡಗುಗಳು ಮತ್ತು ಅವರ ಸಿಬ್ಬಂದಿ ರಕ್ಷಿಸಲು ಇದನ್ನು ಮಾಡಲಾಗುತ್ತದೆ.
ಚಂಡಮಾರುತಕ್ಕೆ ಬಾಂಗ್ಲಾದೇಶವು ಬಿಪೋರ್‌ ಜೋಯ್‌ ಎಂದು ಹೆಸರಿಸಿದೆ. ಈ ಹೆಸರಿನ ಅರ್ಥ ಬಂಗಾಳಿ ಭಾಷೆಯಲ್ಲಿ “ವಿಪತ್ತು” ಎಂದು ಅರ್ಥ. ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುವ ಎಲ್ಲಾ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (WMO) 2020 ರಲ್ಲಿ ಹೆಸರನ್ನು ಅಳವಡಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಆರ್‌ಎಸ್‌ಎಸ್‌ ನಾಯಕರ ಭಾವಚಿತ್ರದ ಸಮೇತ ಸಿಕ್ಕಿಬಿದ್ದಿದ್ದ 8 ಪಿಎಫ್ಐ ಸದಸ್ಯರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೊರ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement