ಮದುವೆಯ ನಂತರ ಮಾವ ವಿಧಿಸಿದ ಷರತ್ತಿಗೆ ದಂಗಾಗಿ ಮದುಮಗಳನ್ನೇ ಬಿಟ್ಟು ಹೋದ ವರ…!

ಝಾನ್ಸಿ: ಮದುವೆಯ ನಂತರ ವಧುವಿನ ತಂದೆ ವಿಧಿಸಿದ ಮೂರು ಷರತ್ತಿನಿಂದಾಗಿ ವಿಧಿವತ್ತಾಗಿ ನಡೆದ ಮದುವೆಯೇ ಮುರಿದುಬಿದ್ದಿದೆ…!
ವಧುವನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭದಲ್ಲಿ ವಧುವಿನ ತಂದೆ ಮೂರು ಷರತ್ತುಗಳನ್ನು ವಿಧಿಸಿದ್ದು ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯ್ತು..
ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಈ ಷರತ್ತುಗಳನ್ನು ಕೇಳಿ ಮದುಮಗನಷ್ಟೇ ಅಲ್ಲ, ಆತನ ಕುಟುಂಬದವರು ಹಾಗೂ ಮದುವೆಗೆ ಬಂದವರೆಲ್ಲ ಬೆಚ್ಚಿಬಿದ್ದಿದ್ದಾರೆ. ಈ ಮೂರು ಷರತ್ತುಗಳನ್ನು ಒಪ್ಪಿದರೆ ಮಾತ್ರ ಹುಡುಗಿಯನ್ನು ಕಳುಹಿಸುತ್ತೇನೆ, ಇಲ್ಲದಿದ್ದರೆ ಹುಡುಗಿಯನ್ನು ಕಳುಹಿಸುವುದಿಲ್ಲ ಎಂದು ತಂದೆ ಖಡಾಖಂಡಿತವಾಗಿ ಹೇಳಿದ ನಂತರ ವರನು ಕ್ಷಣ ಕಾಲ ಅವಾಕ್ಕಾದ, ನಂತರ ತಾನು ಆಗಷ್ಟೇ ಮದುವೆಯಾಗಿದ್ದ ವಧುವನ್ನು ಬಿಟ್ಟು ಹೋಗಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ, ಝಾನ್ಸಿಯ ಬರುವಸಾಗರ್ ಪ್ರದೇಶದಲ್ಲಿ ಸಿನೂರಾ ಗ್ರಾಮದ ನಿವಾಸಿಯಾದ ವರನು ಗುರ್ಸಾರೆ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದಾನೆ. ಜೂನ್ 6 ರಂದು ಮದುವೆಗೆಂದು ವರನು ಹುಡುಗಿಯ ಮನೆಗೆ ಬಂದಿದ್ದನು. ಎಲ್ಲೆಲ್ಲೂ ಸಂತಸ, ಸಂಭ್ರಮದ ವಾತಾವರಣವಿತ್ತು. ಇವರಿಬ್ಬರ ಮದುವೆ ಸಡಗರ ಸಂಭ್ರಮದಿಂದ ನಡೆಯಿತು. ಸಪ್ತಪದಿ, ಕನ್ಯಾದಾನ ಮಾಡಲಾಯಿತು. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧುವನ್ನು ವರನ ಮನೆಗೆ ಕಳುಹಿಸುವ ಸಮಯದಲ್ಲಿ, ವರನ ತಂದೆ ಮುಂದಿಟ್ಟ ಮೂರು ಷರತ್ತುಗಳು ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ವಧುವಿನ ತಂದೆಯ ಆ ಮೂರು ಷರತ್ತುಗಳು ಯಾವುದು ?
ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಯದಲ್ಲಿ, ವಧುವಿನ ತಂದೆ ವರನ ಮುಂದಿಟ್ಟ ಮೂರು ಷರತ್ತುಗಳಲ್ಲಿ ಮೊದಲ ಷರತ್ತು, ಪತಿ-ಪತ್ನಿ ಯಾವುದೇ ಕಾರಣಕ್ಕೂ ದೈಹಿಕ ಸಂಬಂಧ ಹೊಂದಬಾರದು. ಎರಡನೆಯ ಷರತ್ತೆಂದರೆ ವಧು ತನ್ನ ತಂಗಿಯನ್ನೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತಾಳೆ. ಅವಳು ವಧುವಿನ ಜೊತೆಯೇ ಇರುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಬಾರದು. ಮತ್ತು ಮೂರನೆಯ ಷರತ್ತು ಏನೆಂದರೆ ವಧುವಿನ ತಂದೆ ವರನ ಮನೆಗೆ ಯಾವಾಗ ಬೇಕಾದಾಗ ಬರುತ್ತಾರೆ ಮತ್ತು ಹೋಗುತ್ತಾರೆ, ಆದರೆ ಯಾರೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಹಾಗೂ ಅದಕ್ಕೆ ಅಡ್ಡಿಪಡಿಸುವಂತಿಲ್ಲ. ಈ ಷರತ್ತುಗಳನ್ನು ಕೇಳಿ ಅಲ್ಲಿದ್ದವರೆಲ್ಲ ದಂಗು ಬಡಿದರು.
ಎರಡು ಕಡೆಯವರಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದ ನಂತರ ಈ ಮೂರು ಷರತ್ತುಗಳನ್ನು ವರ ಹಾಗೂ ಆತನ ತಂದೆ ಒಪ್ಪಿಕೊಳ್ಳಲು ನಿರಾಕರಿಸಿದರು. ವಧುವು ತಾನು ತನ್ನ ತಂದೆಯ ಮಾತಿಗೆ ಬದ್ಧಳಾಗಿರುವುದಾಗಿ ಹೇಳಿದಳು. ಹೀಗಾಗಿ ವರ ಅನಿವಾರ್ಯವಾಗಿ ವಧುವನ್ನು ಬಿಟ್ಟು ತನ್ನ ಮನೆಗೆ ಹೋಗಿದ್ದಾನೆ ಹಾಗೂ ನಂತರ ವರನ ಕುಟುಂಬದವರು ಈ ಬಗ್ಗೆ ಪೊಲೀಸ್‌ ದೂರು ದಾಖಲಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ ; ಭಾರತದ ಎಲ್ಲ ಪೈಲಟ್ ಗಳು ಸುರಕ್ಷಿತ : ಡಿಜಿಎಂಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement