ಹೊಸ ಮನೆಗಳು, ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್ : ಇಂಧನ ಸಚಿವ ಕೆ.ಜೆ ಜಾರ್ಜ್

ಬೆಂಗಳೂರು : ಹೊಸ ಮನೆಗಳು ಹಾಗೂ ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್.ಆರ್ ನಂಬರಿಗೆ ವೋಟರ್ ಲಿಂಕ್ ಆಗಿದ್ದರೆ ಸಾಕು. ಉಚಿತ ವಿದ್ಯುತ್ ನೀಡಲಾಗುತ್ತದೆ. ಮನೆ ಅಗ್ರಿಮೆಂಟ್ ಪತ್ರ ಇದ್ದರೂ ಫ್ರಿ ವಿದ್ಯುತ್ ನೀಡುತ್ತೇವೆ. ಅಡ್ರೆಸ್ ಇರುವ ಯಾವುದಾದರೂ ಐಡಿ ಕೊಟ್ಟರೂ ಸಾಕು ಎಂದು ತಿಳಿಸಿದ್ದಾರೆ.
ಆಗಸ್ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದ್ದು, ಜೂನ್ ತಿಂಗಳ ಬಿಲ್ ಮಾತ್ರ ಕಟ್ಟಬೇಕಾಗುತ್ತದೆ. ಗೃಹಜ್ಯೋತಿ ಯೋಜನೆಗೆ ಕಲಬುರುಗಿಯಲ್ಲಿ ಚಾಲನೆ ನೀಡುವ ಸಾಧ್ಯತೆ ಇದ್ದು, ಜನರಿಗೆ ಯೋಜನೆ ಸರಳವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಸೋಮವಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ನಂತರ ಎಲ್ಲಾ ಗೊಂದಲಗಳಿಗೂ ಉತ್ತರ ಸಿಗಲಿದೆ ಎಂದು ಕೆ.ಜೆ ಜಾರ್ಜ್ ಹೇಳಿದರು.

ಶೇರ್ ಮಾಡಿ :

  1. pinky kharge

    jana sumne idre, ade conditions continue…………… ugidare, conditions dina dina change………nayi congis

ನಿಮ್ಮ ಕಾಮೆಂಟ್ ಬರೆಯಿರಿ

advertisement