ಅಭಿಮಾನಿಗಳು ಸಿಡಿಸಿದ ಪಟಾಕಿ ಕಿಡಿ ತಗುಲಿ ಸಚಿವ ಕೆ.ಎನ್. ರಾಜಣ್ಣ ಕಣ್ಣಿಗೆ ಗಾಯ

ತುಮಕೂರು: ಅಭಿಮಾನಿಗಳು ಸಿಡಿಸಿದ ಪಟಾಕಿ ಕಿಡಿ ಸಿಡಿದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಈ ಘಟನೆ ನಡೆದಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜಣ್ಣ ಅವರು ಅಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲು ಹಾಸನಕ್ಕೆ ತೆರಳುತ್ತಿದ್ದರು. ಕುಣಿಗಲ್ ಮಾರ್ಗವಾಗಿ ರಾಜಣ್ಣ ತೆರಳುತ್ತಿರುವ ಈ ಬಗ್ಗೆ ಮಾಹಿತಿ ತಿಳಿದ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಕುಣಿಗಲ್ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಸ್ವಾಗತಿಸಿ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಸಮೀಪದಲ್ಲಿಯೇ ಪಟಾಕಿ ಅವರು ಪಟಾಕಿ ಹಚ್ಚಿದ್ದಾರೆ. ಅದರ ಸಮೀಪವೇ ಇದ್ದ ಸಚಿವ ರಾಜಣ್ಣ ಅವರು ತಮ್ಮ ಕನ್ನಡಕ ತೆಗೆಯುವ ವೇಳೆಯಲ್ಲಿ ಸಿಡಿದ ಪಟಾಕಿ ಕಿಡಿ ಕಣ್ಣಿಗೆ ತಗುಲಿದೆ. ತಕ್ಷಣವೇ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ನೇತ್ರ ತಜ್ಞರಿಂದ ಅದಕ್ಕೆ ಚಿಕಿತ್ಸೆ ಪಡೆದರು. ಹಾಗೂ ನಂತರ ಹಾಸನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಟಿ-20 ಕ್ರಿಕೆಟ್‌: ರಾಜ್ಯ ಮಹಿಳಾ (ಸಂಭಾವ್ಯ) ತಂಡಕ್ಕೆ ಹುಬ್ಬಳ್ಳಿಯ ಇಬ್ಬರು ಸೇರಿ 26 ಆಟಗಾರ್ತಿಯರ ಆಯ್ಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement