ಮುಂಬೈ: ಹಿರಿಯ ಪಂಜಾಬಿ ಮತ್ತು ಹಿಂದಿ ಚಲನಚಿತ್ರ ನಟ-ಕಮ್-ನಿರ್ದೇಶಕ ಮಂಗಲ್ ಧಿಲ್ಲೋನ್ ದುರದೃಷ್ಟವಶಾತ್ ಇನ್ನಿಲ್ಲ. ಅವರು ಕ್ಯಾನ್ಸರ್ ಜೊತೆ ಸುದೀರ್ಘ ಹೋರಾಟದ ನಂತರ ನಿಧನರಾದರು.
ಸಾವಿಗೂ ಮುನ್ನ ಮಂಗಲ್ ಅವರನ್ನು ಲುಧಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತಿಮ ಸಂಸ್ಕಾರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮಂಗಲ್ ಧಿಲ್ಲೋನ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ವರ್ಷಗಳ ಶಾಲಾ ಶಿಕ್ಷಣವನ್ನು ಪಂಜ್ ಗ್ರೇಯಿನ್ ಕಲಾನ್ ಸರ್ಕಾರಿ ಶಾಲೆಯಲ್ಲಿ ಮಾಡಿದರು. ನಂತರ ಅವರು ತಮ್ಮ ತಂದೆಯ ತೋಟದ ಬಳಿ ಉತ್ತರ ಪ್ರದೇಶಕ್ಕೆ ತೆರಳಿದರು. ಮಂಗಲ್ ಅವರು ಲಖಿಂಪುರ ಖೇರಿ ಜಿಲ್ಲೆಯ ನಿಘಸನ್‌ನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಿಂದ ಪದವಿ ಪಡೆದರು.
ದಿವಂಗತ ನಟ ದೆಹಲಿಯ ಥಿಯೇಟರ್‌ನಲ್ಲಿ ಕೆಲಸ ಮಾಡಿದ್ದಾರೆ. ಅವರು 1980ರಲ್ಲಿ ನಟನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಮುಗಿಸಿದ್ದಾರೆ. ಮಂಗಲ್ ಮೊದಲ ಬಾರಿಗೆ 1986 ರಲ್ಲಿ ಟಿವಿ ಶೋ ಕಥಾ ಸಾಗರ್ ಮೂಲಕ ಮನರಂಜನಾ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ, ಅವರು ಬುನಿಯಾದ್ ಎಂಬ ಶೀರ್ಷಿಕೆಯ ಮತ್ತೊಂದು ಟಿವಿ ಶೋನಲ್ಲಿ ಕಾಣಿಸಿಕೊಂಡರು. ಜುನೂನ್, ಕಿಸ್ಮತ್, ದಿ ಗ್ರೇಟ್ ಮರಾಠಾ, ಪ್ಯಾಂಥರ್, ಘುಟಾನ್, ಸಾಹಿಲ್, ಮೌಲಾನಾ ಆಜಾದ್, ಮುಜ್ರಿಮ್ ಹಜಿರ್, ರಿಶ್ತಾ, ಯುಗ್ ಮತ್ತು ನೂರ್ಜಹಾನ್ ಸೇರಿದಂತೆ ಇತ ಧಾರಾವಾಹಿಗಳು ಸೇರಿವೆ.
ಮಂಗಲ್ ಧಿಲ್ಲೋನ್ ಅವರು ಖೂನ್ ಭಾರಿ ಮಾಂಗ್, ಝಖ್ಮಿ ಔರತ್, ದಯಾವನ್, ಕಹಾನ್ ಹೈ ಕಾನೂನ್, ನಾಕಾ ಬಂದಿ, ಅಂಬಾ, ಅಕೈಲಾ, ಜನಶೀನ್, ಟ್ರೈನ್ ಟು ಪಾಕಿಸ್ತಾನ್, ಮತ್ತು ದಲಾಲ್ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ 2017ರಲ್ಲಿ ತೂಫಾನ್ ಸಿಂಗ್ ಚಿತ್ರದಲ್ಲಿ ಲಾಖಾ ಆಗಿ ಕಾಣಿಸಿಕೊಂಡರು.
ನಿಮ್ಮ ಕಾಮೆಂಟ್ ಬರೆಯಿರಿ