ಡಬ್ಲ್ಯುಟಿಸಿ ಫೈನಲ್ : ಮುಗ್ಗರಿಸಿದ ಭಾರತ, ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌

ಲಂಡನ್‌ : ಭಾನುವಾರ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 209 ರನ್‌ಗಳಿಂದ ಸೋಲಿಸಿ ಭಾರತವನ್ನು ಸೋಲಿಸಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು.
ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಶನಿವಾರದಂದು ಭಾರತಕ್ಕೆ 444 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಗೆಲುವಿಗೆ 280 ರನ್‌ಗಳು ಮತ್ತು ಏಳು ವಿಕೆಟ್‌ಗಳ ಕೈಯಲ್ಲಿ ಇದ್ದ ಭಾರತವು ಭಾನುವಾರ ಅಂತಿಮ ದಿನದಾಟವನ್ನು ಪ್ರಾರಂಭಿಸಿತು. ವಿರಾಟ್ ಕೊಹ್ಲಿ 49 ರನ್‌ ಗಳಿಸಿ ದಿನದ ಆರಂಭದಲ್ಲಿ ಔಟಾದರು, ಅವರು ನಿನ್ನೆಯ ಸ್ಕೋರ್‌ಗೆ ಕೇವಲ ಐದು ರನ್‌ಗಳನ್ನು ಸೇರಿಸಿದರು. ಅಜಿಂಕ್ಯೆ ರಹಾನೆ 46 ರನ್‌ ಗಳಿಸಿ ಔಟಾದ ನಂತರ ಭಾರತದ ಉಳಿದ ಆಟಗಾರರು
ಶನಿವಾರ ಆಸ್ಟ್ರೇಲಿಯಾ ತಂಡವು ನೀಡಿದ 444 ರನ್‌ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿದ ಭಾರತವು ಸಕಾರಾತ್ಮಕವಾಗಿ ಪ್ರಾರಂಭಿಸಿ ಶನಿವಾರದ ಆಟದ ಅಂತ್ಯಕ್ಕೆ 179-3 ಸ್ಕೋರ್‌ ತಲುಪಲು ಯಶಸ್ವಿಯಾಯಿತು. ಆದರೆ ಇಂದು ಭಾನುವಾರ ಐದನೇ ದಿನದ ಆಟವನ್ನು ಪುನರಾರಂಭಿಸಿದ ಭಾರತ ತಂಡವು ಬ್ಯಾಟಿಂಗ್ ಕುಸಿತವನ್ನು ಅನುಭವಿಸಿತು. 179-3 ರಿಂದ ಶೀಘ್ರವೇ 224-9 ಆಗಿತ್ತು. ಅಂತಿಮವಾಗಿ ಭಾರತದ 234 ರನ್‌ಗಳಿಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ಎಲ್ಲಾ ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಯಿತು. ಆಸೀಸ್ 1987, 1999, 2003, 2007 ಮತ್ತು 2015 ರಲ್ಲಿ ಏಕಿದನದ ಪಂದ್ಯ (ODI) ವಿಶ್ವಕಪ್ ಗೆದ್ದಿದೆ. 2006 ಮತ್ತು 2009 ರಲ್ಲಿ ಸತತ ಆವೃತ್ತಿಗಳಲ್ಲಿ ICC ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 2021 ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತನ್ನ T20 ವಿಶ್ವಕಪ್ ಪ್ರಶಸ್ತಿಯ ಗೆದ್ದಿತ್ತು. ಆರನ್ ಫಿಂಚ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಅನ್ನು ಫೈನಲ್‌ನಲ್ಲಿ ಸೋಲಿಸಿತ್ತು.
ಜೂನ್ 16 ರಿಂದ ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಮುಂದಿನ ಆಶಸ್ ಸರಣಿಯಲ್ಲಿ ಭಾಗವಹಿಸಲಿದೆ. ಜುಲೈ 12 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್‌ಗೆ ಎಲ್ಲಾ ಸ್ವರೂಪದ ಪ್ರವಾಸಕ್ಕೂ ಮೊದಲು ಭಾರತವು ಅಪರೂಪದ ಒಂದು ತಿಂಗಳ ವಿಶ್ರಾಂತಿ ಪಡೆಯಲಿದೆ.

ಪ್ರಮುಖ ಸುದ್ದಿ :-   ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement