ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಮತ್ತಷ್ಟು ದುಬಾರಿ : ಸುಂಕ ಶೇ.22 ರಷ್ಟು ಹೆಚ್ಚಳ

ಬೆಂಗಳೂರು : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಶೇ.22ರಷ್ಟು ಶುಲ್ಕವನ್ನು ಏರಿಸಿದ್ದು, ವಾಹನ ಸವಾರರಿಗೆ ಶಾಕ್‌ ನೀಡಿದೆ.
ಈ ಹಿಂದೆ ಏಪ್ರಿಲ್‌ 1ರಂದೇ ಹೆದ್ದಾರಿ ಪ್ರಾಧಿಕಾರ ದರ ಏರಿಕೆ ಮಾಡಿದ್ದು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ವಾಪಸ್‌ ಪಡೆದಿತ್ತು. ಈಗ ಎರಡೂ ತಿಂಗಳ ಬಳಿಕ ಸದ್ದಿಲ್ಲದೆ ದರ ಏರಿಕೆ ಮಾಡಿದೆ. ಶುಲ್ಕ ಏರಿಕೆ ವಿಷಯವನ್ನು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.
ಯಾವ್ಯಾವ ವಾಹನಕ್ಕೆ ಎಷ್ಟು ಹಚ್ಚಳ?
ಕಾರ್‌, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರ- 135 ರೂ.ಇದ್ದಿದ್ದು 165 ರೂ.ಗಳಿಗೆ ಏರಿಕೆ (30 ರೂ ಹೆಚ್ಚಳ).
ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ – 220 ರೂ. ಇದ್ದಿದ್ದು 270 ರೂ.ಗಳಿಗೆ ಏರಿಕೆ (50 ರೂ ಹೆಚ್ಚಳ).
ಟ್ರಕ್‌, ಬಸ್‌, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರ – 460 ರೂ. ಇದ್ದಿದ್ದು 565 ರೂ.ಗಳಿಗೆ ಏರಿಕೆ (105 ರೂ. ಹೆಚ್ಚಳ).
3 ಆಕ್ಸೆಲ್‌ ವಾಣಿಜ್ಯ ವಾಹನಗಳ ಏಕಮುಖ ಸಂಚಾರ – 500 ರೂ. ಇದ್ದಿದ್ದು 615 ರೂ.ಗಳಿಗೆ ಏರಿಕೆ (115 ರೂ ಹೆಚ್ಚಳ).
ಭಾರಿ ವಾಹನಗಳ ಏಕಮುಖ ಸಂಚಾರ – 720 ರೂ.ಇದ್ದಿದ್ದು 885 ರೂ.ಗಳಿಗೆ ಏರಿಕೆ (165 ರೂ.ಹೆಚ್ಚಳ).
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರ – 880 ರೂ. ಇದ್ದಿದ್ದು 1,080 ರೂ.ಗಳಿಗೆ ಏರಿಕೆ (200 ರೂ.ಹೆಚ್ಚಳ)
ಈ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಎರಡು ಹಂತದಲ್ಲಿ ನಡೆದಿದೆ. 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದೆ. 9 ದೊಡ್ಡ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್‌ಪಾಸ್‌, 13 ಪಾದಾಚಾರಿ ಅಂಡರ್ ಪಾಸ್‍ಗಳನ್ನು ಈ ಎಕ್ಸ್‌ಪ್ರೆಸ್‌ ವೇ ಹೊಂದಿದೆ. ಈ ಎಕ್ಸ್‌ಪ್ರೆಸ್‌ ವೇ ನಿರ್ಮಿಸಲು ಬರೋಬ್ಬರಿ 8172 ಕೋಟಿ ರೂಪಾಯಿ ಖರ್ಚಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ನಿರ್ಮಾಣವಾಗಿದೆ. 150 ನಿಮಿಷಗಳ ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಸಿದೆ.
ಈ ಹಿಂದೆ ರಸ್ತೆಯು ಉದ್ಘಾಟನೆಯ ಬಳಿಕ ಟೋಲ್‌ ಸಂಗ್ರಹಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸವೀಸ್‌ ರಸ್ತೆ ಇಲ್ಲದೇ ಟೋಲ್‌ ಕಟ್ಟಿಸಿಕೊಳ್ಳಬಾರದು ಎಂದು ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಇಂದಿನ ಪ್ರಮುಖ ಸುದ್ದಿ :-   ವೀಡಿಯೊ | ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್‌ ಪಕ್ಷ ಸೇರ್ಪಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement