ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಹೊಸ ಟೆಸ್ಟ್ ಶ್ರೇಯಾಂಕಗಳನ್ನ ಪ್ರಕಟಿಸಿದೆ. ಬೌಲರ್‌ಗಳ ವಿಭಾಗದಲ್ಲಿ ಅನುಭವಿ ಆಫ್ ಸ್ಪಿನ್ನರ್ ಭಾರತದ ಆರ್.ಅಶ್ವಿನ್ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಹತ್ತು ಶ್ರೇಯಾಂಕಗಳಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 8ನೇ ಸ್ಥಾನ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ 9ನೇ ಸ್ಥಾನದಲ್ಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್’ನಲ್ಲಿ ಆಡದಿದ್ದರೂ, ರವಿಚಂದ್ರನ್ ಅಶ್ವಿನ್ ಟೆಸ್ಟ್‌ನಲ್ಲಿ ಅಗ್ರ ಬೌಲರ್ ಆಗಿಯೇ ಉಳಿದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಓವಲ್’ನಲ್ಲಿ ಭಾರತ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಸೀಸ್‌ನ ಗೆದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಅಗ್ರ-10 ಬ್ಯಾಟ್ಸ್‌ಮನ್’ಗಳ ಶ್ರೇಯಾಂಕದಲ್ಲಿ ಮೊದಲ ಮೂರು ಸ್ಥಾನಗನ್ನು ಪಡೆದಿದ್ದಾರೆ. ಕ್ರಮವಾಗಿ ಆಸೀಸ್ ಬ್ಯಾಟ್ಸ್‌ಮನ್‌ಗಳಾದ ಮಾರ್ನಸ್ ಲಬುಶಾನೆ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಬ್ಯಾಟ್ಸ್‌ಮನ್ ರ್ಯಾಂಕಿಂಗ್‌ನಲ್ಲಿ ಮೊದಲ ಮೂರು ಸ್ಥಾನಗಳನ್ನ ಪಡೆದುಕೊಂಡಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ ಅಪಘಾತದಲ್ಲಿ ಕಾಲು ಮುರಿದುಕೊಂಡು ಸದ್ಯ ವಿಶ್ರಾಂತಿಯಲ್ಲಿರುವ ರಿಷಭ್ ಪಂತ ಮಾತ್ರ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ವಿಭಾಗ..
1 ರವಿಚಂದ್ರನ್ ಅಶ್ವಿನ್ ಭಾರತ 860 ಅಂಕ
2 ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ 850
3 ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ 829
4 ಕಗಿಸೊ ರಬಾಡ ದಕ್ಷಿಣ ಆಫ್ರಿಕಾ 825
5 ಶಾಹೀನ್ ಅಫ್ರಿದಿ ಪಾಕಿಸ್ತಾನ 787
6 ಆಲಿ ರಾಬಿನ್ಸನ್ ಇಂಗ್ಲೆಂಡ್ 777
7 ನಾಥನ್ ಲಿಯಾನ್ ಆಸ್ಟ್ರೇಲಿಯಾ 777
8 ಜಸ್ಪ್ರೀತ್ ಬುಮ್ರಾ ಭಾರತ 772
9 ರವೀಂದ್ರ ಜಡೇಜಾ ಭಾರತ 765
10 ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ 744
ಬ್ಯಾಟಿಂಗ್ ವಿಭಾಗ
1 ಮಾರ್ನಸ್ ಲ್ಯಾಬುಸ್ಚಾಗ್ನೆ ಆಸ್ಟ್ರೇಲಿಯಾ 903
2 ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ 885
3 ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ 884
4 ಕೇನ್ ವಿಲಿಯಮ್ಸನ್ ನ್ಯೂಜಿಲ್ಯಾಂಡ್ 883
5 ಬಾಬರ್ ಅಜಮ್ ಪಾಕಿಸ್ತಾನ 862
6 ಜೋ ರೂಟ್ ಇಂಗ್ಲೆಂಡ್ 861
7 ಡೇರಿಲ್ ಮಿಚೆಲ್ ನ್ಯೂಜಿಲ್ಯಾಂಡ್ 792
8 ದಿಮುತ್ ಕರುಣಾರತ್ನೆ ಶ್ರೀಲಂಕಾ 780
9 ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ 777
10 ರಿಷಭ್ ಪಂತ್ ಭಾರತ 758
ನಿಮ್ಮ ಕಾಮೆಂಟ್ ಬರೆಯಿರಿ