ಕರ್ನಾಟಕ ಗೆದ್ದ ನಂತರ ಪಕ್ಷ ಅಷ್ಟಕ್ಕೆ ಸಂತೃಪ್ತಿ ಪಡುವುದು ಬೇಡ: ಕಾಂಗ್ರೆಸ್‌ಗೆ ಶಶಿ ತರೂರ್

ವಲ್ಲಾಡೋಲಿಡ್ (ಸ್ಪೇನ್): ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಕಾಂಗ್ರೆಸ್ ಸುಮ್ಮನೆ ಕೂಡ್ರದಿರುವುದು ಮುಖ್ಯ, ಏಕೆಂದರೆ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ಮತದಾರರು ತಮ್ಮ ನಡವಳಿಕೆಯನ್ನು ಬದಲಾಯಿಸಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಜೈಪುರ ಸಾಹಿತ್ಯ ಉತ್ಸವದ ಇತ್ತೀಚಿನ ಸ್ಪೇನ್‌ ವಲ್ಲಾಡೋಲಿಡ್ ಆವೃತ್ತಿಯ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಲೋಕಸಭೆ ಚುನಾವಣೆಗೆ ಮೊದಲು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದ ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಕಂಡ ಅಂಶವನ್ನು ಅವರು ಒತ್ತಿಹೇಳಿದ್ದಾರೆ.
ಕಾಂಗ್ರೆಸ್‌ ನಾಯಕ ಹಾಗೂ ಲೇಖಕ “ಅದು ಒಂದು ರಾಜ್ಯದಲ್ಲಿ ಕೆಲಸ ಮಾಡಿದರೆ, ಅದು ರಾಷ್ಟ್ರೀಯವಾಗಿ ಕೆಲಸ ಮಾಡಬಹುದು” ಎಂದು ಊಹಿಸಲಿಕ್ಕೆ ಆಗುವುದಿಲ್ಲ ಎಂದು ಅವರು ಹೇಳಿದರು.
“2018 ರಲ್ಲಿ, ನಾವು ಕರ್ನಾಟಕದಲ್ಲಿ ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದ್ದೆವು. ಮಾತ್ರವಲ್ಲದೆ ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಗೆಲುವು ಸಾಧಿಸಿದ್ದೇವೆ. ಆದರೆ ಅದೇ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ಬಂದಾಗ, ಬಿಜೆಪಿ ನಮ್ಮನ್ನು ಸೋಲಿಸಿತು … ಮತ್ತು ಕರ್ನಾಟಕದಲ್ಲಿಯೂ ಅವರು ಲೋಕಸಭೆಯಲ್ಲಿ ಕೇವಲ ಒಂದು ಸ್ಥಾನವನ್ನು ನಮಗೆ ಬಿಟ್ಟುಕೊಟ್ಟರು ಎಂದು ತರೂರ್ ತಿಳಿಸಿದರು.
ಆದ್ದರಿಂದ ಮತದಾರರು ತಮ್ಮ ನಡವಳಿಕೆಯನ್ನು ತಿಂಗಳ ಅವಧಿಯಲ್ಲಿ, ರಾಜ್ಯ ಚುನಾವಣೆಗಳು ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ಬದಲಾಯಿಸಬಹುದಾದರೆ, ನಾವು ಸಂತೃಪ್ತರಾಗದಿರುವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ವರ್ಷದ ಮೇನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು, ನಡೆದ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಗಳಿಸಿತು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ತಿರುವನಂತಪುರಂ ಸಂಸದ ತರೂರ್‌ ಪ್ರಕಾರ, “ಬಲವಾದ ಮತ್ತು ಪರಿಣಾಮಕಾರಿ ಸ್ಥಳೀಯ ನಾಯಕತ್ವ” ಮತ್ತು ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲಲು ಸಹಾಯ ಮಾಡಿತು.
(ಕಾಂಗ್ರೆಸ್) ಅಧ್ಯಕ್ಷರಾದ ಖರ್ಗೆಯವರು ಸ್ವತಃ ಕರ್ನಾಟಕದವರು, ಗಾಂಧಿ ಸಹೋದರರು ಬಂದು ಪ್ರಚಾರ ಮಾಡಿದರು, ಆದರೆ ಸ್ಥಳೀಯ ನಾಯಕರು ತಳಮಟ್ಟದಲ್ಲಿ ಪಕ್ಷವನ್ನು ಮುನ್ನಡೆದರು ಸ್ಥಳೀಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆಗಳು, ಇವೆಲ್ಲವೂ ಮತದಾರರಿಗೆ ಮುಖ್ಯವಾದ ವಿಷಯಗಳ ಮೇಲೆ ಕಾಂಗ್ರೆಸ್ ಕೇಂದ್ರೀಕರಿಸಿತು. ಮತ್ತೊಂದೆಡೆ, ಬಿಜೆಪಿಯ ಪ್ರಚಾರವು ” ಕೇಂದ್ರ-ಚಾಲಿತವಾಗಿತ್ತು” ಎಂದು ಅವರು ಹೇಳಿದರು.
ಸ್ಥಳೀಯ ಮಟ್ಟದಲ್ಲಿ, ಅವರು ಹೆಚ್ಚು ಅಶಕ್ತರಾಗಿದ್ದರು ಮತ್ತು ಆದ್ದರಿಂದ ಪ್ರಧಾನಿ ಮೋದಿ ಮತ್ತು ಅಮಿತ್‌ ಕರ್ನಾಟಕಕ್ಕೆ ಬಂದು ಸರ್ಕಾರವನ್ನು ನಡೆಸಲು ಹೋಗುವುದಿಲ್ಲ ಎಂದು ಜನರಿಗೆ ತಿಳಿದಿತ್ತು. ನೀವು ಯೋಚಿಸಿದಾಗ ಕರ್ನಾಟಕದಲ್ಲಿ ಯಾರು ಅಧಿಕಾರ ನಡೆಸಲಿದ್ದಾರೆ ಮತ್ತು ಹಿಂದಿನ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ಏನು ನೀಡಿತ್ತು ಎಂಬುದನ್ನು ನೋಡಿದ್ದಾರೆ, ಇದು ನಮಗೆ ಸಾಕಾಗುವುದಿಲ್ಲ ಎಂದು ಜನರು ಭಾವಿಸಿದ್ದಾರೆ, ನಮಗೆ ಬದಲಾವಣೆ ಬೇಕು ಎಂದು ಮತಚಲಾಯಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ರಾಜಕೀಯದಲ್ಲಿ ಜನರು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದು ಸಹಜ. ಅವರು ಪಕ್ಷದ ಸಿದ್ಧಾಂತಕ್ಕೆ ಮತ್ತು ಪಕ್ಷದ ಒಟ್ಟಾರೆ ಕಾರ್ಯಸೂಚಿಗೆ ಬದ್ಧರಾಗಿರಬಹುದು, ಆದರೆ ಆ ಕಾರ್ಯಸೂಚಿಯನ್ನು ಮುಂದಕ್ಕೆ ಸಾಗಿಸಲು ತಾವು ಸೂಕ್ತರು ಎಂದು ವ್ಯಕ್ತಿಗಳು ಭಾವಿಸಬಹುದು” ಎಂದು ತರೂರ್ ಹೇಳಿದರು. .
ಕಾಂಗ್ರೆಸ್ ತುಲನಾತ್ಮಕವಾಗಿ ಹೆಚ್ಚು ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಹೊಂದಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ, ಜನರು ನಾಯಕತ್ವದ ವಿರುದ್ಧ ಮಾತನಾಡಲು ಮತ್ತು ಮುಕ್ತವಾಗಿ ಮಾತನಾಡಲು ಮುಕ್ತವಾದ್ದಾರೆ. ಆದರೆ ಇದು ಖಾಸಗಿಯಾಗಿ ಮತ್ತು ಪಕ್ಷದೊಳಗೆ ನಡೆಯಬೇಕೇ ಹೊರತು ಸಾರ್ವಜನಿಕ ಸ್ಥಳದಲ್ಲಿ ಅಲ್ಲ, “ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ವರ್ಷ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತರೂರ್ ಸ್ಪರ್ಧಿಸಿದ್ದರು.
ಶಶಿ ತರೂರ್ ಅವರು ತಮ್ಮ ಪುಸ್ತಕ “ದಿ ಇಂಗ್ಲೋರಿಯಸ್ ಎಂಪೈರ್” ಕುರಿತು ಮಾತನಾಡಲು ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದರು. ಅವರು ಭಾರತದ ವಸಾಹತುಶಾಹಿ ಗತಕಾಲದಿಂದ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಉಕ್ರೇನ್-ರಷ್ಯಾ ಬಿಕ್ಕಟ್ಟಿನವರೆಗಿನ ವಿಷಯಗಳನ್ನು ಚರ್ಚಿಸಲು ಅಧಿವೇಶನಗಳಲ್ಲಿ ಭಾಗವಹಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement