ಪೊಲೀಸ್ ಠಾಣೆಯ ಮುಂದೆ ನೂರಾರು 500 ರೂ ನೋಟುಗಳನ್ನು ಎಸೆದು ಕಿರುಚಾಡಿದ ವೃದ್ಧೆ : ಕಾರಣವೇನೆಂದರೆ….ವೀಕ್ಷಿಸಿ

ನೀಮುಚ್ (ಮಧ್ಯಪ್ರದೇಶ) : ತನ್ನ ಸ್ವಂತ ಮಗನ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ವೃದ್ಧೆಯೊಬ್ಬರು 500 ರೂಪಾಯಿ ನೋಟುಗಳನ್ನು ರಸ್ತೆಯ ಮೇಲೆ ಎಸೆದ ನಂತರ ನಿಮಚ್‌ನ ಕ್ಯಾಂಟ್ ಪೊಲೀಸ್ ಠಾಣೆಯ ಹೊರಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗುರುವಾರ ತಡರಾತ್ರಿ ನಡೆದ ಈ ಘಟನೆಯಿಂದಾಗಿ ಪೊಲೀಸ್ ಠಾಣೆಯ ಹೊರಗೆ ಭಾರೀ ಜನಜಂಗುಳಿ ಉಂಟಾಗಿ ಘಟನಾ ಸ್ಥಳದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿತ್ತು.
ತನ್ನ ಮಗ ಆಶಿಶ್ ಲಾಟ್‌ ತನ್ನನ್ನು ಪದೇ ಪದೇ ಥಳಿಸುತ್ತಿದ್ದಾನೆ ಎಂದು ಶಾಂತಿಬಾಯಿ ಲಾಟ್‌ ದೂರಿನಲ್ಲಿ ಹೇಳಿದ್ದಾರೆ. ಪದೇ ಪದೇ ದೂರು ನೀಡಿದರೂ ಪೊಲೀಸರು ಇನ್ನೂ ಮಗನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ನನ್ನ ಅಶಿಸ್ತಿನ ಮಗನ ವಿರುದ್ಧ ಕ್ರಮಕೈಗೊಳ್ಳುವಂತೆ ನಾನು ಪೊಲೀಸರನ್ನು ಕೇಳಿದಾಗಲೆಲ್ಲಾ ಅವರು ಹಣಕ್ಕಾಗಿ ಬೇಡಿಕೆಯಿಟ್ಟರು. ಅದಕ್ಕಾಗಿಯೇ ಇಂದು ನಾನು 500-500 ಕರೆನ್ಸಿಯ ಬಂಡಲ್‌ನಲ್ಲಿ 25,000 ರೂಪಾಯಿಗಳನ್ನು ತಂದು ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಎಸೆದಿದ್ದೇನೆ ಎಂದು ಶಾಂತಿಬಾಯಿ ಹೇಳಿದರು.
ನಿವೃತ್ತ ಎನ್‌ಸಿಸಿ ಉದ್ಯೋಗಿ ಶಾಂತಿಬಾಯಿ ಸ್ಕೂಟಿಯಲ್ಲಿ ಠಾಣೆಗೆ ಬಂದಿದ್ದರು ಮತ್ತು ಅವರ ಬಳಿ ಕೋಲು ಕೂಡ ಇತ್ತು. ಪೊಲೀಸರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಮಹಿಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತನಗೆ 1,000 ರೂಪಾಯಿ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಲಾಡ್ಲಿ ಬೆಹ್ನಾ ಯೋಜನೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

ಹೆಡ್ ಕಾನ್‌ಸ್ಟೆಬಲ್ ಸುರೇಂದ್ರ ಸಿಂಗ್ ಮಾತನಾಡಿ, ನೀಮಚ್‌ನಲ್ಲಿ ನೃತ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ಮತ್ತು ಆಕೆಯ ಮಗ ಆಶಿಶ್ ನಡುವೆ ವಿವಾದವಿದೆ. ಸುಮಾರು ಆರು ತಿಂಗಳ ಹಿಂದೆ ಅವರು ತಮ್ಮ ಮಗನ ವಿರುದ್ಧ ದೂರು ನೀಡಿದ್ದರು ಮತ್ತು ಪ್ರಕರಣವು ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ಅವರು ಹೇಳಿದರು. ತನ್ನ ಬ್ಯಾಂಕ್ ಖಾತೆಯಿಂದ ಮಗ ಹಣ ಡ್ರಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement