ಶಾಲಾ ಪಠ್ಯಪುಸ್ತಕ ಪರಿಷ್ಕರಿಸಿ ಅಧಿಕೃತ ಆದೇಶ : ಈ ಪದ್ಯಗಳು-ಗದ್ಯಗಳು ಬದಲು/ಮಾರ್ಪಾಡು

ಬೆಂಗಳೂರು: ಪಠ್ಯಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವಿಷಯಗಳ ಬದಲಾವಣೆ ಮಾಡಲಾಗಿದ್ದು, ಪಠ್ಯದಿಂದ ಕೈ ಬಿಡಬೇಕಾದ ಪಾಠಗಳ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ.
ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠ ಕೈ ಬಿಡಲಾಗಿದೆ. ಸಮಾಜ ವಿಜ್ಞಾನದಲ್ಲಿ 9 ಪಾಠಗಳಿಗೆ ಕೊಕ್ ನೀಡಲಾಗಿದೆ.
6ನೇ ತರಗತಿಯ ಪ್ರಥಮ ಭಾಷೆಯ ಪಠ್ಯದಲ್ಲಿ ʼನಮ್ಮದೇನಿದೆʼ ಪದ್ಯವನ್ನು ಕೈಬಿಡಲಾಗಿದ್ದು, ಆ ಪದ್ಯದ ಬದಲಾಗಿ ಚೆನ್ನಣ್ಣ ವಾಲೀಕಾರ ಅವರ ʼನೀ ಹೋದ ಮರುದಿನʼ ಪದ್ಯ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ ಪ್ರಥಮ ಭಾಷೆಯ ಪೂರಕ ಗದ್ಯ ರಮಾನಂದ ಆಚಾರ್ಯ ಅವರ ʼಮೊದಲ ಶಿಕ್ಷಕಿʼ ಕೈಬಿಡಲಾಗಿದೆ. ಇದರ ಬದಲಿಗೆ ಡಾ.ಹೆಚ್. ಎಸ್. ಅನುಪಮಾ ಅವರ ʼಸಾವಿತ್ರಿಬಾಯಿ ಪುಲೆʼ ಗದ್ಯ ಸೇರ್ಪಡೆ ಮಾಡಲಾಗಿದೆ.
8ನೇ ತರಗತಿಯ ಪ್ರಥಮ ಭಾಷೆಯ ಪೂರಕ ಗದ್ಯವಾಗಿದ್ದ ಪಾರಂಪಳ್ಳಿ ನರಸಿಂಹ ಐತಾಳ ಅವರ ʼಭೂ ಕೈಲಾಸʼ ಪೌರಾಣಿಕ ನಾಟಕ ಕೈಬಿಡಲಾಗಿದೆ. ಇದರ ಬದಲಿಗೆ ತಿತಾ ಶರ್ಮಾ ಅವರು ಅನುವಾದಿತ ಮೂಲ ಜವಹಾರಲಾಲ್ ನೆಹರು ಅವರ ʼಮಗಳಿಗೆ ಬರೆದ ಪತ್ರʼವನ್ನು ಸೇರಿಸಲಾಗಿದೆ.
10ನೇ ತರಗತಿಯ ಪ್ರಥಮ ಭಾಷೆಯ ಕೇಶವ ಬಲಿರಾ ಹೆಡಗೆವಾರ್‌ ಅವರ ʼನಿಜವಾದ ಆದರ್ಶ ಪುರುಷಯಾರಾಗಬೇಕುʼ ಎಂಬ ಗದ್ಯ ಕೈಬಿಡಲಾಗಿದೆ. ಇದರ ಬದಲಿಗೆ ಶಿವಕೋಟ್ಯಾಚಾರ್ಯ ಅವರ ʼಸುಕುಮಾರ ಸ್ವಾಮಿಯ ಕಥೆʼ ಸೇರ್ಪಡೆಗೊಳಿಸಲಾಗಿದೆ.

10ನೇ ತರಗತಿಯ ಪ್ರಥಮ ಭಾಷೆಯ ಪೂರಕ ಗದ್ಯ ಚಕ್ರವರ್ತಿ ಸೂಲಿಬೆಲೆ ಅವರ ʼತಾಯಿ ಭಾರತೀಯ ಅಮರ ಪುತ್ರರುʼ ಪೂರ್ಣ ಗದ್ಯ ಕೈಬಿಡಲಾಗಿದೆ.
10ನೇ ತರಗತಿ ಪ್ರಥಮ ಭಾಷೆಯ ಶತಾವಧಾನಿ ಡಾ.ಆರ್ ಗಣೇಶ ಅವರ ʼಶ್ರೇಷ್ಠ ಭಾರತೀಯ ಚಿಂತನೆಗಳುʼ ಗದ್ಯ ಕೈಬಿಟ್ಟು, ಸಾರಾ ಅಬೂಬಕ್ಕರ್ ಅವರ ‌ʼಯುದ್ಧʼ ಎಂಬ ಗದ್ಯ ಸೇರ್ಪಡೆಗೊಳಿಸಲಾಗಿದೆ.
10ನೇ ತರಗತಿ ಪ್ರಥಮ ಭಾಷೆ ಪದ್ಯ ಲಕ್ಷ್ಮೀಶ ಅವರ ʼವೀರಲವʼದ ಟಿಪ್ಪಣಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಪರಿಚಯದ ತಿದ್ದುಪಡಿ ಮಾಡಲಾಗಿದೆ.
8ನೇ ತರಗತಿ ಪ್ರಥಮ ಭಾಷೆಯಲ್ಲಿ ಕೆ.ಟಿ. ಗಟ್ಟಿ ಅವರ ʼಕಾಲವನ್ನು ಗೆದ್ದವರುʼ ಗದ್ಯ ಕೈಬಿಟ್ಟು, ವಿಜಯಮಾಲಾ ರಂಗನಾಥ ಅವರ ʼಬ್ಲಡ್ ಗ್ರೂಪ್ʼ ಸೇರ್ಪಡೆಗೊಳಿಸಲಾಗಿದೆ.
9ನೇ ತರಗತಿಯ ದ್ವಿತೀಯ ಭಾಷೆ ಪುಸ್ತಕದಲ್ಲಿ ಪಿ.ಸತ್ಯನಾರಾಯಣ ಭಟ್ ಅವರ ʼಅಚ್ಚರಿಯಜೀವಿ ಇಂಬಳʼ ಗದ್ಯ ಕೈಬಿಟ್ಟು, ದಸ್ತಗೀರ ಅಲ್ಲೀಭಾಯಿಯವರ ʼಉರುಸುಗಳಲ್ಲಿ ಭಾವೈಕ್ಯತೆʼ ಗದ್ಯ ಇಡಲಾಗಿದೆ.
ಸಮಾಜ ವಿಜ್ಞಾನ ಪಠ್ಯದಲ್ಲಿಯೂ ಹಲವು ಅಧ್ಯಾಯಗಳನ್ನು ಸರ್ಕಾರ ಸೇರ್ಪಡೆ ಮಾಡಿದೆ. ವೇದಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ, ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಒಡೆಯರ್ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement