ಪಾದದ ಮೂಳೆ ಮುರಿದುಕೊಂಡ ನಟ-ರಾಜ್ಯಸಭಾ ಸದಸ್ಯ ಜಗ್ಗೇಶ

ಬೆಂಗಳೂರು: ಕನ್ನಡ ನಟ ಜಗ್ಗೇಶ ( Actor Jaggesh ) ಅವರು ಈಗ ಎಡ ಕಾಲಿನ ಪಾದದ ಮೂಳೆ ಮುರಿದುಕೊಂಡಿದ್ದಾರೆ. ಈಗ ಅವರು ಸಂಪೂರ್ಣ ವಿಶ್ರಾಂತಿಯಲ್ಲಿ ಇದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಡೆಯುವಾಗ ಸಣ್ಣ ಅಚಾತುರ್ಯವಾಗಿ ಪಾದದ ಮೂಳೆ ಮುರಿತವಾಗಿದೆ. ನಡಿಗೆಗೆ 6 ವಾರದ ದಿಗ್ಭಂಧನ ಎಂದು ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವಂತ ಫೋಟೋದಲ್ಲಿ ಅವರ ಎಡಗಾಲಿನ ಮೊಳಕಾಲಿನಿಂದ ಪಾದದವರೆಗೆ ಬ್ಯಾಂಡೇಜ್ ಸುತ್ತಲಾಗಿದೆ.
ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ ನಟನೆಯ ಜೊತೆಗೆ ರಾಜಕೀಯ, ಟಿವಿ ಶೋ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಪಾದದ ಮೂಳೆಯ ಮುರಿತದಿಂದಾಗಿ 6 ವಾಲಗಳ ಕಾಲ ಸಂಪೂರ್ಣವಾಗಿ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯಬೇಕಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಉದ್ದೇಶಿತ ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಡಬಲ್ ಟ್ರ್ಯಾಕ್’ ನಿರ್ಮಾಣ ಮಾಡಲು ಪ್ರಧಾನಿಗೆ ಮನವಿ

ನಿಮ್ಮ ಕಾಮೆಂಟ್ ಬರೆಯಿರಿ

advertisement