ಬಾಹ್ಯಾಕಾಶದಲ್ಲಿ ಅರಳಿದ ಸುಂದರ ಹೂವು : ನಾಸಾ ಬಿಡುಗಡೆಗೊಳಿಸಿದ ಹೂವಿನ ಫೋಟೋಕ್ಕೆ ಎಲ್ಲರೂ ಫಿದಾ

ಬಾಹ್ಯಾಕಾಶ ಮತ್ತು ಬ್ರಹ್ಮಾಂಡವನ್ನು ಕುತೂಹಲಗಳ ಗುಚ್ಛ ಎಂದೇ ಕರೆಯುತ್ತಾರೆ. ಬಾಹ್ಯಾಕಾಶದ ಸಂಶೋಧನೆ ವೇಳೆ ಆಗಾಗ ಅನೇಕ ಕೌತುಕಗಳು ಹೊರಬೀಳುತ್ತಲೇ ಇರುತ್ತವೆ. ಈಗಾಗಲೇ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅಂತರಿಕ್ಷದಲ್ಲಿ ಹೂವೊಂದು ಅರಳಿದ್ದು ಎಲ್ಲರ ಕೌತುಕಕ್ಕೆ ಕಾರಣವಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋದನಾ ಸಂಸ್ಥೆ‌ ನಾಸಾ ಬಾಹ್ಯಾಕಾಶದಲ್ಲಿ ಹೂವು ಅರಳಿದ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಹೂವಿನ ಹೆಸರು ಜಿನ್ನಿಯಾ. ತರಕಾರಿಗಳನ್ನು ಬೆಳೆಯುವ ಜಾಗದಲ್ಲಿ ಇದು ಅರಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಯುವ ಕುರಿತು 1970ರಿಂದಲೂ ವಿಜ್ಞಾನಿಗಳು ಸಂಶೋಧನೆ ನಡೆಸುತ್ತ ಬಂದಿದ್ದಾರೆ. ಆದರೆ ಗಗನಯಾತ್ರಿ ಕೆಜೆಲ್ ಲಿಂಡ್ ಗ್ರೇನ್ 2015ರಲ್ಲಿ ನಿರ್ದಿಷ್ಟವಾದ ಪ್ರಯೋಗದಲ್ಲಿ ತೊಡಗಿಕೊಂಡರು. ಬಾಹ್ಯಾಕಾಶದಲ್ಲಿ ಜಿನ್ನಿಯಾಗಳನ್ನು ಬೆಳೆಸುವ ಸವಾಲಿನ ಪ್ರಕ್ರಿಯೆಯು ವಿಜ್ಞಾನಿಗಳಿಗೆ ಭೂಮಿಯ ಮೇಲೆ ಮೈಕ್ರೊಗ್ರಾವಿಟಿಯಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಗಗನಯಾತ್ರಿಗಳಿಗೆ ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಏನು ಮಾಡಬೇಕೆಂದು ಅಭ್ಯಾಸ ಮಾಡಲು ಅಸಾಧಾರಣ ಅವಕಾಶವನ್ನು ಒದಗಿಸಿದೆ ಎಂದು ನಾಸಾ ಹೇಳಿದೆ.ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಅಭಿವೃದ್ಧಿಗೊಳ್ಳುತ್ತವೆ ಎನ್ನುವುದನ್ನು ಅಧ್ಯಯನ ಮಾಡುತ್ತಾ ಹೋದಂತೆ ಭೂಮಿಯ ಮೇಲೆ ಬೆಳೆಗಳನ್ನು ಹೇಗೆ ಬೆಳೆಯಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಈಗಾಗಲೇ ನಾಸಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಲೆಟ್ಯೂಸ್, ಟೊಮ್ಯಾಟೊ, ಮೆಣಸಿನಕಾಯಿಗಳನ್ನು ಬೆಳೆದಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement