ಶಹಜಾನಪುರ: ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಸಲಿಂಗ ಪ್ರೇಮಿಯನ್ನು ಮದುವೆಯಾಗಲು ತಾನು ಲಿಂಗ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿ ನಂತರ ತಾಂತ್ರಿಕನು ಆ ಯುವತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಆರ್‌ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪೂನಂ ಎಂದು ಗುರುತಿಸಲಾಗಿದೆ, ಈಕೆ ಪುವಾಯನ್ ನಿವಾಸಿ ಪ್ರೀತಿ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಇಬ್ಬರೂ ಮದುವೆಯಾಗಬೇಕು ಎಂದು ಬಯಸಿದ್ದರು. ಆದರೆ ಪೂನಂ ಜೊತೆಗಿನ ಸಂಬಂಧ ಬೆಳಕಿಗೆ ಬಂದ ನಂತರ ಪ್ರೀತಿಗೆ ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳಾ ತಾಂತ್ರಿಕ ರಾಮನಿವಾಸ ಎಂಬವರನ್ನು ಭೇಟಿಯಾಗಿದ್ದರು ಮತ್ತು ಪೂನಂಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಪೂನಂ ಪುರುಷನಾಗಲು ಬಯಸಿರುವುದಾಗಿ ಪ್ರೀತಿ ತಾಂತ್ರಿಕನಿಗೆ ತಿಳಿಸಿದ್ದಳು. ಇದರ ಲಾಭ ಪಡೆದ ಪ್ರೀತಿಯ ತಾಯಿ ಪೂನಂಳನ್ನು ಕೊಲ್ಲಲು 1.5 ಲಕ್ಷ ರೂಪಾಯಿ ನೀಡುವುದಾಗಿ ತಾಂತ್ರಿಕನಿಗೆ ಭರವಸೆ ನೀಡಿದ್ದಳು ಎನ್ನಲಾಗಿದೆ. ಅಲ್ಲದೆ, ಮುಂಗಡವಾಗಿ 5,000 ರೂ.ಗಳನ್ನು ನೀಡಿದ್ದು, ಪೂನಂನನ್ನು ಕೊಂದ ನಂತರ ಉಳಿದ ಮೊತ್ತವನ್ನು ನೀಡುವುದಾಗಿ ಹೇಳಿದ್ದಳು.
ಯೋಜನೆಯ ಪ್ರಕಾರ, ಪ್ರೀತಿ ಪೂನಂಗೆ ಕರೆ ಮಾಡಿ ನಂತರ ತಾಂತ್ರಿಕನನ್ನು ಭೇಟಿಯಾದ ನಂತರ ಅವಳ ಲಿಂಗ ಬದಲಾಯಿಸುವುದನ್ನು ಆತ ನಂಬುವಂತೆ ಮಾಡಿದ್ದಾನೆ. ಪೂನಂ ಏಪ್ರಿಲ್ 18 ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು. ನಂತರ ಆಕೆಯ ಸಹೋದರ ಏಪ್ರಿಲ್ 26 ರಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.
ಅಲ್ಲದೆ ಪೂನಂ, ಪ್ರೀತಿ ಮತ್ತು ರಾಮನಿವಾಸ ಜೊತೆ ಮಾತನಾಡಿರುವುದು ಕಣ್ಗಾವಲು ಮೂಲಕ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ಪೊಲೀಸರು ರಾಮ ನಿವಾಸನನ್ನು ವಶಕ್ಕೆ ಪಡೆದರು. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪೂನಂ ಅವಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿ ಇದೇ ವೇಳೆ ಕುತ್ತಿಗೆ ಸೀಳಿ ತುಂಡಾಗುವಂತೆ ಸುತ್ತಿಗೆಯಿಂದ ಹೊಡೆದಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೂನಂ ದೇಹವನ್ನು ಪೊದೆಗಳಲ್ಲಿ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಆರೋಪಿ ತಾಂತ್ರಿಕ ಮತ್ತು ಪ್ರೀತಿಯನ್ನು ಮಂಗಳವಾರ ಬಂಧಿಸಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ. ಪ್ರೀತಿಯ ತಾಯಿ ಊರ್ಮಿಳಾಳಿಗೆ ಹುಡುಕಾಟ ನಡೆಯುತ್ತಿದೆ.ಹತ್ಯೆಗೆ ಬಳಸಿದ ಸುತ್ತಿಗೆಯನ್ನು ಕೂಡ ಪೊಲೀಸರು ತಂತ್ರಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ