ಉಡುಪಿ : ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿಯನ್ನು ರಕ್ಷಿಸಲು ತಾನೂ ನೀರಿನ ಹೊಂಡಕ್ಕೆ ಹಾರಿದ್ದ ಪತಿಯೂ ಪತ್ನಿಯೊಂದಿಗೆ ಸಾವಿಗೀಡಾದ ಘಟನೆ ರು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಕಾರ್ಕಳದ ನಲ್ಲೂರು ಎಂಬಲ್ಲಿ ನಡೆದಿದೆ.
ಮೃತರನ್ನು ಯಲ್ಲಾಪುರ ಉತ್ತರಕನ್ನಡ ಮೂಲದ ಎಮ್ಯಾನುವಲ್ ಸಿದ್ದಿ (36) ಮತ್ತು ಆತನ ಪತ್ನಿ ಯಶೋದಾ (27) ಎಂದು ಗುರುತಿಸಲಾಗಿದೆ.
ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಹುರ್ಲಾಡಿ ಎಂಬಲ್ಲಿ ಮುಂಬಯಿ ಹೊಟೇಲ್ ಮಾಲಕರೊಬ್ಬರ ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ನಡುವೆ ಭಾನುವಾರ ಜಗಳ ನಡೆದಿದೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕೆರೆಗೆ ಹಾರಿದ್ದಾಳೆ. ಅವಳನ್ನು ರಕ್ಷಿಸಲು ಪತಿಯೂ ಕರೆಗೆ ಹಾರಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋದಾ (32) ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ತೋಟದ ಕೆಲಸಕ್ಕೆಂದು ಬಂದಿದ್ದರು. ದಂಪತಿ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ಪತಿ-ಪತ್ನಿಯ ಮಧ್ಯೆ ಯಾವುದೋ ವಿಷಯಕ್ಕೆ ಜಗಳವಾಗಿದೆ ಎನ್ನಲಾಗಿದೆ. ಜಗಳ ಜೋರಾಗಿ ತೀವ್ರ ಬೇಸರಗೊಂಡ ಯಶೋದ ಸಮೀಪದ ಕೆರೆಗೆ ಹಾರಿದಳು. ಪತ್ನಿಯ ಜೀವ ಕಾಪಾಡಲು ಇಮ್ಯಾನುಲ್ ಕೂಡ ಕೆರೆಗೆ ಹಾರಿದ್ದು, ಇಬ್ಬರಿಗೂ ಈಜು ಗೊತ್ತಿಲ್ಲದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವರ ಸಾವಿನಿಂದ ಪುಟ್ಟ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಸ್ಥಳಕ್ಕೆಪೊಲೀಸರು ಭೇಟಿ ನೀಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ