ಕೈರೊ: ಅಮೆರಿಕದ ತಮ್ಮ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಪ್ರಧಾನಿ ಮೋದಿ ಅವರು ಈಜಿಪ್ಟ್‌ಗೆ ತಮ್ಮ ಮೊದಲ ಭೇಟಿಗಾಗಿ ಶನಿವಾರ ಮುಂಜಾನೆ ಕೈರೋ ತಲುಪಿದರು.
ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕಾಗಿ ಶನಿವಾರ ಇಜಿಪ್ಟಿಗೆ ಬಂದಿಳಿದಿದ್ದು, ರಾಜಧಾನಿ ಕೈರೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಭಾರತೀಯ ವಲಸಿಗರು ಅವರಿಗೆ ಹೋಟೆಲ್‌ನಲ್ಲಿ ಅದ್ದೂರಿ ಸ್ವಾಗತವನ್ನೂ ನೀಡಿದರು.
ಇಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಈಜಿಪ್ಟ್‌ಗೆ ಎರಡು ದಿನಗಳ ಭೇಟಿಗೆ ಮೋದಿ ತೆರಳಿದ್ದಾರೆ. 1997 ರ ನಂತರ ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.
ಶನಿವಾರ ಸಂಜೆ ಕೈರೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರೊಂದಿಗೆ ದುಂಡುಮೇಜಿನ ಸಭೆ ನಡೆಸಿದರು. ಅವರು ಈ ಭೇಟಿಯು ಈಜಿಪ್ಟ್‌ನೊಂದಿಗಿನ ಭಾರತದ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ಪ್ರಧಾನಿ ಟ್ವೀಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಹೇಳಿದರು, ಈಜಿಪ್ಟ್‌ನ ಜನರು ಭಾರತೀಯ ಉಡುಪುಗಳನ್ನು ಧರಿಸುವುದು ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.
ಭಾನುವಾರ, ಪ್ರಧಾನಿ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಮತ್ತು ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ ಮತ್ತು ಮಾತುಕತೆಯ ನಂತರ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.
ಭಾರತ ಮತ್ತು ಈಜಿಪ್ಟ್‌ನ ನಾಗರೀಕ ಮತ್ತು ಬಹುಮುಖಿ ಪಾಲುದಾರಿಕೆಗೆ ಮತ್ತಷ್ಟು ವೇಗವನ್ನು ನೀಡಲು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತು ಈಜಿಪ್ಟ್ ಸರ್ಕಾರದ ಹಿರಿಯ ಸದಸ್ಯರೊಂದಿಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಈ ಭೇಟಿಯ ಮೊದಲು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಪರಿಸರ ಸಚಿವ ಭೂಪೇಂದರ ಯಾದವ್ ಅವರು ಸಹ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಅದೇ ರೀತಿ, ಈಜಿಪ್ಟ್ ಸರ್ಕಾರದ ಕನಿಷ್ಠ ಮೂರರಿಂದ ನಾಲ್ಕು ಸಚಿವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ G20 ಪ್ರೆಸಿಡೆನ್ಸಿ ಅವಧಿಯಲ್ಲಿ ಈಜಿಪ್ಟ್ ಅನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ