ಹಾಡಹಗಲೇ ಜನನಿಬಿಡ ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ, ಗನ್ ತೋರಿಸಿ ಹಣ ದೋಚಿದ ದುಷ್ಕರ್ಮಿಗಳು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನದಟ್ಟಣೆಯ ಸುರಂಗ ಮಾರ್ಗದಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಇಂಡಿಯಾ ಗೇಟ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಡೆಲಿವರಿ ಏಜೆಂಟನ ಕಾರು ಅಡ್ಡಗಟ್ಟಿ ಗನ್ ತೋರಿಸಿ ಕಾರಿನಲ್ಲಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.
ಸಜನಕುಮಾರ ಪಟೇಲ್‌ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರು ಚಾಂದಿನಿ ಚೌಕ್‌ನಲ್ಲಿರುವ ಓಮಿಯಾ ಎಂಟರ್‌ಪ್ರೈಸಸ್‌ನಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತ ಜಿಗರ್ ಪಟೇಲ್ ಜೊತೆ ಸೇರಿ ಶನಿವಾರ ಸಂಜೆ ಗುರುಗ್ರಾಮಕ್ಕೆ 2 ಲಕ್ಷ ರೂ. ನೀಡಲು ಹೋಗುತ್ತಿದ್ದರು.
ರಿಂಗ್ ರಸ್ತೆಯಿಂದ ಪ್ರಗತಿ ಮೈದಾನದ ಸುರಂಗ ಮಾರ್ಗ ಪ್ರವೇಶಿಸಿ ಸ್ವಲ್ಪ ದೂರ ಸಾಗುತ್ತಿದ್ದಾಗ 2 ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ ಬಲವಂತವಾಗಿ ಕ್ಯಾಬ್ ತಡೆದಿದ್ದಾರೆ. ಬಳಿಕ ದುಷ್ಕರ್ಮಿಗಳು ನಗದು ತುಂಬಿದ್ದ ಬ್ಯಾಗ್ ಅನ್ನು ದೋಚಿದ್ದಾರೆ.

1.5-ಕಿಮೀ ಸುರಂಗವು ನವದೆಹಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುತ್ತದೆ.
ಅಪರಾಧ ನಡೆದ ಸ್ಥಳದಲ್ಲಿ ನಾಲ್ವರು ದರೋಡೆಕೋರರು ಇದ್ದರು. ದರೋಡೆಕೋರರು ಎರು ಬೈಕ್‌ನಲ್ಲಿ ಬಂದು ಕಾರನ್ನು ಅಡ್ಡಹಾಕಿದ್ದಾರೆ. ಬಿಳಿ ಕ್ಯಾಬ್ ನಿಲ್ಲಿಸಿದ ಬಳಿಕ ಕಾರಿನ ಒಳಗಿದ್ದವರಿಗೆ ಬಂದೂಕು ತೋರಿಸಿದರು, ದರೋಡೆಕೋರರಲ್ಲಿ ಒಬ್ಬ ಕಾರಿನ ಬಾಗಿಲನ್ನು ತೆರೆದು ಕಪ್ಪು ಬ್ಯಾಗ್‌ ಅನ್ನು ಕಾರಿನಿಂದ ಹೊರಗೆಳೆದಿದ್ದಾನೆ. ನಂತರ ಓಡಿಹೋಗಿ ಬೈಕ್‌ನಲ್ಲಿ ಕುಳಿತ ನಂತರ ದರೋಡೆಕೋರರು ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ವಿಶೇಷವೆಂದರೆ ವಾಹನ ಸವಾರರು ನೋಡುತ್ತಿದ್ದಂತೆಯೇ ಸನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

ನಗರದ ಹೃದಯ ಭಾಗದಲ್ಲಿರುವ ಜನನಿಬಿಡ ಸುರಂಗದೊಳಗೆ ಶಸ್ತ್ರಸಜ್ಜಿತ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ, ಅದರಲ್ಲಿದ್ದವರನ್ನು ಗನ್ ತೋರಿಸಿ ದರೋಡೆ ಮಾಡುತ್ತಿರುವ ವಿಡಿಯೊ ಕಂಡುಬಂದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

2 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement