ಹೊನ್ನಾವರ : ಆಟೊರಿಕ್ಷಾ ಮೇಲೆ ಬಿದ್ದ ಬೃಹತ್ ಮರ, ಕೂದಲೆಳೆ ಅಂತರದಲ್ಲಿ ಚಾಲಕ ಪಾರು

ಹೊನ್ನಾವರ : ಹೋಗುತ್ತಿದ್ದ ಆಟೊ ರಿಕ್ಷಾ ಮೇಲೆ ಬೃಹತ್‌ ಮರವೊಂದು ಬಿದ್ದಿದ್ದು ಅದೃಷ್ಟವಶಾತ್‌ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತದ ವ್ಯಾಪ್ತಿಯ ಕಣ್ಣಿಮನೆಯ ಸಮೀಪದ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹಳಗೇರಿಯ ಶ್ರೀನಾಥ ಗೌಡ ಎಂಬವರು ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ದೈತ್ಯಾಕಾರದ ಮರ ಒಮ್ಮೆಗೇ ಆಟೊ ರಿಕ್ಷಾ ಮೇಲೆ ಬಿದ್ದಿದೆ. ಆಟೋ ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ಹೇಳಲಾಗಿದ್ದು, ಆಟೋರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಲ್ಲದೆ, ಆಟೋರಿಕ್ಷಾದ ಹಿಂಬದಿಯ ಸೀಟಿನಲ್ಲಿಯೂ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಸಂಭವನೀಯ ಅಪಾಯ ತಪ್ಪಿದೆ ಎಂದು ವರದಿಯಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement