‘ಪ್ರಧಾನಿ ಮೋದಿ ನನ್ನ 15ನೇ ಮಗ… ಅವರಿಗೆ ನನ್ನ 25 ಎಕರೆ ಭೂಮಿ ಬರೆದುಕೊಡುತ್ತೇನೆ ಎಂದ ಈ ಶತಾಯುಷಿ ಅಜ್ಜಿ…!

ಭೋಪಾಲ: ‘ಮೋದಿ ನನ್ನ 15ನೇ ಮಗ… ನಾನು ಅವರಿಗೆ 25 ಎಕರೆ ಜಮೀನು ಬರೆದುಕೊಡುತ್ತೇನೆ’…. ಮಧ್ಯಪ್ರದೇಶದ 100 ವರ್ಷದ ಅಜ್ಜಿ ಪ್ರಧಾನಿ ಮೋದಿಗೆ 25 ಎಕರೆ ಭೂಮಿಯನ್ನು ದಾನ ಮಾಡುವುದಾಗಿ ಘೋಷಿಸಿದ್ದಾಳೆ. ರಾಜಗಢ ಜಿಲ್ಲೆಯ ಹರಿಪುರ ಗ್ರಾಮದ ಮಂಗಿಬಾಯಿ ತನ್ವರ್ ಎಂಬ ವೃದ್ಧೆಯೇ ಹೀಗೆ ಘೋಷಿಸಿದ್ದಾಳೆ.
ಅಜ್ಜಿಗೆ 14 ಮಕ್ಕಳಿದ್ದಾರೆ. ಆದರೆ ತಾನು ಮೋದಿಯನ್ನು ತನ್ನ 15ನೇ ಮಗ ಎಂದು ಪರಿಗಣಿಸುವುದಾಗಿ ಹೇಳಿದ್ದಾಳೆ. ಪ್ರಧಾನಿಯವರು ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತನಗೂ ಅವರು ಜಾರಿಗೆ ತಂದು ಅನೇಕ ಯೋಜನೆಗಳು ಅನುಕೂಲ ಒದಗಿಸಿವೆ ಎಂದು ಅಜ್ಜಿ ಹೇಳಿದ್ದಾಳೆ. ಮೋದಿ ತಮ್ಮೊಂದಿಗೆ ಸೇರಿ ದೇಶದ ಹಲವಾರು ವಯೋವೃದ್ಧರ ಅಗತ್ಯಗಳನ್ನು ಪೂರೈಸುತ್ತಿದ್ದಾರೆ ಎಂದು ಅಜ್ಜಿ ಹೇಳಿದ್ದಾಳೆ.
ಆದ್ದರಿಂದಲೇ ಮೋದಿಯನ್ನು ನಾನು ನನ್ನ 15ನೇ ಮಗನೆಂದು ಪರಿಗಣಿಸಿದ್ದೇನೆ ಹಾಗೂ ತನ್ನ 25 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆಯುವುದಾಗಿ ಮಂಗಿಬಾಯಿ ಸ್ಪಷ್ಟಪಡಿಸಿದ್ದಾಳೆ. “ಮೋದಿ ನನಗೆ ಮನೆ ಕೊಟ್ಟಿದ್ದಾರೆ … ಅವರು ನನಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ. ವಿಧವಾ ಪಿಂಚಣಿ ನೀಡುವ ಮೂಲಕ ಆರ್ಥಿಕ ನೆರವು ನೀಡುತ್ತಿದ್ದಾರೆ. ಆಹಾರವನ್ನು ನೀಡಲಾಗುತ್ತದೆ. ಮೋದಿ ಹೀಗೆ ಅನುಕೂಲ ಮಾಡಿದ್ದರಿಂದಲೇ ಹಣ ಉಳಿಸಿಕೊಂಡು ನಾನು ತೀರ್ಥಯಾತ್ರೆ ಹೋಗಿ ಬರಲು ಸಾಧ್ಯವಾಯಿತು. ಅದಕ್ಕೇ ಅವನು ನನ್ನ ಮಗ ಎಂದು ಹೇಳಿದ್ದಾಳೆ.
ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಅವಕಾಶವಿದ್ದರೆ ನಾನೇ ಮೋದಿಯನ್ನು ಭೇಟಿಯಾಗಲು ಬಯಸುತ್ತೇನೆ” ಎಂದು ಮಂಗಿಬಾಯಿ ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement