ಬೆಂಗಳೂರು-ಧಾರವಾಡ ‘ವಂದೇ ಭಾರತ’ ರೈಲಿನ ದರ ಪರಿಷ್ಕರಣೆ : ಹೊಸ ದರ ಹೀಗಿದೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜೂನ್ 27) ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸ್​ಪ್ರೆಸ್​ ರೈಲು ಸೇರಿದಂತೆ ಐದು ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದ್ದರು. ಈಗ ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿನ ಟಿಕೆಟ್​ ದರವನ್ನು ಪರಿಷ್ಕರಣೆ ಮಾಡಿದೆ.
ಪರಿಷ್ಕರಣೆಯಲ್ಲಿ ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್​ ದರ ಹೆಚ್ಚಿಸಿದ್ದರೆ, ಎಸಿ ಕಾರ್‌ಚೇರ್‌ ಟಿಕೆಟ್​ ದರ ಇಳಿಕೆ ಮಾಡಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರೂ. ಹೆಚ್ಚಿಸಲಾಗಿದೆ.
ಬೆಂಗಳೂರಿನಿಂದ ಧಾರವಾಡ
ಪರಿಷ್ಕೃತ ಎಸಿ ಕಾರ್‌ಚೇರ್‌ ಟಿಕೆಟ್​ ದರ
ಎಸಿ ಕಾರ್‌ಚೇರ್‌ ಟಿಕೆಟ್​ ದರ ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರದ ಪ್ರಕಾರ ಬೆಂಗಳೂರು-ಧಾರವಾಡಕ್ಕೆ 1185 ರೂ., ಬೆಂಗಳೂರು- ಹುಬ್ಬಳ್ಳಿ 1155 ರೂ., ಬೆಂಗಳೂರು- ದಾವಣಗೆರೆ 935 ರೂ., ಯಶವಂತಪುರ-ದಾವಣಗೆರೆ 920 ರೂ, ಯಶವಂತಪುರ-ಹುಬ್ಬಳ್ಳಿ 1155 ರೂ., ಯಶವಂತಪುರ-ಧಾರವಾಡ 1185 ರೂ., ಹಾಗೂ ದಾವಣಗೆರೆ-ಧಾರವಾಡ 555 ರೂ., ದಾವಣಗೆರೆ-ಹುಬ್ಬಳ್ಳಿ 520 ರೂ, ಹುಬ್ಬಳ್ಳಿಯಿಂದ ಧಾರವಾಡಕ್ಕೆ 365 ರೂ.ಗಳನ್ನು ನಿಗದಿಪಡಿಸಲಾಗಿದೆ.
ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್ ದರ
ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್​ ದರ ಏರಿಕೆ ಮಾಡಲಾಗಿದ್ದು, ಬೆಂಗಳೂರು- ಧಾರವಾಡ 2265 ರೂ., ಬೆಂಗಳೂರು- ಹುಬ್ಬಳ್ಳಿ 2200ರೂ., ಬೆಂಗಳೂರು-ದಾವಣಗೆರೆ 1760ರೂ., ಯಶವಂತಪುರ- ಧಾರವಾಡ 2265 ರೂ., ಯಶವಂತಪುರ- ಹುಬ್ಬಳ್ಳಿ 2200ರೂ., ಯಶವಂತಪುರ- ದಾವಣಗೆರೆ 1730ರೂ., ದಾವಣಗೆರೆ- ಹುಬ್ಬಳ್ಳಿ 1005ರೂ., ದಾವಣಗೆರೆ- ಧಾರವಾಡ 1075ರೂ., ಹುಬ್ಬಳ್ಳಿ -ಧಾರವಾಡ 690ರೂ.ಗಳನ್ನು ನಿಗದಿ ಮಾಡಲಾಗಿದೆ.
ಧಾರವಾಡದಿಂದ ಬೆಂಗಳೂರು
ಎಸಿ ಚೇರ್‌ಕಾರ್‌:
ಧಾರವಾಡ-ಕೆಎಸ್‌ಆರ್‌ ಬೆಂಗಳೂರು .1350 ರೂ., ಹುಬ್ಬಳ್ಳಿ- ಬೆಂಗಳೂರು .1320 ರೂ., ದಾವಣಗೆರೆ-ಬೆಂಗಳೂರು 880 ರೂ., ಯಶವಂತಪುರ- ದಾವಣಗೆರೆ-ಯಶವಂತಪುರ 865 ರೂ., ಹುಬ್ಬಳ್ಳಿ-ಯಶವಂತಪುರ 1320 ರೂ., ಧಾರವಾಡ- ಯಶವಂತಪುರ 1350 ರೂ., ಹುಬ್ಬಳ್ಳಿ- ದಾವಣಗೆರೆ 725 ರೂ., ಧಾರವಾಡ- ದಾವಣಗೆರೆ 765 ರೂ., ಕೆಎಸ್‌ಆರ್‌ ಬೆಂಗಳೂರು 365 ರೂ., ಧಾರವಾಡ-ಹುಬ್ಬಳ್ಳಿ 365 ರೂ.,
ಎಕ್ಸಿಕ್ಯೂಟಿವ್‌ ಕ್ಲಾಸ್‌:
ಧಾರವಾಡ-ಕೆಎಸ್‌ಆರ್‌ ಬೆಂಗಳೂರು 2460 ರೂ., ಹುಬ್ಬಳ್ಳಿ- ಬೆಂಗಳೂರು 2395 ರೂ., ದಾವಣಗೆರೆ-ಬೆಂಗಳೂರು 1710 ರೂ., ಯಶವಂತಪುರ-ದಾವಣಗೆರೆ-ಯಶವಂತಪುರ .1680, ಹುಬ್ಬಳ್ಳಿ-ಯಶವಂತಪುರ 2395 ರೂ., ಧಾರವಾಡ- ಯಶವಂತಪುರ 2460 ರೂ., ಹುಬ್ಬಳ್ಳಿ- ದಾವಣಗೆರೆ 1235 ರೂ., ಧಾರವಾಡ-ದಾವಣಗೆರೆ 1305 ರೂ., ಧಾರವಾಡ-ಹುಬ್ಬಳ್ಳಿ 690 ರೂ., ಹಾಗೂ ಕೆಎಸ್‌ಆರ್‌ ಬೆಂಗಳೂರು 690 ರೂ.ಗಳಾಗಿವೆ.

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆ‌ರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement