ತಿರುವನಂತಪುರ : ತಿರುವನಂತಪುರ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿನಿಯರ ಗುಂಪು ಆಪರೇಷನ್ ಥಿಯೇಟರ್‌ಗಳಲ್ಲಿ ಹಿಜಾಬ್ ಧರಿಸಲು ಅನುಮತಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೂ ಆಪರೇಷನ್ ಥಿಯೇಟರ್‌ನೊಳಗೆ ಉದ್ದತೋಳಿನ ಸ್ಕ್ರಬ್ ಜಾಕೆಟ್‌ಗಳು (ಶಸ್ತ್ರಚಿಕಿತ್ಸಕರು ಧರಿಸಿರುವ ವಿಶೇಷ ನೈರ್ಮಲ್ಯ ಉಡುಪು) ಮತ್ತು ಸರ್ಜಿಕಲ್ ತಲೆಗವಸುಗಳನ್ನು ಧರಿಸಲು ಪ್ರಾಂಶುಪಾಲರಿಂದ ಅನುಮತಿ ಕೋರಿದ್ದಾರೆ.
ವಿದ್ಯಾರ್ಥಿಗಳ ಪ್ರಕಾರ ಹಿಜಾಬ್ ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ಎಲ್ಲಾ ಸಮಯದಲ್ಲೂ ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ಆಪರೇಷನ್ ಥಿಯೇಟರ್‌ನೊಳಗೆ ‘ಹಿಜಾಬ್’ ಧರಿಸಲು ಸಾಧ್ಯವಿಲ್ಲ. ಆದ್ದರಿಂದ, ಪರ್ಯಾಯ ಆಯ್ಕೆಗಳಿಗೆ ಅವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ.
ಹಿಜಾಬ್ ಸಂಪ್ರದಾಯ ಅನುಸರಿಸುವುದು ಮತ್ತು ಶಸ್ತ್ರಚಿಕಿತ್ಸಾ ಕರ್ತವ್ಯಗಳನ್ನು ನಿರ್ವಹಿಸುವುದರ ನಡುವೆ ಸಮತೋಲನವನ್ನು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆ ಅವರು ಕೇಳಿದ್ದಾರೆ.
ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಮುಸ್ಲಿಂ ಮಹಿಳೆಯರು ಎಲ್ಲಾ ಸಂದರ್ಭಗಳಲ್ಲಿಯೂ ಹಿಜಾಬ್ ಧರಿಸುವುದು ಕಡ್ಡಾಯ. ಹೀಗಾಗಿ ಪರ್ಯಾಯ ಆಯ್ಕೆಗಳ ಬಗ್ಗೆ ಕಾಲೇಜು ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನು ದೃಢಪಡಿಸಿರುವ ತಿರುವನಂತಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಿನ್ನೆಟ್ ಅವರು, ಆಪರೇಷನ್ ಥಿಯೇಟರ್‌ನೊಳಗೆ ಉದ್ದತೋಳಿನ ಜಾಕೆಟ್‌ಗಳನ್ನು ಧರಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಲು ಶಸ್ತ್ರಚಿಕಿತ್ಸಕರು ಮತ್ತು ಸೋಂಕು ನಿಯಂತ್ರಣ ತಂಡದ ಸಭೆಯನ್ನು ಕರೆಯುವುದಾಗಿ ಹೇಳಿದ್ದಾರೆ. ಇದು ಸಾಧ್ಯವೋ ಇಲ್ಲವೋ ಎಂಬುದನ್ನು ತಂಡ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಪ್ರಾಂಶುಪಾಲರು ಜೂನ್ 26 ರಂದು ಮನವಿಯನ್ನು ಸ್ವೀಕರಿಸಿದ್ದಾರೆ. ಪ್ರತಿ ಬಾರಿ ಆಪರೇಷನ್ ಥಿಯೇಟರ್‌ನೊಳಗೆ ಪ್ರವೇಶಿಸಿದಾಗ ಅವರು ತಮ್ಮ ಕೈಗಳನ್ನು ಮೊಣಕೈಯವರೆಗೆ ಉದ್ದತೋಳಿನ ಉಡುಪು ಮತ್ತು ಗೌನ್ ಧರಿಸಬಹುದು ಎಂದು ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ವಿವರಿಸಿದರು. ಆದರೆ ಉದ್ದನೆಯ ತೋಳುಗಳನ್ನು ಧರಿಸುವುದು ಸಮಸ್ಯೆಯಾಗಬಹುದು. ಆದಾಗ್ಯೂ, ಈ ವಿಷಯವನ್ನು ಪರಿಶೀಲಿಸಲು ಶಸ್ತ್ರಚಿಕಿತ್ಸಕರು ಮತ್ತು ಸೋಂಕು ನಿಯಂತ್ರಣ ತಂಡದ ಸಭೆ ಕರೆಯುವುದಾಗಿ ಪ್ರಾಂಶುಪಾಲರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ