ನವದೆಹಲಿ: ದೆಹಲಿಯ ಬುರಾರಿಯಲ್ಲಿ ವ್ಯಕ್ತಿಯೊಬ್ಬ ತನ್ನ 68 ವರ್ಷದ ತಂದೆ ‘ಬ್ಲಾಕ್ ಮ್ಯಾಜಿಕ್’ ಅಭ್ಯಾಸ ಮಾಡುತ್ತಿದ್ದಾನೆ ಎಂದು ಶಂಕಿಸಿ ಅದನ್ನು ರೆಕಾರ್ಡ್ ಮಾಡಲುತನ್ನ ಮೊಬೈಲ್ ಕ್ಯಾಮೆರಾ ಇಟ್ಟಿದ್ದ. ಆದರೆ ಅದರಲ್ಲಿ ತಂದೆ ನೆರೆಹೊರೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಿರುವ ಆಘಾತಕಾರಿ ದೃಶ್ಯ ಸೆರೆಯಾಗಿದೆ..
ನಂತರ ಈ ವ್ಯಕ್ತಿ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಬಾಲಕಿಯ ತಂದೆಗೆ ಕಳುಹಿಸಿದ್ದಾನೆ. ನಂತರ ಬಾಲಕಿ ತಂದೆ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ವ್ಯಕ್ತಿ ಮತ್ತು ಆತನ ತಂದೆ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದು, ವಿವರವಾದ ತನಿಖೆ ನಡೆಸುತ್ತಿದ್ದಾರೆ.
ಜೂನ್ 27 ರಂದು ಬುರಾರಿ ಪೊಲೀಸ್ ಠಾಣೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ಮಗಳ ಮೇಲೆ ತಮ್ಮ ನೆರೆಹೊರೆಯ 68 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದಾಗ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್‌ನಲ್ಲಿ ಈ ಅಪರಾಧ ನಡೆದಿದೆ.
68 ವರ್ಷದ ವ್ಯಕ್ತಿ ತಾನು ವಾಸಿಸುತ್ತಿದ್ದ ವಸತಿ ಸಮುಚ್ಚಯದ ನಿವಾಸಿಯಾಗಿರುವುದರಿಂದ ಮತ್ತು ಆಗಾಗ್ಗೆ ತನ್ನ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಗಳಿಗೆ ಹೋಗುತ್ತಿದ್ದ ಕಾರಣ ತನಗೆ ಪರಿಚಯವಾಗಿದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಆ ವ್ಯಕ್ತಿ, ಆಕೆಯ ಮನೆಗೆ ಭೇಟಿ ನೀಡುತ್ತಿದ್ದ ಮತ್ತು ತನ್ನನ್ನು ಅನುಚಿತವಾಗಿ ಸ್ಪರ್ಶಿಸುವ ಸಲುವಾಗಿ ತನ್ನೊಂದಿಗೆ ಏಕಾಂಗಿಯಾಗಿರಲು ಅವಕಾಶಗಳನ್ನು ಹುಡುಕುತ್ತಿದ್ದ ಎಂದು ಬಾಲಕಿ ಹೇಳಿದ್ದಾಳೆ.
ಏಪ್ರಿಲ್‌ನಲ್ಲಿ ಬಾಲಕಿ ಬೀದಿಯಲ್ಲಿದ್ದಾಗ ವ್ಯಕ್ತಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿ ಬಿಡುವಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಆತ, ಜೂನ್ 27ರಂದು ಬಾಲಕಿಯ ತಂದೆಗೆ ಅಪರಾಧದ ವೀಡೊಯೊವನ್ನು ಆತನ ಮಗ ಕಳುಹಿಸದೇ ಇದ್ದಿದ್ದರೆ ಈ ವಿಷಯ ಮುಚ್ಚಿ ಹೋಗುತ್ತಿತ್ತು.
ವಿಚಾರಣೆಯ ಸಮಯದಲ್ಲಿ, ತಂದೆ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ಶಂಕಿಸಿದ್ದರಿಂದ ತನ್ನ ತಂದೆಯನ್ನು ಚಿತ್ರೀಕರಿಸಲು ತನ್ನ ಮೊಬೈಲ್ ಕ್ಯಾಮೆರಾವನ್ನು ರೆಕಾರ್ಡ್ ಮಾಡಲು ಇಟ್ಟಿದ್ದಾಗಿ ಮಗ ಪೊಲೀಸರಿಗೆ ತಿಳಿಸಿದ್ದಾನೆ. ಆತ ತನ್ನ ಮೊಬೈಲ್ ಕ್ಯಾಮರಾವನ್ನು ಆನ್ ಮಾಡಿದಾಗ ತನ್ನ ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವುದು ಅದರಲ್ಲಿ ರೆಕಾರ್ಡ್ ಆಗಿರುವುದು ಗೊತ್ತಾಗಿದೆ ಎಂದು ಹೇಳಿದ್ದಾನೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 (ತಪ್ಪೊಪ್ಪಿಗೆಗಳು ಮತ್ತು ಹೇಳಿಕೆಗಳ ರೆಕಾರ್ಡಿಂಗ್) ಅಡಿಯಲ್ಲಿ ಹುಡುಗಿಯ ಹೇಳಿಕೆಯನ್ನು ದಾಖಲಿಸಲಾಗುತ್ತದೆ.
ತಂದೆ-ಮಗ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 4 (ನುಗ್ಗುವ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ವೀಡಿಯೊವನ್ನು ಸಂಗ್ರಹಿಸಿಟ್ಟು ಶೇರ್ ಮಾಡಿದ್ದಕ್ಕಾಗಿ ಮಗನನ್ನು ಪೋಕ್ಸೋ ಅಡಿಯಲ್ಲಿ ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, 68 ವರ್ಷದ ಆರೋಪಿ ಮಿರ್ಜಾಪುರ ವೆಬ್ ಸರಣಿಯಿಂದ ಪ್ರಭಾವಿತನಾಗಿದ್ದ, ಅಲ್ಲಿ ಪಂಕಜ್ ತ್ರಿಪಾಠಿ ನಿರ್ವಹಿಸಿದ ‘ಕಲೀನ್ ಭಯ್ಯಾ’ ಎಂಬ ಪಾತ್ರದಲ್ಲಿ ತಂದೆ ಮನೆಯ ಕೆಲಸದಾಕೆಯನ್ನು ಅತ್ಯಾಚಾರ ಮಾಡುತ್ತಾನೆ. 68 ವರ್ಷದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಗನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ತನ್ನ ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ವೀಡಿಯೊ ರೆಕಾರ್ಡ್ ಮಾಡಲು ಬಳಸಿದ ಫೋನ್ ಅನ್ನು ಪೊಲೀಸರು ಪರೀಕ್ಷೆಗಾಗಿ ವಶಪಡಿಸಿಕೊಂಡಿದ್ದಾರೆ.
ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಮತ್ತು ಹುಡುಗಿಯ ಕುಟುಂಬಕ್ಕೆ ಬೆದರಿಕೆ ಹಾಕಿದ ಸ್ಥಳೀಯರ ಮೇಲೆ ಕ್ರಿಮಿನಲ್ ಬೆದರಿಕೆ ಮತ್ತು ಹಲ್ಲೆಗಾಗಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ