ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ)ಗೆ ಮತ್ತೊಂದು ಹಿನ್ನಡೆಯಾಗಿದ್ದು, ಆದಿತ್ಯ ಠಾಕ್ರೆ ಅವರ ಆಪ್ತ ಸಹಾಯಕ ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಭ್ರಷ್ಟಾಚಾರದ ವಿರುದ್ಧ ಆದಿತ್ಯ ಠಾಕ್ರೆ ಪ್ರತಿಭಟನಾ ಮೆರವಣಿಗೆ ಮುನ್ನಡೆಸುತ್ತಿರುವ ಅದೇ ದಿನ ಕನಾಲ್ ಅವರು ಪಕ್ಷವನ್ನು ಬದಲಾಯಿಸಲಿದ್ದಾರೆ.
ಆದಿತ್ಯ ಠಾಕ್ರೆ ನೇತೃತ್ವದ ಶಿವಸೇನೆಯ ಯುವ ವಿಭಾಗವಾದ ಯುವಸೇನೆಯ ಅತ್ಯಂತ ಸಕ್ರಿಯ ಸದಸ್ಯರಾಗಿದ್ದ ಕನಾಲ್ ಅವರು ಉದ್ಧವ್ ಠಾಕ್ರೆ ಶಿವಸೇನೆಯ ಕಾರ್ಯಚಟುವಟಿಕೆಯಿಂದ ಅಸಮಾಧಾನಗೊಂಡಿದ್ದರಿಂದ ಈಗಾಗಲೇ ಅದರ ಕೋರ್ ಕಮಿಟಿಯನ್ನು ತೊರೆದಿದ್ದಾರೆ.
ನಿನ್ನೆ, ಕನಾಲ್ ಅವರು ಸೇರಿದಂತೆ ಬಾಂದ್ರಾ ಪಶ್ಚಿಮದಿಂದ ಯುವಸೇನೆಯ ಎಲ್ಲಾ ಪದಾಧಿಕಾರಿಗಳನ್ನು ಶಿವಸೇನೆ ಅಮಾನತುಗೊಳಿಸಿದ ನಂತರ ದುಃಖವಾಗುತ್ತಿದೆ ಎಂದು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಯಾರು ಮಾಡಿದ್ದಾರೆಂದು ಚೆನ್ನಾಗಿ ತಿಳಿದಿದೆ ಆದರೆ ನಿಮ್ಮ ಪರವಾಗಿ ಕೆಲಸ ಮಾಡಿದವರನ್ನು ಕೇಳದೆ ತೆಗೆದುಹಾಕುವುದು ದುರಹಂಕಾರವಾಗಿದೆ ಮತ್ತು ನೀವು ನನ್ನನ್ನು ತೆಗೆದುಹಾಕಬಹುದು ಆದರೆ ಹಗಲು ರಾತ್ರಿ ಕೆಲಸ ಮಾಡಿದ ಜನರನ್ನು ತೆಗೆದುಹಾಕಲಾಗುವುದಿಲ್ಲ ಎಂದು ಅವರು ಬರೆದಿದ್ದಾರೆ.
ಹಿಂದೆ, ಕನಾಲ್ ಅವರು ಶಿರಡಿಯಲ್ಲಿ ಸಾಯಿಬಾಬಾರ ದೇವಸ್ಥಾನದ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST)ನ ಟ್ರಸ್ಟಿಯಾಗಿ ನೇಮಕಗೊಂಡಿದ್ದರು. ಅವರು 2017 ರಲ್ಲಿ ಬಿಎಂಸಿಯ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದರು.
ಈ ತಿಂಗಳ ಆರಂಭದಲ್ಲಿ, ಪಕ್ಷದ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ಉದ್ಧವ್ ಠಾಕ್ರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯೆ ಮನೀಶಾ ಕಯಾಂಡೆ ಅವರು ಶಿಂಧೆ ಪಕ್ಷವನ್ನು ಸೇರಿಕೊಂಡರು. ಅವರ ಬದಲಾವಣೆಗೆ ಒಂದು ದಿನ ಮುಂಚಿತವಾಗಿ, ಹಿರಿಯ ನಾಯಕ ಶಿಶಿರ್ ಶಿಂಧೆ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದರು.
ಕಳೆದ ವರ್ಷ ಜೂನ್‌ನಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂಧೆ ಬಂಡಾಯವೆದ್ದ ನಂತರ ಶಿವಸೇನೆ ಇಬ್ಭಾಗವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ