ಲಕ್ನೋ: ಕುಟುಂಬದವರು ನೋಟಿನ ಕಂತೆಗಳೊಂದಿಗೆ ತೆಗೆದುಕೊಂಡ ಸೆಲ್ಫಿ ಫೋಟೊಗಳು ವೈರಲ್ ಆದ ನಂತರ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಕಷ್ಟ ಎದುರಾಗಿದೆ. ಹಾಗೂ ಅವರು ತಕ್ಷಣ ವರ್ಗಾವಣೆಗೊಂಡಿದ್ದಾರೆ.
ಪತ್ನಿ ಮತ್ತು ಮಕ್ಕಳು ನೋಟಿನ ಕಂತೆಗಳೊಂದಿಗೆ ತೆಗೆದುಕೊಂಡ ತೆಗೆದ ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 500 ರೂಪಾಯಿ ನೋಟುಗಳ ಬಂಡಲ್‌ಗಳೊಂದಿಗೆ ಅವರು ಪೋಸ್ ನೀಡಿದ ಫೋಟೋ ನೋಡಿದ ಬಳಿಕ ತನಿಖೆ ಆರಂಭಿಸಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಛಾಯಾಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಸಿಗೆಯ ಮೇಲೆ ಸುಮಾರು 14 ಲಕ್ಷ ರೂ. ನೋಟುಗಳ ಬಂಡಲ್‌ಗಳೊಂದಿಗೆ ಸೆಲ್ಫಿ ಫೋಟೋ ತೆಗೆಸಿಕೊಂಡಿರುವುದು ಕಂಡುಬಂದಿದೆ. ಈ ಫೋಟೊಗಳು ವೈರಲ್ ಆದ ತಕ್ಷಣ, ಹಿರಿಯ ಪೊಲೀಸ್ ಅಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಹಾಗೂ ಠಾಣಾ ಉಸ್ತುವಾರಿಯಾಗಿದ್ದ ರಮೇಶಚಂದ್ರ ಸಹಾನಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡಲಾಗಿದೆ.
ಆದಾಗ್ಯೂ, ಪೊಲೀಸ್ ಅಧಿಕಾರಿ ರಮೇಶಚಂದ್ರ ಸಹಾನಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಛಾಯಾಚಿತ್ರವನ್ನು ನವೆಂಬರ್ 14, 2021 ರಂದು ತಾವು ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗ ಬಂದ ಹಣದ ಜೊತೆ ತೆಗೆದಿರುವುದು ಎಂದು ಹೇಳಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ