ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮೂರು ಪೀಠಗಳಿಗೆ 15 ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ನೇಮಕ

ಬೆಂಗಳೂರು: ಸುಪ್ರೀಂ ಕೋರ್ಟ್‌ಗೆ ಐವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ (ಎಎಜಿ) ನೇಮಕಾತಿ ಸೇರಿದಂತೆ ಒಟ್ಟು 15 ಮಂದಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ರಾಜ್ಯ ಸರ್ಕಾರವು ಸೋಮವಾರ ಅಧಿಸೂಚನೆ ಪ್ರಕಟಿಸಿದೆ.
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠಕ್ಕೆ ಐವರು, ಕಲಬುರ್ಗಿ ಪೀಠಕ್ಕೆ ಮೂವರು ಮತ್ತು ಧಾರವಾಡ ಪೀಠಕ್ಕೆ ಇಬ್ಬರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 15 ಎಎಜಿಗಳ ಪೈಕಿ ಏಕೈಕ ಮಹಿಳಾ ವಕೀಲೆ ಎಎಜಿಯಾಗಿ ನೇಮಕಗೊಂಡಿದ್ದಾರೆ.
ವಕೀಲರಾದ ನಿಶಾಂತ್‌ ಪಾಟೀಲ, ಮೊಹಮ್ಮದ್‌ ಅಲಿ ಖಾನ್‌, ಪ್ರತೀಕ ಛಡ್ಡಾ, ಅವಿಷ್ಕಾರ ಸಿಂಘ್ವಿ ಮತ್ತು ಅಮನ್‌ ಪನ್ವಾರ್‌ ಅವರನ್ನು ಸುಪ್ರೀಂ ಕೋರ್ಟ್‌ನಲ್ಲಿ ಎಎಜಿಗಳಾಗಿ ನೇಮಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾದ ನಿಖಿಲ್‌ ಗೋಯಲ್‌ ಅವರ ಸ್ಥಾನವನ್ನು ನಿಶಾಂತ್‌ ಪಾಟೀಲ ತುಂಬಲಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಎಎಜಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾನೂನು ಕೋಶದ ಹಂಗಾಮಿ ಅಧ್ಯಕ್ಷರಾಗಿರುವ ಎಸ್‌ ಎ ಅಹ್ಮದ್‌, ವಕೀಲರಾದ ಸಿ.ಎಸ್‌.ಪ್ರದೀಪ, ರೊಬೆನ್‌ ಜಾಕೋಬ್‌, ವಿ.ಜಿ. ಭಾನುಪ್ರಕಾಶ, ಕಿರಣ ರೋಣ ಅವರು ಕಾರ್ಯನಿರ್ವಹಿಸಲಿದ್ದಾರೆ. ಧಾರವಾಡ ಪೀಠದಲ್ಲಿ ಜೆ.ಎಂ. ಗಂಗಾಧರ ಮತ್ತು ಕೇಶವ ರೆಡ್ಡಿ, ಕಲಬುರ್ಗಿ ಪೀಠದಲ್ಲಿ ಮಲ್ಹಾರ ರಾವ್‌, ವೈ.ಎಚ್‌.ವಿಜಯಕುಮಾರ ಹಾಗೂ ಅರ್ಚನಾ ಬಿ. ತಿವಾರಿ ಎಎಜಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ : ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್‌ ಬುಲಾವ್

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement