ಉಚಿತ ಬಸ್‌ ಪ್ರಯಾಣ ಯೋಜನೆ- ಬುರ್ಖಾ ತೊಟ್ಟು ಬಂದ ಪುರುಷ ಸಿಕ್ಕಿಬಿದ್ದ..!

ಹುಬ್ಬಳ್ಳಿ: ಮಹಿಳೆಯರಿಗೆ ನೀಡಲಾಗಿರುವ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಯ ಲಾಭ ಪಡೆಯಲು ಹೋದ ವ್ಯಕ್ತಿಯೊಬ್ಬ ಚಾಪೆ ಕೆಳಗೆ ನುಸುಳಲು ಹೋಗಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ವ್ಯಕ್ತಿಯೋರ್ವ ಉಚಿತ ಬಸ್ ಪ್ರಯಾಣಕ್ಕಾಗಿ ಬುರ್ಖಾ ಧರಿಸಿ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿ ಬಿದ್ದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹೀಗೆ ಮಾಡುವಾಗ ಈ ವ್ಯಕ್ತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕುಂದಗೋಳ ತಾಲೂಕಿನ ಸಂಶಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ವೀರಭದ್ರಯ್ಯಾ ಎಂಬಾತ ಗುರುವಾರ ಬುರ್ಖಾ ತೊಟ್ಟು ಕುಳಿತಿದ್ದ. ನಂತರ ಈತನ ಅನುಮಾಸ್ಪದ ನಡೆಯ ಬಗ್ಗೆ ಸಂಶಯ ಬಂದ ಕೆಲ ಪ್ರಯಾಣಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಚಲನವಲನ ಗಮನಿಸಿದ ಸ್ಥಳೀಯರಿಗೆ, ಬುರ್ಖಾ ತೊಟ್ಟ ವ್ಯಕ್ತಿ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಾಡಿರುವ ತಂತ್ರ ಎಂದು ಅನುಮಾನಿಸಿ ಹಿಡಿದಿದ್ದಾರೆ. ಆಗ ಆತನ ಬಣ್ಣ ಬಯಲಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವನು ಎಂದು ಹೇಳಲಾಗಿದೆ. ಆತನ ಹೆಸರು ವೀರಭದ್ರಯ್ಯ ಎಂದು ತಿಳಿದುಬಂದಿದೆ. ಹಾಗೂ ಈತನ ಬಳಿ ಮಹಿಳೆಯ ಆಧಾರ ಕಾರ್ಡ್‌ ಸಹ ಸಿಕ್ಕಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ- ದೃಶ್ಯ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement