ಕರ್ನಾಟಕ ಬಜೆಟ್‌ 2023-24 ಗಾತ್ರ ₹3.27 ಲಕ್ಷ ಕೋಟಿಗೆ ಏರಿಕೆ ; ಆದರೆ ಸಾಲ ₹85,818 ಕೋಟಿಗೆ ಹೆಚ್ಚಳ : ವಿವಿಧ ವಲಯಕ್ಕೆ ಹಣ ಹಂಚಿದ್ದು ಹೀಗೆ

ಬೆಂಗಳೂರು: 14ನೇ ಬಾರಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಯಾಗಿ 7ನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಯಲ್ಲೇ ತೆರಿಗೆ ಸೋರಿಕೆ ತಡೆಯಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಖೋತಾ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿಯ ವೆಚ್ಚ 3.27 ಲಕ್ಷ ಕೋಟಿ ರೂಪಾಯಿ ಇದೆ. ಇದೇ ಸಮಯದಲ್ಲಿ 3.24 ಲಕ್ಷ ಕೋಟಿ ರೂ ಆದಾಯ ಬರಲಿದೆ. 3,269 ಕೋಟಿ ರೂ. ಖೋತಾ ಬಜೆಟ್‌ ಆಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3.09 ಲಕ್ಷ ಕೋಟಿ ರೂ. (3,09,182 ಕೋಟಿ ರೂ.)ಗಳ ಬಜೆಟ್‌ ಮಂಡಿಸಿದ್ದರು. ಇದಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ 18 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಆದರೆ ಇದೇ ವೇಳೆ ಸಾಲದ ಪ್ರಮಾಣವೂ ಅಲ್ಪ ಏರಿಕೆ ಕಂಡಿದೆ. ಬೊಮ್ಮಾಯಿ 77,750 ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದರೆ, ಸಿದ್ದರಾಮಯ್ಯ ಈ 85,818 ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದಾರೆ. ಅಂದರೆ ಬಜೆಟ್‌ ಗಾತ್ರ 18 ಸಾವಿರ ಕೋಟಿ ರೂ. ಹೆಚ್ಚಾಗಿದ್ದರೆ, ಸಾಲ ಸುಮಾರು 8 ಸಾವಿರ ಕೋಟಿ ರೂ. ಏರಿಕೆಯಾಗಿದೆ.
ಈ ಬಾರಿಯ ಆಯವ್ಯಯ ಸಂಚಿತ ನಿಧಿ ಗಾತ್ರ 3,27,747 ಕೋಟಿ ರೂಪಾಯಿ. ಇದರಲ್ಲಿ ಒಟ್ಟು ಸ್ವೀಕೃತಿ 3,24,478 ಕೋಟಿ ರೂಪಾಯಿ, ರಾಜಸ್ವ ಸ್ವೀಕೃತಿ 2,38,410 ಕೋಟಿ ರೂ ಮತ್ತು ಸಾಲ – 85,818 ಕೋಟಿ ರೂ ಸೇರಿದಂತೆ ಬಂಡವಾಳ ಸ್ವೀಕೃತಿ 86,068 ಕೋಟಿ ರೂಪಾಯಿ ಇದೆ. ಇದೇ ವೇಳೆ ಒಟ್ಟು ವೆಚ್ಚ 3,27,747 ಕೋಟಿ ರೂಪಾಯಿ ಇದೆ. ಇದರಲ್ಲಿ ರಾಜಸ್ವ ವೆಚ್ಚ – 2,50,933 ಕೋಟಿ ರೂ.; ಬಂಡವಾಳ ವೆಚ್ಚ – 54,374 ಕೋಟಿ ರೂ. ಹಾಗೂ ಸಾಲ ಮರುಪಾವತಿ – 22,441 ಕೋಟಿ ರೂಪಾಯಿ ಇದೆ.
2023-24ನೇ ಸಾಲಿನಲ್ಲಿ ರಾಜಸ್ವ ಜಮೆಗಳು 238410 ಕೋಟಿ ರೂಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿಎಸ್‌ಟಿ ಪರಿಹಾರ ಒಳಗೊಂಡಂತೆ 175653 ಕೋಟಿ ರೂಪಾಯಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12500 ಕೋಟಿ ರೂಪಾಯಿ ಸಂಗ್ರಹ ನಿರೀಕ್ಷಿಸಲಾಗಿದೆ. ಕೇಂದ್ರದ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ.ಗಳು ಹಾಗೂ 13,005 ಕೋಟಿ ರೂಗಳನ್ನು ಕೇಂದ್ರ ಸರ್ಕಾರದಿಂದ ಸಹಾಯ ಅನುದಾನ ರೂಪದಲ್ಲಿ ಪಡೆಯಬಹುದು ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿದೆ.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

ಬಜೆಟ್‌ ಅಂಕಿ-ಅಂಶಗಳು ಹೀಗಿವೆ,
2023-24ನೇ ಸಾಲಿನಲ್ಲಿ ರಾಜಸ್ವ ಜಮೆ ಅಂದಾಜು – 2,38,410 ಕೋಟಿ ರೂ.
ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ – 1,75,653 ಕೋಟಿ ರೂ.
ತೆರಿಗೆಯೇತರ ರಾಜಸ್ವಗಳಿಂದ ಸಂಗ್ರಹದ ನಿರೀಕ್ಷೆ – 12,500 ಕೋಟಿ ರೂ.
ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ – 37,252 ಕೋಟಿ ರೂ.
ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ – 13,005 ಕೋಟಿ ರೂ.
ಒಟ್ಟು ಸಾಲಗಳು – 85,818 ಕೋಟಿ ರೂ.
ಋಣೇತರ ಸ್ವೀಕೃತಿ – 23 ಕೋಟಿ ರೂ.
ಸಾಲ ವಸೂಲು ಮೊತ್ತ – 228 ಕೋಟಿ ರೂ.
ಅಂದಾಜು ವೆಚ್ಚ
2023-24ನೇ ಸಾಲಿನಲ್ಲಿ ರಾಜಸ್ವ ವೆಚ್ಚ – 2,50,933 ಕೋಟಿ ರೂ.
ಬಂಡವಾಳ ವೆಚ್ಚ – 54,374 ಕೋಟಿ ರೂ.
ಸಾಲದ ಮರುಪಾವತಿಗೆ – 22,441 ಕೋಟಿ ರೂ.
ಒಟ್ಟು ವೆಚ್ಚ – 3,27,747 ಕೋಟಿ ರೂ.

ರಾಜ್ಯ ಸರ್ಕಾರದ ವೆಚ್ಚಗಳು (ಪೈಸೆಗಳಲ್ಲಿ)
ಕೃಷಿ ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ – 15 ಪೈಸೆ
ಇತರೆ ಸಾಮಾನ್ಯ ಸೇವೆಗಳು – 17 ಪೈಸೆ
ಸಾಲ ತೀರಿಸಲು – 18 ಪೈಸೆ
ನೀರು ಪೂರೈಕೆ ಮತ್ತು ನೈರ್ಮಲ್ಯ – 2 ಪೈಸೆ
ಇತರೆ ಸಾಮಾಜಿಕ ಸೇವೆಗಳು – 4 ಪೈಸೆ
ಆರೋಗ್ಯ – 4 ಪೈಸೆ
ಸಮಾಜ ಕಲ್ಯಾಣ – 13 ಪೈಸೆ
ಶಿಕ್ಷಣ – 10 ಪೈಸೆ
ಇತರೆ ಆರ್ಥಿಕ ಸೇವೆಗಳು – 17 ಪೈಸೆ
ರಾಜ್ಯ ಸರ್ಕಾರದ ಆದಾಯದ ಮೂಲಗಳು (ಪೈಸೆಗಳಲ್ಲಿ)
ರಾಜ್ಯ ತೆರಿಗೆ – 54 ಪೈಸೆ
ಸಾಲದಿಂದ- 26 ಪೈಸೆ
ಕೇಂದ್ರ ತೆರಿಗೆ ಪಾಲು- 12 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ – 4 ಪೈಸೆ

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement