ಚೆಕ್ ಬೌನ್ಸ್ ಪ್ರಕರಣ ; ನಟ ನೀನಾಸಂ ಅಶ್ವತ್ಥ ಬಂಧನ-ಬಿಡುಗಡೆ

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹಾಸನದ ಬಡಾವಣೆ ಠಾಣೆ ಪೊಲೀಸರು ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಿದರು. ಅವರು ನ್ಯಾಯಾಧೀಸರ ಎದುರು ತಪ್ಪೊಪ್ಪಿಕೊಂಡರು ಹಾಗೂ ಚೆಕ್‌ನ ಶೇ. 25ರಷ್ಟು ಹಣವನ್ನು ಪಾವತಿ ಮಾಡಿದರು. ನಂತರ ನ್ಯಾಯಾಲಯ ನೀನಾಸಂ ಅಶ್ವತ್ಥ​ ಅವರಿಗೆ ಜಾಮೀನು ನೀಡಿದೆ. ಇನ್ನುಳಿದ ಹಣವನ್ನು ಪಾವತಿಸಲು ಅವರು ಸಮಯಾವಕಾಶ ಕೋರಿದ್ದಾರೆ.
ಹಸು ಖರೀದಿ ಪ್ರಕರಣ
ನಟ ನೀನಾಸಂ ಅಶ್ವತ್ಥ​ ಅವರು ಹಾಸನದ ರೋಹಿತ್​ ಎಂಬವರಿಂದ ಹಸು ಖರೀದಿ ಮಾಡಿದ್ದರು. ಆಗ 1.5 ಲಕ್ಷ ರೂಪಾಯಿ ಮೌಲ್ಯದ ಚೆಕ್​ ನೀಡಿದ್ದರು. ಆದರೆ ಹಣ ಪಡೆಯಲು ರೋಹಿತ್​ ಅವರು ಬ್ಯಾಂಕ್​ಗೆ ಹೋದಾಗ ಚೆಕ್​ಬೌನ್ಸ್​ ಆಗಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಾಸನದ ಜೆಎಮ್‌ಎಫ್‌ಸಿ‌ ಕೋರ್ಟ್‌ನಲ್ಲಿ‌ ರೋಹಿತ್​ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ನೀನಾಸಂ ಅಶ್ವತ್ಥ​ ಅವರು ಕೋರ್ಟ್​ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿತ್ತು.
ಪೊಲೀಸರು ಬಂಧಿಸಿ ಅವರನ್ನು ನ್ಯಾಯಾಲದ ಮುಂದೆ ಹಾಜರುಪಡಿಸಿದಾಗ ನೀನಾಸಂ ಅಶ್ವತ್ಥ​ ತಪ್ಪು ಒಪ್ಪಿಕೊಂಡಿದ್ದಾರೆ ಹಾಗೂ ಶೇಕಡ 25ರಷ್ಟು ಹಣವನ್ನು ನೀಡಿದ್ದಾರೆ. ಇನ್ನುಳಿದ ಮೊತ್ತ ಪಾವತಿ ಮಾಡಲು ಸಮಯಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನೀನಾಸಂ ಅಶ್ವತ್ಥ್ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆ‌ರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement