ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ : ಈತನಿಗೆ ಹಮ್ ದಿಲ್ ದೇ ಚುಕೆ ಸನಮ್‌ ಸಿನೆಮಾ ಸ್ಫೂರ್ತಿಯಂತೆ…!

ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಆಕೆಯ ಪ್ರಿಯಕರನ ಜೊತೆ ತಾನೇ ಮುಂದೆ ನಿಂತು ಮದುವೆ ಮಾಡಿಸಿ ಇಬ್ಬರೂ ಒಟ್ಟಿಗೆ ಇರಲು ಅವಕಾಶ ಮಾಡಿಕೊಟ್ಟ ಘಟನೆ ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಶಿವನ ದೇವಸ್ಥಾನದಲ್ಲಿ ತನ್ನ ಪತಿಯ ಸಮ್ಮುಖದಲ್ಲಿ ಮಹಿಳೆ ತನ್ನ ಪ್ರಿಯಕರನೊಂದಿಗೆ ವಿವಾಹವಾಗುತ್ತಿರುವುದನ್ನು ತೋರಿಸುತ್ತದೆ. ಮಹಿಳೆಯ ಪ್ರೇಮಿ ಆಕೆಯ ಹಣೆಗೆ ಸಿಂಧೂರ ಹಚ್ಚುವ ಮೂಲಕ ಮದುವೆಯಾಗಿದ್ದಾನೆ.
ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ತಡರಾತ್ರಿ ಮಹಿಳೆ ತನ್ನ ಪ್ರಿಯಕರನ ಭೇಟಿಗೆ ಆತನ ಮನೆಗೆ ಹೋದಾಗ ಇವರಿಬ್ಬರ ಪ್ರೀತಿಯ ವಿಷಯ ಬಹಿರಂಗವಾಗಿದೆ. ದುರದೃಷ್ಟವಶಾತ್, ಅವರಿಬ್ಬರೂ ಕುಟುಂಬದ ಕೈಗೆ ಸಿಕ್ಕಿಬಿದ್ದರು.ಘಟನೆಯಿಂದ ಮನನೊಂದ ಗ್ರಾಮಸ್ಥರು ಯುವತಿಯ ಪ್ರಿಯಕರನಿಗೆ ಥಳಿಸಿ ಇಬ್ಬರನ್ನೂ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.

ಆದರೆ, ಮಹಿಳೆಯ ಪತಿ ಹಿಂತಿರುಗಿದ ನಂತರ ವಿಷಯ ತಿಳಿದು ಅವರಿಬ್ಬರನ್ನು ದೇವಸ್ಥಾನಕ್ಕೆ ಕರೆದೊಯ್ದು ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ.
ವರದಿಗಳ ಪ್ರಕಾರ, ತಾನು ಮದುವೆಯಾದ ಮಾತ್ರಕ್ಕೆ ಹೆಂಡತಿ ತನ್ನ ʼಪ್ರೀತಿ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಅಲ್ಲದೆ, ತಾನು ಹಿಂದಿ ಚಲನಚಿತ್ರ ಹಮ್ ದಿಲ್ ದೇ ಚುಕೆ ಸನಮ್‌ ನಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ, ಚಲನಚಿತ್ರದಲ್ಲಿ ಇದೇ ರೀತಿ ತೋರಿಸಲಾಗಿದೆ ಆದರೆ ಚಲನಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೆಂಡತಿ ಪುನಃ ತನ್ನ ಪತಿಯಿದ್ದಲ್ಲಿಗೆ ಬರುತ್ತಾಳೆ. ಆದರೆ ಇಲ್ಲಿ ಗಂಡ ಅದನ್ನು ಬದಲಾಯಿಸಲು ನಿರ್ಧರಿಸಿದ ಹಾಗೂ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರಿನಿಗೆ ಮರುಮದುವೆ ಮಾಡಿದ್ದಾನೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement