ವಿಮಾನದಲ್ಲಿ ವಿದೇಶಕ್ಕೆ ಹಾರಲು ಪಾಸ್‌ಪೋರ್ಟ್ ಪಡೆದ ಭಾರತದ ಈ ಬೀದಿನಾಯಿ…!

ನವದೆಹಲಿ : ಬಹುತೇಕ ಭಾರತೀಯರಿಗೆ ವಿದೇಶ ಪ್ರವಾಸ ಮಾಡುವುದು ಇನ್ನೂ ಕನಸಾಗಿರುವಾಗಲೇ ವಾರಾಣಸಿಯ ಬೀದಿ ನಾಯಿಯೊಂದು ಈಗ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಪಡೆದುಕೊಂಡಿದೆ….! ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ವಿದೇಶಕ್ಕೆ ಹಾರಲು ಇತ್ತೀಚೆಗೆ ಪಾಸ್‌ಪೋರ್ಟ್ ಪಡೆದುಕೊಂಡಿದ್ದು, ಈ ತಿಂಗಳು ಇಟಲಿಗೆ ಹಾರಲು ಸಿದ್ಧವಾಗಿದೆ.
ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ನಾಯಿ ಮೋತಿಯನ್ನು ಅಧಿಕೃತವಾಗಿ ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ತಮ್ಮ ಕೆಲಸ-ಸಂಬಂಧಿತ ಪ್ರವಾಸಗಳ ನಡುವೆ ಅವರು ಈ ಬೀದಿ ನಾಯಿ ಮೋತಿಯ ಬಗ್ಗೆ ಒಲವು ಬೆಳೆಸಿಕೊಂಡಿದ್ದಾರೆ ಮತ್ತು ಅದರ ಜೀವನವನ್ನು ಸುಧಾರಿಸುವಂತೆ ಮಾಡಲು ಅವರು ನಿರ್ಧರಿಸಿದ್ದಾರೆ. ಆನ್‌ಲೈನ್ ಸಂದರ್ಶನವೊಂದರಲ್ಲಿ ಅವರು, ಮೋತಿ ಈ ಹಿಂದೆ ಪ್ರಾಣಿ ಹಿಂಸೆಗೆ ಬಲಿಯಾಗಿತ್ತು, ಕೆಲವು ಸ್ಥಳೀಯರು ಅದಕ್ಕೆ ಹೊಡೆದು ಹಿಂಸಿಸಿದ್ದರು ಎಂದು ಅವರು ಹೇಳಿದ್ದಾರೆ.
ಈಗ ಅವರು ಹೆಣ್ಣು ನಾಯಿ ಮೋತಿಯನ್ನು ಇಟಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ ವೆರಾ ಅವರು ಇದೇ ಜುಲೈ 13 ರಂದು , ಮೋತಿಯೊಂದಿಗೆ ದೆಹಲಿಯಿಂದ ಇಟಲಿಗೆ ವಿಮಾನದಲ್ಲಿ ಹಾರಲಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕಳುಹಿಸಲು ವ್ಯಾಕ್ಸಿನೇಷನ್ ಸೇರಿದಂತೆ ವ್ಯಾಪಕವಾದ ದಾಖಲೆಗಳನ್ನು ನೀಡಬೇಕಾಗುತ್ತದೆ ಮತ್ತು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ನಾಯಿಗೂ ಈಗ ಪಾಸ್‌ಪೋರ್ಟ್‌ ಮಾಡಲಾಗಿದೆ. ನಾಯಿ ಮೋತಿಗೆ ಮೈಕ್ರೋಚಿಪ್ ಕೂಡ ಅಳವಡಿಸಲಾಗುತ್ತದೆ. ಮೈಕ್ರೊಚಿಪ್ ವಿಶೇಷ ಗುರುತಾಗಿ ಕಾರ್ಯನಿರ್ವಹಿಸಲಿದೆ ಮತ್ತು ಪ್ರಾಣಿಗಳ ಬಗ್ಗೆ ಎಲ್ಲಾ ವಿವರಗಳನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.
ವೆರಾ ಮತ್ತು ಮೋತಿ ನಡುವಿನ ಮಮಕಾರದ ಈ ಹೃದಯಸ್ಪರ್ಶಿ ಕಥೆ – ಮಾನವರು ಮತ್ತು ಪ್ರಾಣಿಗಳ ನಡುವಿನ ಸ್ನೇಹದ ಪರಿಪೂರ್ಣ ಉದಾಹರಣೆ ಎಂದು ಹಲವರು ಬಣ್ಣಿಸಿದ್ದು, ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ವೈರಲ್‌ ಆಗುತ್ತಿದೆ. ಮಮಕಾರದ ಇಂತಹ ಉದಾಹರಣೆಗಳಿಂದ ನೂರಾರು ಇತರರಿಗೆ ತಮ್ಮ ಇಂತಹದನ್ನು ಮಾಡಲು ಮತ್ತು ಬೀದಿ ಪ್ರಾಣಿಗಳ ಬದುಕು ಹಸನಾಗಿಸಲು ಈಗ ಹೆಚ್ಚಿನ ಪ್ರವಾಸಿಗರು ಮುಂದೆ ಬರುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement