ಕೋಲ್ಕತ್ತಾ: ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡುತ್ತಿರುವುದನ್ನು ತೋರಿಸುವ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಆಯುಷಿ ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳಾ ಕಂಪಾರ್ಟ್ಮೆಂಟ್ನೊಳಗೆ ಮಹಿಳೆಯರು ಹೊಡೆದಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಚಪ್ಪಲಿ ಮತ್ತು ಮುಷ್ಟಿಯಿಂದ ಹೊಡೆದಾಡಿಕೊಂಡಿದ್ದಾರೆ. ಒಬ್ಬರ ಮೇಲೆ ಒಬ್ಬರು ಕಿರುಚಾಟ ಮತ್ತು ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ ಹಾಗೂ ಪರಸ್ಪರ ಕೂದಲು ಜಗ್ಗಾಡುತ್ತಿರುವ ದೃಶ್ಯವೂ ಕಂಡುಬಂದಿದೆ.
ಮತ್ತೊಂದೆಡೆ, ಇತರ ಪ್ರಯಾಣಿಕರು ಇದನ್ನು ನಿಲ್ಲಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು ಆದರೆ ಅದು ವಿಫಲವಾಗಿದೆ. ಜಗಳಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ವೀಡಿಯೊದ ಶೀರ್ಷಿಕೆಯು “ಕೋಲ್ಕತ್ತಾ ಲೋಕಲ್” ಎಂದು ಓದುತ್ತದೆ. ಜುಲೈ 11 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ಪ್ರತಿಕ್ರಿಯೆಗಳನ್ನು ನೀಡಿದ್ದು, ಬಳಕೆದಾರರೊಬ್ಬರು “ರೈಲಿನೊಳಗೆ ಉಚಿತ WWE” ಎಂದು ತಮಾಷೆ ಮಾಡಿದ್ದಾರೆ. “ರೋಶೋಗುಲ್ಲಾ ರಸಗುಲ್ಲಾ ಎಂದು ಕರೆಯುವ ತಪ್ಪನ್ನು ಮಾಡಬೇಡಿ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. “ಕ್ಲಿನಿಕ್ + ಹೊಸ ಆಡ್ ಎಂದು ಮತ್ತೊಬ್ಬರು ಬಳಕೆದಾರರು ಬರೆದಿದ್ದಾರೆ.
ಲೋಕಲ್ ರೈಲಿನಲ್ಲಿ ಹೊಡೆದಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಲೋಕಲ್ ಒಳಗೆ ಮಹಿಳೆಯರು ಜಗಳವಾಡುತ್ತಿರುವುದು ಕಂಡು ಬಂದಿತ್ತು. ಕ್ಲಿಪ್ನಲ್ಲಿ, ಮಹಿಳಾ ವಿಭಾಗದ ಒಳಗೆ ಮಹಿಳೆಯರು ಹಿಂಸಾತ್ಮಕವಾಗಿ ಹೊಡೆದಾಡಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ