ವೀಡಿಯೊ..| ಸೀಮಾ ಹೈದರಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ರೆ ಪಾಕಿಸ್ತಾನದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತೇವೆ, ಕೊಲ್ತೇವೆ-ಬಲೂಚ್ ಡಕಾಯಿತರ ಬೆದರಿಕೆ

ತನ್ನ ಪಬ್‌ ಜಿ ಪ್ರೇಮಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಂಧಿಸಲ್ಪಟ್ಟ ನಂತರ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದಾದ ಒಂದು ದಿನದ ನಂತರ ಭಾರತದ ಪ್ರೇಮಿ ಸಚಿನ್‌ ಮತ್ತು ಪಾಕಿಸ್ತಾನಿ ಪ್ರೇಮಿಕಾ ಸೀಮಾ ಹೈದರ್‌ ನಡುವಿನ ಪಬ್‌ ಜಿ (PUBG) ಪ್ರೇಮಕಥೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.
PUBG ಪ್ರೇಮಕಥೆಯು ಸುದ್ದಿಯಾದ ಒಂದು ವಾರದ ನಂತರ, ಪಾಕಿಸ್ತಾನದ ಡಕಾಯಿತರು ಈಗ ಭಾರತಕ್ಕೆ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ, ಸೀಮಾ ಹೈದರಳನ್ನು ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸದಿದ್ದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಲೂಚ್ ದರೋಡೆಕೋರರ ಗುಂಪು ಪಾಕಿಸ್ತಾನದಿಂದ ವೀಡಿಯೊ ರೆಕಾರ್ಡ್ ಮಾಡಿದ್ದು, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಸೀಮಾ ಹೈದರಳನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸದಿದ್ದರೆ, ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳನ್ನು ಅತ್ಯಾಚಾರ ಮಾಡಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ವೈರಲ್ ವೀಡಿಯೊದಲ್ಲಿ, ಮಾಸ್ಕ್‌ ಧರಿಸಿದ ನಾಲ್ವರು ರೈಫಲ್‌ಗಳನ್ನು ಹಿಡಿದುಕೊಂಡು ಪಾಕಿಸ್ತಾನದ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಆಪಾದಿತ ಭಯೋತ್ಪಾದಕರ ಗುಂಪಿನ ಮಧ್ಯದಲ್ಲಿ ಕುಳಿತಿರುವ ವ್ಯಕ್ತಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾನೆ.

ವೀಡಿಯೊದಲ್ಲಿರುವ ವ್ಯಕ್ತಿಯೊಬ್ಬ “ನಮ್ಮ ಜಖರಾನಿ ಹುಡುಗಿ ಸೀಮಾ ಹೈದರ್ ಇತ್ತೀಚೆಗೆ ಪಾಕಿಸ್ತಾನದಿಂದ ದೆಹಲಿಗೆ ಹೋಗಿದ್ದಾಳೆ. ಅವಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದಿದ್ದರೆ ಇಲ್ಲಿ ವಾಸಿಸುವ ಹಿಂದೂಗಳು ಮತ್ತು ಇತರ ಧರ್ಮದ ಜನರು ಉಳಿಯುವುದಿಲ್ಲ ಎಂದು ಭಾರತ ಅರ್ಥಮಾಡಿಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮೊದಲ ಗಂಡ ಗುಲಾಮ್ ಹೈದರ್ ಜಖರಾನಿ ಇದೇ ಬುಡಕಟ್ಟಿಗೆ ಸೇರಿದವರು. ತನ್ನ ಪತ್ನಿ ಮತ್ತು ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಗುಲಾಮ್ ಹೈದರ್ ಮನವಿ ಮಾಡಿದ್ದರು.
ಟ್ವಿಟರ್ ಬಳಕೆದಾರ ಮಹೇಶ್ ವಾಸು ಎಂಬವರು ಹಂಚಿಕೊಂಡಿರುವ ವೀಡಿಯೊವನ್ನು ಮೂಲತಃ ಪಾಕಿಸ್ತಾನದ ಕರಾಚಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸ್ಥಳೀಯ ಸಿಂಧ್ ದೂರದರ್ಶನ ಚಾನೆಲ್ ಆವಾಜ್ ಟೆಲಿವಿಷನ್ ನೆಟ್‌ವರ್ಕ್ ಜುಲೈ 10 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. 0.45 ಸೆಕೆಂಡುಗಳ ವೀಡಿಯೊದ ಆರಂಭದಲ್ಲಿ, ಶಸ್ತ್ರಸಜ್ಜಿತ ಪಾಕಿಸ್ತಾನಿ ಪುರುಷರು ಕಾಣಿಸಿಕೊಂಡರು. ಅವರು ತಮ್ಮನ್ನು ತಾವು ಜಖರಾನಿ ಬುಡಕಟ್ಟಿಗೆ ಸೇರಿದವರೆಂದು ಪರಿಚಯಿಸಿಕೊಳ್ಳುತ್ತಾರೆ. ನಂತರ ಅವರು ಸೀಮಾ ಹೈದರಳನ್ನು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಾರೆ. ಅತ್ಯಂತ ಅಸಭ್ಯ ಭಾಷೆಯನ್ನು ಬಳಸುತ್ತಾ, ಪಾಕಿಸ್ತಾನದ ಸಿಂಧ್‌ನಲ್ಲಿರುವ ಪ್ರತಿಯೊಬ್ಬ ಹಿಂದೂ ಮಹಿಳೆಯನ್ನು ಬೇಟೆಯಾಡುವುದಾಗಿ ಬೆದರಿಕೆ ಹಾಕಿದ್ದಾರೆ; ಭಾರತ ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸುವುದಕ್ಕೆ ನಿರಾಕರಿಸಿದರೆ ಪಾಕಿಸ್ತಾನದ ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಪಾಕಿಸ್ತಾನದ ಸೀಮಾ ಹೈದರ್ ಎಂಬ ಮಹಿಳೆ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ PUBG ಮೂಲಕ ಭಾರತದ ಹಿಂದೂ ವ್ಯಕ್ತಿಯನ್ನು ಪ್ರೀತಿಸಿದ ನಂತರ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಅವಳು ಭಾರತಕ್ಕೆ ಬಂದ ನಂತರ ಅವಳು ಹಾಗೂ ಅವಳ ಪ್ರೇಮಿ ಗ್ರೇಟರ್ ನೋಯ್ಡಾದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
ಆಕೆಯ ಪ್ರಿಯಕರ ಸಚಿನ್ ಜೊತೆಗೆ ಬಂಧಿಸಲ್ಪಟ್ಟ ನಂತರ, ಸೀಮಾ ಹೈದರ್‌ ಹಾಗೂ ಸಚಿನ್‌ಗೆ ಜಾಮೀನು ನೀಡಲಾಯಿತು. ಮುಸ್ಲಿಂ ಮಹಿಳೆ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ಭಾರತದಲ್ಲಿ ತನ್ನ ಹೊಸ ಸಂಗಾತಿಯೊಂದಿಗೆ ಜೀವನವನ್ನು ನಡೆಸಲು “ಸಸ್ಯಾಹಾರಿ ಆಹಾರವನ್ನು ಅಭ್ಯಾಸ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement