ಮಾಧ್ಯಮರಂಗದಲ್ಲಿ ಕ್ರಾಂತಿ : ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ‘ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಸೃಷ್ಟಿ ‘ಲೀಸಾ’ | ವೀಕ್ಷಿಸಿ

ಟಿವಿ ಚಾನೆಲ್‌ಗಳ ನಿರೂಪಕರ ಸೀಟ್‌ನಲ್ಲಿ ತಂತ್ರಜ್ಞಾನ ಈಗ ಕುಳಿತಿದೆ. ಲೀಸಾ ಹೆಸರಿನ ಕೃತಕಬುದ್ಧಿಮತ್ತೆ (AI-powered ) ಸುದ್ದಿ ನಿರೂಪಕಿಯನ್ನು ಒಡಿಸ್ಸಾದ ಒಟಿವಿ ಪರಿಚಯಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರಗಳಲ್ಲಿ ಪತ್ರಕರ್ತರು, ಕಂಟೆಂಟ್‌ ಬರಹಗಾರರು, ವಾರ್ತಾ ವಾಚಕರ ಸ್ಥಾನವನ್ನು ಎಐ ಆಕ್ರಮಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.
ಒಟಿವಿ ಎಂಬ ಒಡಿಸ್ಸಾದ ಖಾಸಗಿ ಸುದ್ದಿ ವಾಹಿನಿ ಮೊದಲ ವರ್ಚ್ಯುವಲ್‌ ನ್ಯೂಸ್‌ ಪ್ರಸೆಂಟರ್‌ ಅನ್ನು ಪರಿಚಯಿಸಿದೆ. ಆ ಸುದ್ದಿ ವಾಚಕಿ ಹೆಸರು ಲೀಸಾ. ಅವಳು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಿಂದ ಸೃಷ್ಟಿಯಾದ ನಿರೂಪಕಿಯಾಗಿದ್ದಾಳೆ. ಭುವನೇಶ್ವರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೀಸಾಳನ್ನು ಪರಿಚಯಿಸಲಾಗಿದೆ.
ಲೀಸಾ ಹೇಗೆ ಕಾಣುತ್ತಾಳೆ..?
ಎಐ ಸುದ್ದಿ ನಿರೂಪಕಿಯೆಂದರೆ ಯಾವುದೋ ರೊಬೊಟ್‌ ಅನ್ನು ಕಲ್ಪಿಸಿಕೊಳ್ಳಬೇಡಿ. ಈ ಲೀಸಾ ಒಡಿಸ್ಸಾದ ಕೈಮಗ್ಗದ ಸಾರಿ ಉಟ್ಟುಕೊಂಡು ಥೇಟ್‌ ಭಾರತೀಯ ಯುವತಿಯಂತೆಯೇ ಕಾಣಿಸುತ್ತಾಳೆ. ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸೃಷ್ಟಿಯಾಗಿರುವ ಈ ಸುದ್ದಿ ನಿರೂಪಕಿ ಒಡಿಯಾ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಸುದ್ದಿ ಓದುತ್ತಾಳೆ.
ಒಡಿಸ್ಸಾದ ಮೊದಲ ಎಐ ನ್ಯೂಸ್‌ ಆಂಕರ್‌ ಮೂಲಕ ನಾವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಪುನಾರವರ್ತಿತ ಕಾರ್ಯಗಳು ಮತ್ತು ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಮಗೆ ನೆರವು ನೀಡಲಿದೆ” ಎಂದು ಒಟಿವಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಗಿ ಮಂಗತ್‌ ಪಾಂಡಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

ಎಐ ಸುದ್ದಿ ನಿರೂಪಕಿಯರು ಮಾನವರಂತೆ ಕೆಲಸ ಮಾಡಬಹುದೇ ಎಂಬ ಪ್ರಶ್ನೆ ಕಾಡಬಹುದು. ಈ ಕುರಿತು ಒಟಿವಿಯ ಡಿಜಿಟಲ್‌ ವ್ಯವಹಾರದ ಮುಖ್ಯಸ್ಥೆ ಲಿತಿಶಾ ಮಂಗತ್‌ ಪಾಂಡಾ ಮಾತನಾಡಿ, ಈ ಅದ್ಭುತ ತಂತ್ರಜ್ಞಾನವು ಮಾನವ ನಿರೂಪಕರಂತೆ ನಿರರ್ಗಳವಾಗಿ ಮಾತನಾಡುವುದು ಕಷ್ಟ. ಆದರೆ, ಗೂಗಲ್‌ ಅನುವಾದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡಬಲ್ಲದು. ಸುದ್ದಿಯನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಎಐಐ ಮತ್ತು ಎಎಲ್‌ಎಲ್‌ಎಂ ಶಕ್ತಿಯನ್ನು ಲೀಸಾ ಹೊಂದಿದ್ದಾಳೆ. ಅಲ್ಗಾರಿದಮ್‌ಗಳನ್ನು ವರ್ಚುವಲ್‌ ನಿರೂಪಕರ ಜೊತೆ ಸಂಯೋಜಿಸುವ ಮೂಲಕ ತಂತ್ರಜ್ಞಾನ ಮತ್ತು ಪತ್ರಿಕೋದ್ಯೋಮದ ಸಮ್ಮಿಳಿತವಾಗುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಒಡಿಸ್ಸಾದ ಒಟಿವಿ ಭಾರತದಲ್ಲಿ ಮೊದಲ ಬಾರಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸುದ್ದಿ ನಿರೂಪಕರನ್ನು(ನ್ಯೂಸ್‌ ಆಂಕರ್‌) ಪರಿಚಯಿಸಿಲ್ಲ. ಮಾರ್ಚ್‌ ತಿಂಗಳಲ್ಲಿ ಇಂಡಿಯಾ ಟುಡೇಯ ಚೇರ್ಮನ್‌ ಕಾಲ್ಲಿ ಪುರೈ ಅವರು ಸನಾ ಹೆಸರಿನ ಮೊದಲ ಸುದ್ದಿ ನಿರೂಪಕಿಯನ್ನು ಪರಿಚಯಿಸಿದ್ದರು. ಸನಾ ಆಜ್‌ ತಕ್‌ ಟೀವಿಗೆ ಸುದ್ದಿ ನಿರೂಪಕಿಯಾಗಿದ್ದಳು.
ಚೀನಾ 2018ರಲ್ಲಿಯೇ ಜಗತ್ತಿನ ಮೊದಲ ಕೃತಕಬುದ್ಧಿಮತ್ತೆ ಚಾಲಿತ ಸುದ್ದಿ ನಿರೂಪಕನನ್ನು ಪರಿಚಯಿಸಿತ್ತು. ಚೀನಾದ ಕ್ಷಿನುಹಾ ನ್ಯೂಸ್‌ ಏಜೆನ್ಸಿ ಈ ರೀತಿಯ ತಂತ್ರಜ್ಞಾನ ಪರಿಚಯಿಸಿದ ಬಳಿಕ ಜಗತ್ತಿನ ವಿವಿಧೆಡೆ ಎಐ, ರೋಬೊ ಸುದ್ದಿ ನಿರೂಪಕರನ್ನು ಪರಿಚಯಿಸಲಾಗಿತ್ತು.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement