ಸಂಸಾರದಲ್ಲಿ ಹುಳಿ ಹಿಂಡಿದ ಟೊಮೆಟೊ..: ಹೆಂಡತಿ ಕೇಳದೆ ಅಡುಗೆಗೆ ಎರಡೇ ಎರಡು ಟೊಮೆಟೊ ಬಳಸಿ ತಪ್ಪು ಮಾಡಿದ ಗಂಡ ; ಮನೆಯನ್ನೇ ಬಿಟ್ಟು ಹೋದಳು ಪತ್ನಿ..!

ಟೊಮೆಟೊ ಬೆಲೆ ಏರಿಕೆಯಿಂದ ಹಲವರ ಜೇಬಿಗೆ ಕತ್ತರಿ ಬಿದ್ದಿದೆ. ಹೆಚ್ಚಿನ ಬೆಲೆಗಳು ಗ್ರಾಹಕರ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ರೆಸ್ಟೋರೆಂಟ್‌ಗಳು, ಆಹಾರ ತಯಾರಕರು ಮತ್ತು ಅದನ್ನು ಹೆಚ್ಚು ಅವಲಂಬಿಸಿರುವ ಇತರ ವ್ಯವಹಾರಗಳಿಗೆ ಸವಾಲುಗಳನ್ನು ಒಡ್ಡಿದೆ. ಆದರೆ ಇದೇ ಟೊಮೆಟೊಗೆ ಸಂಬಂಧಿಸಿದ ವಿಲಕ್ಷಣ ಘಟನೆ ನಡೆದಿರುವುದು ವರದಿಯಾಗಿದೆ.
ಮಧ್ಯಪ್ರದೇಶದ ಶಹದೋಲ್‌ನಲ್ಲಿ ಮಹಿಳೆಯೊಬ್ಬಳು ಇದೇ ಟೊಮೆಟೊ ಕಾರಣಕ್ಕೆ ತನ್ನ ಪತಿಯನ್ನು ಬಿಟ್ಟುಹೋಗಿದ್ದಾಳೆ. ಆತ ತಾನು ಬೇಯಿಸಿದ ತಿನ್ನುವ ಆಹಾರದಲ್ಲಿ ಎರಡು ಟೊಮೆಟೊಗಳನ್ನು ಬಳಸಿದ್ದೇ ಆಕೆ ಕೋಪಗೊಳ್ಳಲು ಕಾರಣವಾಗಿ ಮನೆಬಿಟ್ಟು ಹೋಗಿ ರಾದ್ದಾಂತಕ್ಕೆ ಕಾರಣವಾಗಿದೆಯಂತೆ..!. ಸಂದೀಪ ಬರ್ಮನ್ ಎಂಬವರು ಸಣ್ಣ ಹೊಟೇಲ್‌ ಒಂದನ್ನು ನಡೆಸುತ್ತಿದ್ದು, ಈಗ ಅವರು ತಮ್ಮ ಪತ್ನಿ ಆರತಿ ಬರ್ಮನ್ ಅವರನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
“ಅವಳು ನನ್ನ ಮಗಳ ಜೊತೆಗೆ ಮನೆಯಿಂದ ಹೊರಟು ಬಸ್ ಹತ್ತಿದಳು. ನಾನು ಅವಳನ್ನು ಮೂರು ದಿನಗಳಿಂದ ಹುಡುಕುತ್ತಿದ್ದೇನೆ ಮತ್ತು ಅವಳ ಫೋಟೋವನ್ನು ಪೊಲೀಸರಿಗೆ ನೀಡಿದ್ದೇನೆ ಆದರೆ ಅವರಿಗೆ ಇನ್ನೂ ಅವಳನ್ನು ಹುಡುಕಲು ಸಾಧ್ಯವಾಗಲಿಲ್ಲ” ಎಂದು ಸಂದೀಪ ಬರ್ಮನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ತನ್ನನ್ನು ಕೇಳದೆ ಆಹಾರ ಬೇಯಿಸುವಾಗ ಟೊಮೆಟೊ ಹಾಕಿ ಬೇಯಿಸಿದ ನಂತರ ತನ್ನ ಪತ್ನಿ ಅಸಮಾಧಾನಗೊಂಡಳು. ನಾನು ಟೊಮೆಟೊಗಳನ್ನು ಹಾಕುವುದ ಅವಳಿಗೆ ಇಷ್ಟವಿರಲಿಲ್ಲ. ಮತ್ತು ಅದರ ಬಗ್ಗೆ ಜಗಳವಾಡಲು ಪ್ರಾರಂಭಿಸಿದಳು ಎಂದು ಆ ವ್ಯಕ್ತಿ ಹೇಳಿದ್ದಾರೆ.
ವ್ಯಕ್ತಿ ದೂರು ನೀಡಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆರತಿ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ತನ್ನ ಮನೆಯನ್ನು ತೊರೆದು ಉಮಾರಿಯಾದಲ್ಲಿರುವ ತನ್ನ ಸಹೋದರಿಯ ಸ್ಥಳಕ್ಕೆ ಹೋಗಿದ್ದಾಳೆ ಎಂದು ಶಹದೋಲ್‌ನ ಧನಪುರಿ ಸ್ಟೇಷನ್ ಹೌಸ್ ಆಫೀಸರ್ ಸಂಜಯ ಜೈಸ್ವಾಲ್ ಹೇಳಿದರು.
ಜಗಳವಾಡಿದ ನಂತರ ಮನನೊಂದ ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ, ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪತಿ-ಪತ್ನಿ ಇಬ್ಬರೂ ಪರಸ್ಪರ ಮಾತನಾಡುವಂತೆ ಮಾಡಿದ್ದಾರೆ. ಅವಳು ಶೀಘ್ರದಲ್ಲೇ ಹಿಂತಿರುಗುತ್ತಾಳೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಕೆಲವೆಡೆ ಟೊಮೆಟೊದ ಪ್ರತಿ ಕಿಲೋಕ್ಕೆ ₹ 200ಕ್ಕಿಂತ ಹೆಚ್ಚು ಬೆಲೆ ಇರುವುದರಿಂದ ಗ್ರಾಹಕರಿಗೆ ಅದನ್ನು ಕಡಿಮೆ ಬೆಲೆಗೆ ನೀಡಲು ರಾಷ್ಟ್ರ ರಾಜಧಾನಿ ಮತ್ತು ಇತರ ಕೆಲವು ನಗರಗಳಲ್ಲಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಶುಕ್ರವಾರದಿಂದ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟವನ್ನು ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement