ಭೋಪಾಲ್: ಸಾಲದ ಆ್ಯಪ್ ಕಂಪನಿಯೊಂದು 17 ಲಕ್ಷ ರೂಪಾಯಿ ಪಾವತಿಸುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದರಿಂದ ಹಾಗೂ ಆ ವ್ಯಕ್ತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆದುಕೊಂಡು ಆತನ ಸಂಪರ್ಕ ಲಿಸ್ಟ್ಗೆ ಆಕ್ಷೇಪಾರ್ಹ ಫೋಟೋವನ್ನು ಸೋರಿಕೆ ಮಾಡಿದ ನಂತರ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಭೋಪಾಲ್ನಲ್ಲಿ ನಡೆದಿದೆ.
38 ವರ್ಷದ ವ್ಯಕ್ತಿ ಮತ್ತು ಹಾಗೂ 35 ವರ್ಷ ವಯಸ್ಸಿನ ಆತನ ಪತ್ನಿ ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಮತ್ತು ಅವರ ಮೂರು ಮತ್ತು ಒಂಬತ್ತು ವರ್ಷದ ಇಬ್ಬರು ಪುತ್ರರಿಗೆ ತಂಪು ಪಾನೀಯದಲ್ಲಿ ವಿಷ ಬೆರೆಸಿ ನೀಡಲಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಆತ್ಮಹತ್ಯೆ ಪತ್ರ ಮತ್ತು ಸಲ್ಫೇಟ್ ಮಾತ್ರೆಗಳ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ನಗರದ ನೀಲ್ಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವರು ಸಾಲ ಪಡೆದಿದ್ದರು, ಅದನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ನಾಲ್ಕು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸ್ ಉಪ ಕಮಿಷನರ್ (ಭೋಪಾಲ್) ಸಾಯಿ ಕೃಷ್ಣ ತೋಟಾ ಅವರು “ಮಕ್ಕಳು ಸಲ್ಫಾಸ್ ಸೇವಿಸಿದ ನಂತರ ಮೃತಪಟ್ಟಿದ್ದಾರೆ ಮತ್ತು ತಂದೆ-ತಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ವಶಪಡಿಸಿಕೊಂಡಿರುವ ಆತ್ಮಹತ್ಯಾ ಟಿಪ್ಪಣಿಯಲ್ಲಿ, ಆ ವ್ಯಕ್ತಿ ತನ್ನ ಕುಟುಂಬಕ್ಕೆ ಮತ್ತು “ಒಂದು ತಪ್ಪಿನಿಂದ” ಅಸಮಾಧಾನಗೊಂಡವರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಬರೆದಿದ್ದಾರೆ.
ಪೊಲೀಸರ ಪ್ರಕಾರ, ಆ ವ್ಯಕ್ತಿಗೆ ಏಪ್ರಿಲ್ನಲ್ಲಿ ಆನ್ಲೈನ್ ಉದ್ಯೋಗವನ್ನು ನೀಡುವುದಾಗಿ ಸಂದೇಶವನ್ನು ಕಳುಹಿಸಲಾಗಿತ್ತು – ಮತ್ತು ಆಫರ್ ಅನ್ನು ಟೆಲಿಗ್ರಾಮ್ನಲ್ಲಿ ಪುನರುಚ್ಚರಿಸಲಾಗಿತ್ತು. ತಾನು ಸ್ವಲ್ಪ “ಹೆಚ್ಚುವರಿ ಹಣ” ಗಳಿಸಲು ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ತನಗೆ ಸ್ವಲ್ಪ ಲಾಭ ಸಿಕ್ಕಿತು, ಆದರೆ ನಂತರ ತಾನು ಅದರಲ್ಲಿ ಸಿಲುಕಿಕೊಂಡೆ ಎಂದು ಆತ್ಮಹತ್ಯೆ ನೋಟ್ ಹೇಳುತ್ತದೆ.
ಮುಂದಿನ ಕೆಲವು ತಿಂಗಳುಗಳಲ್ಲಿ, ತನಗೆ ಆ ಕಂಪನಿಯಿಂದ ಸಾಲವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು ಮತ್ತು ತನ್ನ ಸಾಲವು ಕ್ರಮೇಣ ಹೆಚ್ಚಾಯಿತು. ಒಂದು ಹಂತದಲ್ಲಿ, ತನಗೆ ಎಎಂಐ ಕಟ್ಟಲು ತೊಂದರೆಯಾದಾಗ ಕಂಪನಿಯು ನನ್ನ ಫೋನ್ ಅನ್ನು ಹ್ಯಾಕ್ ಮಾಡಿತು ಮತ್ತು ನನ್ನ ಕುಟುಂಬ ಸದಸ್ಯರು ಮತ್ತು ಇತರ ಮೊಬೈಲ್ ನಂಬರಿಗೆ ನನ್ನ ಮಾರ್ಫ್ ಮಾಡಿದ ಚಿತ್ರಗಳನ್ನು ಹಂಚಿಕೊಂಡಿದೆ” ಎಂದು ವ್ಯಕ್ತಿ ಆತ್ಮಹತ್ಯೆ ಟಿಪ್ಪಣಿಯಲ್ಲಿ ಬರೆದಿದ್ದಾರೆ. ಸ್ಥಳೀಯ ಸೈಬರ್ ಕ್ರೈಂ ಕಚೇರಿಗೆ ಸುತ್ತಾಡಿದರೂ ಅಧಿಕಾರಿಗಳ ಅಲಭ್ಯತೆಯಿಂದಾಗಿ ಸೂಕ್ತ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವ್ಯಕ್ತಿ ಅದರಲ್ಲಿ ಉಲ್ಲೇಖಿಸಿದ್ದಾರೆ.
“ನನ್ನ ಮತ್ತು ನನ್ನ ಕುಟುಂಬಕ್ಕೆ ಭವಿಷ್ಯವಿದೆ ಎಂದು ಅನ್ನಿಸುತ್ತಿಲ್ಲ. ನಾನು ಯಾರಿಗೂ ಮುಖ ತೋರಿಸಲು ಯೋಗ್ಯನಲ್ಲ. ಇನ್ನು ನನ್ನ ಕುಟುಂಬವನ್ನು ನಾನು ಹೇಗೆ ನೋಡಬಲ್ಲೆ? ನನ್ನ ಕುಟುಂಬವನ್ನು ಒಟ್ಟಿಗೆ ಅಂತ್ಯಸಂಸ್ಕಾರ ಮಾಡಬೇಕು ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ, ವ್ಯಕ್ತಿ ತನ್ನ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡು ತನ್ನ ಸೊಸೆಗೆ ಕಳುಹಿಸಿದ್ದಾನೆ, ಇದು ತಮ್ಮ ಕೊನೆಯ ಚಿತ್ರ ಎಂದು ಹೇಳಿದ್ದಾನೆ.
“ನನ್ನ ಮಾವ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು … ಕೆಲವು ಸಮಯದ ಹಿಂದೆ, ನನ್ನ ಫೋನ್ನಲ್ಲಿ ಅಶ್ಲೀಲ ಚಿತ್ರ ಬಂದಿತು … ನಂತರ, ಆತ ತನ್ನ ಫೋನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಎಲ್ಲರಿಗೂ ಸಂದೇಶ ಕಳುಹಿಸಿದ್ದ” ಎಂದು ಅವರು ಹೇಳಿದರು.
ಅವನ ಫೋನ್ ಮತ್ತು ಲ್ಯಾಪ್ಟಾಪ್ ಹ್ಯಾಕ್ ಮಾಡಲಾಗಿದೆ. ಅವರು ಹಣವನ್ನು ಸುಲಿಗೆ ಮಾಡಲು ಮಾರ್ಫ್ ಮಾಡಿದ ಚಿತ್ರಗಳನ್ನು ಬಳಸಿದರು… ಆತ ಸಾಲದ ಅಪ್ಲಿಕೇಶನ್ ಕಂಪನಿಗೆ 17 ಲಕ್ಷ ರೂಪಾಯಿಗಳನ್ನು ಮರುಪಾವತಿಸಲು ತೀವ್ರ ಒತ್ತಡದಲ್ಲಿದ್ದ ಎಂದು ವ್ಯಕ್ತಿಯ ಹಿರಿಯ ಸಹೋದರ ಹೇಳಿದ್ದಾರೆ.
ಆರೋಪದ ಕೇಂದ್ರದಲ್ಲಿರುವ ಕಂಪನಿಯನ್ನು ತನಿಖೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದು, ದಂಪತಿ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಈಗ ತನಿಖೆ ನಡೆಸುತ್ತಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ತೆಗೆದುಕೊಳ್ಳುತ್ತೇವೆ. ಫೋನ್ ಮತ್ತು ಲ್ಯಾಪ್ಟಾಪ್ನ ಫೊರೆನ್ಸಿಕ್ ವಿಶ್ಲೇಷಣೆ ಜೊತೆಗೆ ಅವರ ಬ್ಯಾಂಕ್ ಖಾತೆ ಹೇಳಿಕೆಗಳ ವಿಶ್ಲೇಷಣೆಯೊಂದಿಗೆ ಅಪರಾಧಿ ಯಾರೆಂದು ಕಂಡುಹಿಡಿಯಲು ತನಿಖೆ ಕೈಗೊಳ್ಳಲಾಗುವುದು ಎಂದು ತೋಟಾ ಹೇಳಿದರು.
ಕಂಪನಿಯ ರುಜುವಾತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಮೃತರು ತಾನು ಕೊಲಂಬಿಯಾ ಮೂಲದ ಈ ಲೋನ್ ಆ್ಯಪ್ ಕಂಪನಿಯಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇದು ನಿಜವಾದ ಕಂಪನಿಯೇ ಅಥವಾ ಅಲ್ಲವೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಕಂಪನಿಯ ಹೆಸರೂ ಸ್ಪಷ್ಟವಾಗಿಲ್ಲ. ಈ ಅಂಶಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ