ನವದೆಹಲಿ: ಭಾರತದ ಚಂದ್ರಯಾನ-3 ಮಿಷನ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾರಂಭಿಸಲಾಯಿತು. ಕೌಂಟ್‌ಡೌನ್ ನಂತರ, ಚಂದ್ರಯಾನ-3 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಮತ್ತು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಅದರ ನಂತರ ಭಾರತವು ಈಗ ವಿಶ್ವದಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸಲು ಬಹಳ ಹತ್ತಿರದಲ್ಲಿದೆ.
ಒಂದು ವೇಳೆ ಚಂದ್ರಯಾನ-3 ಚಂದ್ರನ ಮೇಲ್ಮೈಗೆ ಸುರಕ್ಷಿತ ಲ್ಯಾಂಡಿಂಗ್ ಮಾಡಿದರೆ, ಈ ಸಾಧನೆ ಮಾಡಿದ ವಿಶ್ವದ ಆಯ್ದ ಮೂರು ದೇಶಗಳ ಪಟ್ಟಿಗೆ ನಾಲ್ಕನೇ ದೇಶವಾಗಿ ಭಾರತವೂ ಸೇರಲಿದೆ.
ಉಡಾವಣೆಯ ನಂತರ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, “ಭಾರತಕ್ಕೆ ಅಭಿನಂದನೆಗಳು, ಚಂದ್ರಯಾನವು ಚಂದ್ರನತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ. ಇಸ್ರೋ (ISRO) ಪ್ರಕಾರ, ಚಂದ್ರಯಾನ-3 ನೌಕೆ ಅದನ್ನು ಹೊತ್ತೊಯ್ಯುವ LVM3-M4 ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ.
ಲಿಫ್ಟ್-ಆಫ್ ಆದ ಹದಿನಾರು ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು ಮತ್ತು ಭೂಮಿಗೆ ಸಮೀಪವೆಂದರೆ 170 ಕಿಮೀ ಹತ್ತಿರ ಮತ್ತು ದೂರವೆಂದರೆ 36,500 ಕಿಮೀ ಅಂತರದಲ್ಲಿ ಚಂದ್ರನ ಕಕ್ಷೆಯ ಕಡೆಗೆ ಚಲಿಸುವ ದೀರ್ಘವೃತ್ತದ ಚಕ್ರದಲ್ಲಿ ಸುಮಾರು 5-6 ಬಾರಿ ಭೂಮಿಯನ್ನು ಸುತ್ತುತ್ತದೆ.ಇಸ್ರೋ ವಿಜ್ಞಾನಿಗಳ ಪ್ರಕಾರ ಎಲ್ಲವೂ ಸರಿಯಾಗಿ ನಡೆದರೆ ಚಂದ್ರಯಾನ-3 ನೌಕೆ ಆಗಸ್ಟ್ ಅಂತ್ಯದಲ್ಲಿ ಚಂದ್ರನ ಮೇಲೆ ಇಳಿಯಲಿದೆ.
LVM3 ರಾಕೆಟ್‌ನ ಎಲ್ಲಾ ಮೂರು ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿದವು ಹಾಗೂ ಅದು 100% ಉಡಾವಣೆ ಯಶಸ್ಸಿನ ದಾಖಲೆಯನ್ನು ಮುಂದುವರೆಸಿತು. ಆಂಧ್ರಪ್ರದೇಶದಿಂದ ಉಡಾವಣೆಯಾದ 900 ಸೆಕೆಂಡುಗಳ ನಂತರ ಬಾಹ್ಯಾಕಾಶ ನೌಕೆಯು ಚಂದ್ರಯಾನ-3 ಮಿಷನ್ ಅನ್ನು ಬಾಹ್ಯಾಕಾಶದಲ್ಲಿ ನಿಯೋಜಿಸಿತು. ಇಸ್ರೋ ಈಗ ಮುಂದಿನ ದಿನಗಳಲ್ಲಿ ಚಂದ್ರನ ತಲುಪುವ ಹಾದಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಯಲ್ಲಿ ಇಡಲಿದೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಾವಾಗ ಚಂದ್ರನನ್ನು ತಲುಪುತ್ತದೆ?
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಆಗಮಿಸಲಿದೆ ಮತ್ತು ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಬಾಹ್ಯಾಕಾಶ ನೌಕೆಯು ಚಂದ್ರನನ್ನು ತಲುಪಿದ ನಂತರ, ಇಸ್ರೋ ಕಕ್ಷೆಯನ್ನು ಕಡಿಮೆ ಮಾಡಲು ಪ್ರಾರಂಭಿಸುತ್ತದೆ, ಚಂದ್ರನ ಗುರುತ್ವಾಕರ್ಷಣೆಯಿಂದ ಅದನ್ನು ಎಳೆಯಲು ಚಂದ್ರನ ಮೇಲಿನ ಎತ್ತರವನ್ನು ಕಡಿಮೆ ಮಾಡುತ್ತದೆ.
ಲೂನಾರ್ ಆರ್ಬಿಟ್ ಇನ್ಸರ್ಷನ್ (LOI) ಎಂದು ಕರೆಯಲ್ಪಡುವ ಇದು ಬಾಹ್ಯಾಕಾಶ ನೌಕೆಯನ್ನು ನಿಧಾನಗೊಳಿಸಲು ಮತ್ತು ಚಂದ್ರನ ಗುರುತ್ವಾಕರ್ಷಣೆಯಿಂದ ಅದನ್ನು ಸೆಳೆಯಲು ಅನುವು ಮಾಡಿಕೊಡಲು ನಿಖರವಾದ ಎಂಜಿನ್ ಫೈರಿಂಗ್‌ಗಳನ್ನು ಒಳಗೊಂಡಿರುತ್ತದೆ.
ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಗೆ ಪ್ರವೇಶಿದಾಗ, ಇಸ್ರೋ ಆಗಸ್ಟ್ ಅಂತ್ಯದ ವೇಳೆಗೆ ಅಪಾಯಕಾರಿ ಲ್ಯಾಂಡಿಂಗ್ ಅನುಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕ್ಷಣದಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ನಿಗದಿತ ದಿನಾಂಕ ಆಗಸ್ಟ್ 23 ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ