ಮೈಸೂರು : ತಾಲೂಕಿನ ಮೀನಾಕ್ಷಿಪುರ ಬಳಿ ಕೆ.ಆರ್.ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತರು ವಿದ್ಯಾರ್ಥಿಗಳು ಮೈಸೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಮೃತ ವಿದ್ಯಾರ್ಥಿಗಳನ್ನು ಪಡುವಾರಹಳ್ಳಿಯ ಭರತ್(20), ರಾಮಕೃಷ್ಣ ನಗರದ ಪ್ರವೀಣ್ (20), ಹೆಬ್ಬಾಳಿನ ಸೂರ್ಯಬೇಕರಿಯ ವರುಣ್(21) ಮೃತರು. ಮತ್ತಿಬ್ಬರು ವಿದ್ಯಾರ್ಥಿಗಳಾದ ಮನೋಜ ಮತ್ತು ವಿಘ್ನೇಶ ಎಂಬವರು ಪಾರಾಗಿದ್ದಾರೆ.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕಾಲೇಜಿನ ಸ್ನೇಹಿತರು ಮೂರು ಬೈಕ್‌ಗಳಲ್ಲಿ ಮೀನಾಕ್ಷಿಪುರ ಬಳಿ ಕೆಆರ್‌ಎಸ್ ಹಿನ್ನೀರಿಗೆ ತೆರಳಿದ್ದಾರೆ. ಈ ವೇಳೆ ಈಜಲು ನೀರಿಗೆ ಇಳಿಸಿದ್ದಾರೆ. ನೀರಿನಲ್ಲಿ ಮುಂದೆ ಮುಂದೆ ಸಾಗಿದ್ದರಿಂದ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ