ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಹಿಳೆಯೊಬ್ಬಳು ಮದುವೆಯ ಹೆಸರಿನಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 27 ಪುರುಷರನ್ನು ವಂಚಿಸಿದ್ದಾಳೆ…! ಬುದ್ಗಾಮ್ ಜಿಲ್ಲೆಯ 12 ಜನರು ತಮ್ಮ ಪತ್ನಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿ ತಮ್ಮ ಜೊತೆಗಿರುವ ಮಹಿಳೆಯ ಫೋಟೋವನ್ನು ಪೊಲೀಸರಿಗೆ ತೋರಿಸಿದ ನಂತರ ಅವಳಿ ಎಲ್ಲರಿಗೂ ಮೋಸ ಮಾಡಿರುವುದು ಗೊತ್ತಾಗಿದೆ. ಏಕೆಂದರೆ ಅವರ ಎಲ್ಲಾ ಫೋಟೋಗಳಲ್ಲಿ ಮಹಿಳೆ ಒಬ್ಬಳೇ ಇದ್ದಳು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಬುದ್ಗಾಮ್‌ನ ಅಲ್ತಾಫ್ ಮೀರ್ ಎಂಬ ವ್ಯಕ್ತಿ ಮಧ್ಯವರ್ತಿ ಮೂಲಕ ಮಹಿಳೆಯನ್ನು ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ ಆಕೆಗೆ ಮೆಹರ್ (ವಧು ದಕ್ಷಿಣೆ) ಅಡಿಯಲ್ಲಿ 2 ಲಕ್ಷ ರೂ. ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನೂ ನೀಡಿದ್ದಾನೆ.
ಅಲ್ತಾಫ್ ಜೊತೆ ಎರಡು ತಿಂಗಳು ಚೆನ್ನಾಗಿಯೇ ಇದ್ದಳು. ಆದರೆ, ಒಂದು ದಿನ ತಂದೆ-ತಾಯಿಯನ್ನು ನೆನಪುಮಾಡಿಕೊಂಡು ತಾಐಿ ಮನೆಗೆ ಹೋಗಿ ಬರುವುದಾಗಿ ಹೇಳಿ ರಾಜೂರಿಗೆ ಹೋದಳು. ಆದರೆ, ಹಿಂತಿರುಗಲಿಲ್ಲ. ದಿನಗಳು ಕಳೆದರೂ ಅವಳು ಹಿಂತಿರುಗಿ ಬಾರದೆ ಇದ್ದುದರಿಂದ ಮೀರ್ ಅವಳು ಹೇಳಿದ ಜಾಗಕ್ಕೆ ಹೋದನು. ಆದರೆ, ಆಕೆಯ ಹೆಸರಿನವರು ಅಲ್ಲಿ ಯಾರೂ ಇಲ್ಲ ಎಂದು ತಿಳಿದುಬಂತು. ಆಗ ಅಲ್ತಾಫ್ ಮೀರ್ ಗೆ ತಾನು ಮೋಸ ಹೋಗಿರುವುದು ಅರಿವಾಯಿತು. ಮನೆಯಿಂದ ಹೊರಡುವಾಗ ಅಪಾರ ಪ್ರಮಾಣದ ಚಿನ್ನಾಭರಣಗಳ ಜೊತೆಗೆ ಅವಳು ಆತನಿಗೆ ತಿಳಿಯದಂತೆ ಅಪಾರ ಪ್ರಮಾಣದ ನಗದನ್ನು ತೆಗೆದುಕೊಂಡು ಹೋಗಿದ್ದಳು.
ಅದೇ ರೀತಿ ಬುದ್ಗಾಮ್ ಜಿಲ್ಲೆಯೊಂದರಲ್ಲೇ ಆಕೆ 12 ಮಂದಿಯನ್ನು ಮದುವೆಯಾಗಿದ್ದಾಳೆ. 20 ದಿನಗಳ ಕಾಲ ವಿವಾಹಿತ ಪತ್ನಿಯಂತೆ ಇದ್ದು, ಬಳಿಕ ಅವರಿಂದ ಹಣ ಮತ್ತು ಚಿನ್ನವನ್ನು ಕದಿಯುತ್ತಿದ್ದಳು. ಇತ್ತೀಚೆಗಷ್ಟೇ ಅಪಹರಣಕ್ಕೊಳಗಾಗಿದ್ದ 12 ಮಂದಿ ತಮ್ಮ ಪತ್ನಿಯ ಫೋಟೋ ಕೊಟ್ಟು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಆದರೆ, ಇವರೆಲ್ಲರ ಫೋಟೋದಲ್ಲಿದ್ದ ಮಹಿಳೆ ಒಂದೇ ಆಗಿದ್ದರಿಂದ ಪೊಲೀಸರಿಂದ ಅವರಿಗೆ ಅಸಲಿ ವಿಷಯ ತಿಳಿದು ಬಂದಿದೆ.
ಮದುವೆಯ ಹೆಸರಲ್ಲಿ ಅವಳು ಎಲ್ಲರಿಗೂ ಮೋಸ ಮಾಡಿದ್ದಳು. ಈ ವಿಷಯ ಹೊರಬೀಳುತ್ತಿದ್ದಂತೆ ಆಕೆಯಿಂದ ಮೋದ ಹೋದವರು ಒಬ್ಬೊಬ್ಬರಾಗಿ ಹೊರಬರುತ್ತಿದ್ದಾರೆ. ಇದುವರೆಗೆ 27 ಪುರುಷರನ್ನು ವಂಚಿಸಿದ ಮಹಿಳೆ ಶಾಹೀನ್ ಬಗ್ಗೆ ದೂರು ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆಕೆಗಾಗಿ ಪೊಲೀಸರು ಈಗ ಬಂಧಿಸಿದ್ದಾರೆ.
ಆದರೆ, ಕೆಲವರು ಸಶಸ್ತ್ರ ಗ್ಯಾಂಗ್ ಕಟ್ಟಿಕೊಂಡು ಪ್ಲಾನ್ ಮಾಡಿಕೊಂಡು ಇದೆಲ್ಲ ಮಾಡುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು. ಮೀರ್ ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 120 ಬಿ ಅಡಿಯಲ್ಲಿ ಮಧ್ಯ ಕಾಶ್ಮೀರದ ಬುದ್ಗಾಮ್‌ನಲ್ಲಿ ಶಾಹೀನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜುಲೈ 14 ರಂದು ಪೊಲೀಸರು ಆಕೆಯನ್ನು ಬಂಧಿಸಿದರು. ಅದೇ ದಿನ, ಶಾಹೀನ್ ನಿರೀಕ್ಷಣಾ ಜಾಮೀನು ಕೋರುತ್ತಿರುವುದನ್ನು ಕೇಳಿದ ಪುರುಷರ ಗುಂಪು ಬುದ್ಗಾಮ್ ಕೋರ್ಟ್ ಸಂಕೀರ್ಣದಲ್ಲಿ ಜಮಾಯಿಸಿತು. ತಮ್ಮನ್ನು ಮದುವೆಯಾದ ನಂತರ ಆಕೆ ತಕ್ಷಣ ತಮ್ಮ ಮನೆಗಳಿಂದ ನಾಪತ್ತೆಯಾಗಿದ್ದಾಳೆ ಎಂದು ಅವರು ದೂರಿದ್ದಾರೆ.
ಮುಸ್ಲಿಮರು ಒಪ್ಪಂದದ ವಿವಾಹವನ್ನು ಹೊಂದಿದ್ದಾರೆ ಮತ್ತು ಮದುವೆಯ ಸಮಯದಲ್ಲಿ ನಿಗದಿಪಡಿಸಿದ ಮೊತ್ತವನ್ನು ವರನು ವಧುವಿಗೆ ಪಾವತಿಸಬೇಕು. ಮದುವೆಯಾದ ತಿಂಗಳೊಳಗೆ ಶಾಹೀನ್ ವಧು ದಕ್ಷಿಣೆ ಹಾಗೂ ಇತರ ಹಣದೊಂದಿಗೆ ಪರಾರಿಯಾಗುತ್ತಿದ್ದಳು.
ನಿಮ್ಮ ಕಾಮೆಂಟ್ ಬರೆಯಿರಿ